ಬೆಂಗಳೂರು ನಗರಜಿಲ್ಲೆಯ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2021-2026ನೇ ಸಾಲಿನ ಅವಧಿಯ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಇದೇ ದಿನಾಂಕ: 14-05-2022ನೇ ಶನಿವಾರ ವಿಜೃಂಭಣೆಯಿಂದ ಜರುಗಿತು.
ಬೆಂಗಳೂರಿನ ಹೆಚ್.ಬಿ.ಆರ್. ಬಡಾವಣೆ ಕಾಚರಕನಹಳ್ಳಿಯ ಶ್ರೀ ಸಾಯಿಕಲಾಮಂದಿರ, ದಕ್ಷಿಣ ಅಯೋಧ್ಯೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಹಲವಾರು ಗಣ್ಯಾತಿಗಣ್ಯರು ಆಗಮಿಸಿದ್ದರು.
ಜ್ಯೋತಿ ಕನ್ನಡ ಮಾಧ್ಯಮ ಶಾಲೆಯ ವಿದುಶಿ ಶ್ರೀಮತಿ ಸಿ.ಬಿ. ಜಯಂತಿ ಅವರ ತಂಡದಿಂದ ನಾಡಗೀತೆಯನ್ನು ಹಾಡಲಾಯಿತು.
ಡಾ.ರಾಜ್‍ಯೋಗ ವಿದ್ಯಾಲಯದ ತಂಡವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿತು.
ಮುಂದುವರೆದಂತೆ, ನಾಟ್ಯ ಕುಸುಮಾಂಜಲಿ ಸಾಂಸ್ಕøತಿಕ ವೇದಿಕೆಯ ವಿದೂಷಿ ಶ್ರೀಮತಿ ಗೀತಾ ಶ್ರೀನಾಥ್ (ನವ್ಯನಾಟ್ಯ ಸಂಗಮ, ಕಲಾತರಬೇತಿ ಸಂಸ್ಥೆ, ಲಿಂಗರಾಜಪುರ) ಅವರಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲ0ಗಿತ್ತು.
ಮುಖ್ಯಸ್ತಂಭವಾಗಿ ಈ ಕಾಯ್ಕ್ರಮಕ್ಕೆ ಸ್ಥಳೀಯ ಶಾಸಕರಾದ ಕೆ.ಜೆ.ಜಾರ್ಜ್ ಅವರು ಆಗಮಿಸಿದ್ದರು. ಸಮಾರಂಭವನ್ನು ಉದ್ಘಾಟಿಸಿದ ಮಾತನಾಡಿದ ಕೆ.ಜೆ.ಜಾರ್ಜ್ ಅವರು, ಕನ್ನಡದ ಬಗ್ಗೆ ಕನ್ನಡ ಸಾಹಿತ್ಯ, ಭಾಷೆಯ ಬಗ್ಗೆ ಹಿತ ನುಡಿಗಳನ್ನಾಡಿದರು. ನಾನು, ಹೆಮ್ಮೆಯ ಕನ್ನಡಿಗ ನಾನು ಕನ್ನಡ ವಂಶದವನೇ ಎಂದು ಹೆಮ್ಮೆಯಿಂದ ಸಭಿಕರ ಮುಂದೆ ತಮ್ಮನ್ನು ತಾವು ಕನ್ನಡಿಗ ಎಂದರು. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಭವನ ಶೀಘ್ರವೇ ನಿರ್ಮಿಸಿ ನಾನೇ ಖುದ್ದಾಗಿ ಉದ್ಘಾಟಿಸಲು ಪಣ ತೊಟ್ಟಿದ್ದೇನೆ ಎಂದರು.
ವಾರ್ತಾಜಾಲ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ, ಹಿಂದಿ ಹೇರಿಕೆ ವಿರುದ್ಧ ಕೇಳಿದ ಪ್ರಶ್ನೆಗೆ ‘ಕನ್ನಡ ನಮ್ಮ ಮನೆ ಭಾಷೆ, ಮಾತೃ ಭಾಷೆಯೂ ಹೌದು, ಯಾವುದೇ ಸರ್ಕಾರವು ಹಿಂದಿ ಭಾಷೆ ಹೇರಿದರೂ ಭಯ ಬೀಳುವ ಪ್ರಶ್ನೆಯೇ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡ ಭಾಷೆಯೇ ಆಳ್ವಿಕೆ ಭಾಷೆ ಹಾಗಾಗಿ ಯಾವುದೇ ಭಾಷೆ ಬಂದರೂ ಕನ್ನಡಕ್ಕೆ ತನ್ನದೇ ಆದ ಗೌರವ ಇದ್ದೇ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ನಗರ ಜಿಲ್ಲೆ ಕಸಾಪ ಕಾರ್ಯಕಾರಿ ಸಮಿತಿಯ ಶ್ರೀಯುತ ಶ್ರೀ ಎಂ. ಪ್ರಕಾಶಮೂರ್ತಿ ಅವರು ವಹಿಸಿದ್ದರು. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಕಸಾಪ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಶ್ರೀ ವರ್ಧಮಾನ ಕಳಸೂರು ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕನ್ನಡ ಸಾಹಿತ್ಯ ಪರಿಷತ್‍ನ ಸದಸ್ಯರು, ಕನ್ನಡ ಕಾರ್ಯಕರ್ತರು, ಕನ್ನಡ ಹೋರಾಟಗಾರರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.



























0 Comments