ಬೆಂಗಳೂರಿನ ಪ್ರಕಾಶನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ನೂತನ ಕಟ್ಟಡದ ನಿರ್ಮಾಣದ ನಿಧಿಗಾಗಿ ರಾಯರ ಮಠ ಪ್ರಕಾಶನಗರ ಈ ಮುಖಪುಟ ಸಮೂಹದಲ್ಲಿ ಮೇ 21, ಶನಿವಾರ ಸಂಜೆ ಏರ್ಪಡಿಸಿದ್ದರು.
ದಾಸವಾಣಿ ಕಾರ್ಯಕ್ರಮದಲ್ಲಿ ಶ್ರೀಮತಿ ಸುಷ್ಮಾ ಶ್ರೇಯಸ್ ಅವರು, ಮೊದಲಿಗೆ, "ಗಜವದನ ಪಾಲಿಸೋ" ಎಂಬ ವಾದಿರಾಜರ ಕೃತಿಯೊಂದಿಗೆ ಆರಂಭಿಸಿ, "ತುಂಗಾ ತೀರ ವಿರಾಜಂ", "ಗುರುರಾಘವೇಂದ್ರರ", "ಎಂಥಾ ಚೆಲುವಗೆ ಮಗಳನು ಕೊಟ್ಟನು", "ಬಿಡುವೆನೇನಯ್ಯಾ ಹನುಮ", "ಪಾಲಿಸೆ ಎನ್ನ ಶ್ರೀ ಮಹಾಲಕ್ಷ್ಮಿ", " ವೆಂಕಟಾಚಲ ನಿಲಯಂ", "ದೃಷ್ಟಿ ನಿನ್ನ ಪಾದದಲ್ಲಿ", "ಕಾಯಲಾರೆನೋ ಕೃಷ್ಣ", "ಮುಯ್ಯಕೆ ಮುಯ್ಯ ತೀರಿತೋ", "ಬೈ ಬೈ ತನಕ ಊಟದ ಸಮಯ ಉಂಡಮೇಲೆ ಶಯನ", "ಕಲ್ಲಿನಿಂದಲೇ ಸರ್ವವಾಹುದು", "ಎನ್ನ ಮನದ ಡೊಂಕ ತದ್ದಿಸೋ", "ಜಪವ ಮಾಡಿದರೇನು ತಪವ ಮಾಡಿದರೇನು" ಹೀಗೆ ವಿವಿಧ ಹರಿದಾಸರ ಕೃತಿಗಳನ್ನು ಪ್ರಸ್ತುತ ಪಡಿಸಿ, ಕಾರ್ಯಕ್ರಮದ ಕೊನೆಯಲ್ಲಿ ವಾದಿರಾಜರ ರಚನೆಯಾದ "ಜಯಮಂಗಳಂ ನಿತ್ಯ ಶುಭಮಂಗಳಂ" ಎಂಬ ಕೃತಿಯನ್ನು ಹಾಡಿ, ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

0 Comments