Ticker

6/recent/ticker-posts

Ad Code

Responsive Advertisement

ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ರೆಸಾರ್ಟ್ ಸೇರಿದ ಪಂಚಾಯಿತಿ ಸದಸ್ಯರು!!!*

 *ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ರೆಸಾರ್ಟ್ ಸೇರಿದ ಪಂಚಾಯಿತಿ ಸದಸ್ಯರು!!!*



ದೊಡ್ಡಬಳ್ಳಾಪುರ :ತಾಲೂಕಿನ ತೂಬಗೆರೆ ಪಂಚಾಯಿತಿ   ಅಧ್ಯಕ್ಷ ಸುರೇಶ್ ಬಾಬು ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು  ಕೆಲ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಂಡು ಉಪವಿಭಾಗಾಧಿಕಾರಿಗಳಿಗೆ ಅವಿಶ್ವಾಸ ಸೂಚನಾ ಪತ್ರ ಕಳುಹಿಸಿದ ಹಿನ್ನೆಲೆಯಲ್ಲಿ. ಮಾನ್ಯ ಉಪವಿಭಾಗಾಧಿಕಾರಿಗಳು ಇದೇ ತಿಂಗಳ 24 ನೇ ತಾರೀಖಿನಂದು ಅವಿಶ್ವಾಸ ನಿರ್ಣಯದ ಮತದಾನ ಪ್ರಕ್ರಿಯೆ ದಿನಾಂಕ ಗೊತ್ತು ಪಡಿಸಿದ್ದರು.

ತನ್ನ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಅಧ್ಯಕ್ಷ ಸುರೇಶ್ ಬಾಬು ರವರು ಕೆಲ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ ಸದಸ್ಯರನ್ನು ಹೈಜಾಕ್ ಮಾಡಿ ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ಇರಿಸಿದ್ದಾರೆ ಎಂದು ವದಂತಿಗಳು ಹರಡಿವೆ. ಒಟ್ಟು 21 ಸದಸ್ಯಬಲದ ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಜಾತಿಗೆ ಮೀಸಲಾತಿ ಇದ್ದು ಸದ್ಯ ಸುರೇಶ್ ಬಾಬು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು.

ಅಧಿಕಾರ ವಿಕೇಂದ್ರೀಕರಣ ಹಾಗೂ ಸ್ಥಳೀಯ ಮಟ್ಟದಲ್ಲಿ ಉತ್ತಮ ಆಡಳಿತ ನೀಡಲೆಂದು ಮಹತ್ವಾಕಾಂಕ್ಷೆಯಿಂದ ಸ್ಥಾಪಿತವಾದ ಗ್ರಾಮಪಂಚಾಯಿತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗಾಗಿ ನಡೆಯುವ ರಾಜಕೀಯ ದೊಂಬರಾಟ ಗಳಿಂದ  ನಾಗರಿಕರು ಬೇಸರಗೊಂಡಿದ್ದಾರೆ.

ಚುನಾವಣೆಗೂ ಮುನ್ನ ಗ್ರಾಮದ ಅಭಿವೃದ್ಧಿಯೇ ನಮ್ಮ ಧ್ಯೇಯವಾಕ್ಯವೆಂದು ಮತ ಕೇಳಿ, ಮತಪಡೆದು ಗ್ರಾಮದ ಅಭಿವೃದ್ಧಿ ಕೈಗೊಳ್ಳುವುದರ ಬದಲು ರಾಜಕೀಯ ಹಿತಾಸಕ್ತಿಗಳಿಗೆ ಹಾಗೂ ಹಣದ ಆಮಿಷಕ್ಕೆ ಬಲಿಯಾಗಿ ಅಭಿವೃದ್ಧಿ ಮಾಡುವುದರ ಬದಲು ಈ ರೀತಿ ರಾಜಕೀಯದಲ್ಲಿ ಡೊಂಬರಾಟ ಪಾಲ್ಗೊಳ್ಳುವುದನ್ನು ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ಪಂಚಾಯಿತಿ ಸದಸ್ಯರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.

Post a Comment

0 Comments

Ad Code

Responsive Advertisement