ರಾಜಸ್ಥಾನದ ಜೈಪುರದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ರಾಷ್ಟ್ರ ಮಟ್ಟದ ಸಭೆಯಲ್ಲಿ 'ಭಾಷೆ ವೈವಿಧ್ಯತೆಯು ಭಾರತದ ಹೆಮ್ಮೆ ಹಾಗೂ ಸ್ಫೂರ್ತಿ ಆಗಿದೆ. ಪ್ರಾದೇಶಿಕ ಭಾಷೆಗಳಲ್ಲಿ ದೇಶದ ಸಿರಿವಂತ ಸಂಸ್ಕøತಿಯ ಪ್ರತಿಬಿಂಬವನ್ನು ಕಾಣುತ್ತದೆ’. ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವುದು ಅತ್ಯಂತ ಶ್ಲಾಘನೀಯವಾದದ್ದು. ದೇಶದ ವಿವಿಧತೆ, ಬಹುತ್ವವನ್ನು ಸಮರ್ಥಿಸಿದ. ಪ್ರಧಾನಿಯವರನ್ನು ಕನ್ನಡ ಗೆಳೆಯರ ಬಳಗವು ಸ್ವಾಗತಿಸುತ್ತದೆ.
ಪ್ರಧಾನಿಯವರು ತಮ್ಮ ಹೇಳಿಕೆಗೆ ಪೂರಕವಾಗಿ ಸಂವಿಧಾನದ 8ನೇ ಪರಿಚ್ಛೇಧದಲ್ಲಿರುವ ಎಲ್ಲ ಭಾಷೆಗಳನ್ನು ರಾಷ್ಟ್ರಭಾಷೆಗಳು ಎಂದು ಘೋಷಿಸಬೇಕು. ಎಲ್ಲ ದೇಸಿಯ ಭಾಷೆಗಳಿಗೆ ಸಮಾನ ಅವಕಾಶ ಮತ್ತು ಸವಲತ್ತುಗಳನ್ನು ನೀಡಬೇಕು. ಭಾರತ ಸರ್ಕಾರ ನಡೆಸುವ ಎಲ್ಲ ಸ್ಮರ್ಧಾತ್ಮಕ ಪರೀಕ್ಷೆಗಳು ಎಲ್ಲ ರಾಜ್ಯ ಬಾಷೆಗಳಲ್ಲಿಯೂ ನಡೆಯುವಂತಾಗಬೇಕು ಮತ್ತು ಶಾಲ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ ಮಾತೃಭಾಷೆ ಮಾಧ್ಯಮದ ಏಕರೂಪ ಶಿಕ್ಷಣವನ್ನು ರೂಪಿಸಿ ಜಾರಿಗೊಳಿಸಬೇಕೆಂದು ಪ್ರದಾನಿಯವರಲ್ಲಿ ಕನ್ನಡ ಗೆಳೆಯರ ಬಳಗವು ಮನವಿ ಮಾಡುತ್ತದೆ
0 Comments