Ticker

6/recent/ticker-posts

Ad Code

Responsive Advertisement

ಕೆನಡಾ ಸಂಸತ್ತಿನಲ್ಲಿ ಕನ್ನಡ ಡಿಂಡಿಮ ಮೊಳಗಿಸಿದ ಚಂದ್ರ ಆರ್ಯ ಅವರನ್ನು ನಮ್ಮ ಸಂಸದರು ಅನುಸರಿಸಲಿ:

ತುಮಕೂರು ಮೂಲದ ಕೆನಡಾ ಸಂಸದ ಚಂದ್ರ ಆರ್ಯ, ಕೆನಡಾದ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆಯಾದ ಕನ್ನಡದಲ್ಲೇ ಭಾಷಣ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಾಕವಿ ಕುವೆಂಪು ‘ಎಲ್ಲಾದರು ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬುದನ್ನು  ಸಕಾರಗೊಳಿಸಿದ ಚಂದ್ರ ಆರ್ಯ ಅವರಿಗೆ ಸ್ವಾಭಿಮಾನಿ ಕನ್ನಡಿಗರ ಪರವಾಗಿ  ಕನ್ನಡ ಗೆಳೆಯರ ಬಳಗ  ಅಭಿನಂದನೆಗಳನ್ನು ಸಲ್ಲಿಸುತ್ತದೆ.

ನಮ್ಮ ಸಂಸದರು ಚಂದ್ರ ಆರ್ಯ ಅವರನ್ನು ಅಭಿನಂದಿಸಿದರೆ ಸಾಲದು. ಅವರನ್ನು ಅನುಸರಿಸಿ ಸಂಸತ್ ಅಧೀವೇಶನದಲ್ಲಿ ಆಗಾಗ ಕನ್ನಡದಲ್ಲಿ ಮಾತನಾಡಿ ಕನ್ನಡನಾಡು-ನುಡಿಯ ಹಿತ ಕಾಪಾಡುವ ಕೆಲಸವನ್ನು ಪಕ್ಷಾತೀತವಾಗಿ ಮಾಡಿ ಕನ್ನಡಗರ ಋಣ ತೀರಿಸಬೇಕು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ನೀಡಿ 14 ವರ್ಷಗಳಾಯಿತು. ಇಂದಿಗೂ ಕನ್ನಡಕ್ಕೆ ಸ್ವಯತ್ತತೆಯಾಗಲಿ ಸಿಗಬೇಕಾದ ಸವಲತುಗಳಾಗಲಿ, ಶಾಸ್ತ್ರೀಯ ಉನ್ನತ ಅಧ್ಯಯನ ಕೇಂದ್ರಕ್ಕೆ ಸ್ವಂತ ಕಟ್ಟಡವಾಗಲಿ ದೊರೆತಿಲ್ಲ. ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರೂ ಒಗ್ಗಟ್ಟಿನಿಂದ ಮಳೆಗಾಲದ ಅಧಿವೇಶನದಲ್ಲಿ ಒಗ್ಗಟ್ಟಿನಿಂದ  ಧ್ವನಿಯೆತ್ತಿ ಶಾಸ್ತ್ರೀಯ ಕನ್ನಡ ಭಾಷೆಯ ವನವಾಸವನ್ನು ಕೊನೆಗೊಳಿಸಬೇಕೆಂದು ಮನವಿ ಬಳಗವು ಮಾಡುತ್ತದೆ. ಹನುಮನದುಸಿದ ಕನ್ನಡನಾಡಿನ ಸಮಸ್ಯೆ ಹನುಮನೆ ಬಾಲದಂತೆ ಬೆಳೆಯುತ್ತಲೇ ಇದೆ. ಅತ್ತ ನಮ್ಮ ಸಂಸದರು ಗಮನಿ ನೀಡಿದರೆ ಸ್ವಲ್ಪವಾದರೂ  ಕನ್ನಡದ ಸ್ಥಿತಿ ಸುಧಾರಿಸುತ್ತದೆ.


Post a Comment

0 Comments

Ad Code

Responsive Advertisement