Ticker

6/recent/ticker-posts

Ad Code

Responsive Advertisement

ಭಾವ್ಯಕ್ಯತೆಗೆ ಇನ್ನೊಂದು ಹೆಸರೇ ಹಿರೇಹಾಳ್ ಇಬ್ರಾಹಿಂ ಸಾಹೇಬರು-ಕಾಪು ರಾಮಚಂದ್ರರೆಡ್ಡಿ

ಬಳ್ಳಾರಿ,ಮೇ.13-ಹಿರೇಹಾಳದ ಇಬ್ರಾಹಿಂ ಸಾಬಹೇಬರು ಎಲ್ಲ ಧರ್ಮಗಳ ಸಾರವೂ, ಎಲ್ಲರೂ ಒಂದೇ ಎನ್ನುವ ಭಾವ ಹೊಂದಿದ್ದಲ್ಲದೇ ಹೇಳಿದಂತೆಯೇ ನಡೆದುಕೊಂಡವರು. ಅವರ ಒಡನಾಡಿಯಾಗಿ ಅವರಿಂದ ಭಾವ್ಯಕ್ಯತೆಯನ್ನು ಆಸ್ವಾದಿಸಿರುವ ಭಾಗ್ಯಶಾಲಿಗಳು ನಾವು ಎಂದು ಆಂಧ್ರಪ್ರದೇಶ ಸರ್ಕಾರದ ಮುಖ್ಯ ಸಚೇತಕರು ಆಗಿರುವ ರಾಯದುರ್ಗ ಕ್ಷೇತ್ರದ ಶಾಸಕ ಕಾಪು ರಾಮಚಂದ್ರ ರೆಡ್ಡಿ ಹೇಳಿದರು.

ಆಂಧ್ರದ ಗಡಿಯಲ್ಲಿರುವ ಡಿ.ಹಿರೇಹಾಳ ಗ್ರಾಮದ ನೀಲಕಂಠೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಿರೇಹಾಳ ಇಬ್ರಾಹಿಂ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಡಿ.ಹಿರೇಹಾಳದ ದಿ.ಇಬ್ರಾಹಿಂ ಸಾಹೇಬರ 91ನೇ ವರ್ಷದ ಜನ್ಮ ದಿನಾಚರಣೆ ಮತ್ತು ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ಅಂತರ್ಜಾಲ (ವೆಬ್‍ಸೈಟ್) ಉದ್ಘಾಟಿಸಿ ಮಾತನಾಡಿದರು.

ಹಿರೇಹಾಳ ಇಬ್ರಾಹಿಂ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹೆಚ್.ಇ. ದಾದ ಖಲಂದರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮ ತಂದೆಯವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯುತ್ತಿದ್ದೇವೆ. ಈ ನಿಟ್ಟಿನಲ್ಲಿ ತಂದೆಯವರ ಆದರ್ಶಗಳನ್ನು ಪಾಲಿಸುತ್ತಾ ಅವರ ಸ್ಮರಣೆಯನ್ನು ನಿತ್ಯ ನಿರಂತರವಾಗಿರಿಸಲು ವಿವಿಧ ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಡಿ.ಹಿರೇಹಾಳ ಮಂಡಲದ ಸಂಚಾಲಕ ಅಧಿಕಾರಿ ಹೊನ್ನೂರುಸ್ವಾಮಿ, ಆಂಧ್ರಪ್ರದೇಶ ಎಸ್‍ಟಿ ಪಂಗಡ ರಾಜ್ಯ ಕಾರ್ಯದರ್ಶಿ ವಿ.ಭೋಜರಾಜ ನಾಯಕ, ಅಲ್ಪಸಂಖ್ಯಾತ ಘಟಕದ ರೆಹಮತ್ ಉಲ್ಲಾ, ಚಿತ್ರದುರ್ಗ ವಿಶ್ವ ಮಾನವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನೀಲಕಂಠದೇವರು, ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಸಿಎಂ ಇಬ್ರಾಹಿಂ ಬಾಬು, ಉದ್ಯಮಿ ಹೆಚ್‍ಆರ್‍ಜಿ ಸತ್ಯನಾರಾಯಣ ಇನ್ನಿತರರು ಪಾಲ್ಗೊಂಡಿದ್ದರು.ಕರ್ನಾಟಕ ರಾಜ್ಯ ನದಾಫ್ ಮತ್ತು ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಹೆಚ್ ಜಲೀಲ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ನಜೀರ್ ಸಾಬ್ ಅವರು ಖುರ್-ಆನ್ ಶ್ಲೋಕಗಳನ್ನು ಪಠಿಸಿದರೆ, ಕುಮಾರಿ ಸಾಯಿಶೃತಿ ಹಂದ್ಯಾಳು ಅವರು ದೇವರ ನಾಮಗಳು, ಕೀರ್ತನೆಗಳು, ವಚನಗಳನ್ನು ಹಾಡಿದರು.ಇವರಿಗೆ ತಬಲ ಯೋಗೀಶ್ ಬಣಕಾರ ಹಾಗು ಕ್ಯಾಷೀಯೋ ಪುಟ್ಟರಾಜು ಸಾತ್ ನೀಡಿದರು ಬಳ್ಳಾರಿ  ಶಿಕ್ಷಕರಾದ ಬಸವರಾಜ ಅಮಾತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.



 

Post a Comment

0 Comments

Ad Code

Responsive Advertisement