ಬೆಂಗಳೂರು: ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿರುವ ಹಾರಿಙಂಟಲ್ ಕಾಯಿಲ್ ಮೌಂಟಿ0ಗ್ (Horizontal Coil Mounting) ವಿನ್ಯಾಸದಿಂದ ವೆರ್ಟಿಕಲ್ ಕಾಯಿಲ್ ಮೌಂಟಿ0ಗ್ (Vertical Coil Mounting) ವಿನ್ಯಾಸಕ್ಕೆ ಬದಲಿಸುವ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 15-05-2022 ರಿಂದ 28-06-2022 (45 ದಿನಗಳು) ವರೆವಿಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಈ ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗಾಗಿ ತರುವ ಸಾರ್ವಜನಿಕರು ಸಮೀಪದಲ್ಲಿರುವ ಪೀಣ್ಯ, ಮೇಡಿ ಅಗ್ರಹಾರ ಅಥವಾ ಕೆಂಗೇರಿ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಎಂದು ರಾಜರಾಜೇಶ್ವರಿ ನಗರ ವಲಯ ಕಾರ್ಯಪಾಲಕ ಇಂಜಿನಿಯರ್ (ವಿದ್ಯುತ್) ರವರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ 9480688530 ಮೊ.ಸಂ ಸ0ಪರ್ಕಿಸಿ.
Varthajala daily, Malleshwaram, Bengaluru

0 Comments