Ticker

6/recent/ticker-posts

Ad Code

Responsive Advertisement

1 ಕೋಟಿ 22 ಲಕ್ಷ ಮೊತ್ತದ ವಸ್ತು ಜಪ್ತಿ

ತಲಘಟ್ಟಪುರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ರಘುವನಹಳ್ಳಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್‍ನಲ್ಲಿ ಇಟ್ಟಿದ್ದ ಚಿನ್ನದ ಹಾಗೂ ವಜ್ರದ ಒಡವೆಗಳನ್ನು ತೆಗೆದುಕೊಂಡು ಬ್ಯಾಂಕ್‍ನ ಮುಂಭಾಗ ನಿಲ್ಲಿಸಿದ್ದ ತಮ್ಮ ಕಾರ್‍ನಲ್ಲಿ ಒಡವೆಗಳಿದ್ದ ಬ್ಯಾಗ್‍ಗಳನ್ನು ಇಟ್ಟು, ಡೋರ್ ಲಾಕ್ ಮಾಡಿ ಪಕ್ಕದಲ್ಲಿಯೇ ಇದ್ದ ನರ್ಸರಿಗೆ ಹೋಗಿ 5 ನಿಮಿಷಗಳ ನಂತರ ವಾಪಸ್ ಕಾರಿನ ಬಳಿ ಬಂದು ನೋಡಲಾಗಿ ಆರೋಪಿಗಳೂ ಕಾರಿನ ಹಿಂಭಾಗದ ಎಡಭಾಗದ ಗ್ಲಾಸ್ ಅನ್ನು ಹೊಡೆದು ಕಾರಿನಲ್ಲಿಟ್ಟಿದ್ದ ಸುಮಾರು 1 ಕೆ.ಜಿ 170 ಗ್ರಾಂ ಚಿನ್ನದ ಮತ್ತು 186 ಗ್ರಾಂ ವಜ್ರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.




 ನಂತರ ಸಾಕ್ಷಾಧಾರ ಪರಿಶೀಲಿಸಲಾಗಿ ಆರೋಪಿ ರತ್ನಕುಮಾರ್ @ ರೆಡ್ಡಿ @ ರತ್ನಂ @ ಕುಮಾರ್ ಎಂದು ತಿಳಿದುಬಂದಿದ್ದು, ಈತನು ಮೂಲತಃ ಆಂದ್ರಪ್ರದೇಶದ ಓಜಿಕುಪ್ಪಂ ನಲ್ಲಿ ವಾಸವಾಗಿದ್ದು ಹಾಲಿ ತಮಿಳುನಾಡಿನಲ್ಲಿ ವಾಸವಿರುವುದಾಗಿ ತಿಳಿದು ಚೆನೈಗೆ ತೆರಳಿ ಮಾಹಿತಿ ಸಂಗ್ರಹಿಸಲಾಗಿ ಕಳುವು ಮಾಡಿರುವ ಚಿನ್ನಾಭರಣಗಳ ಪೈಕಿ ಕೆಲವು ಚಿನ್ನಾಭರಣಗಳನ್ನು ಮಾರಾಟ ಮಾಡಿ ಹಣ ನೀಡುವಂತೆ ತನ್ನ ಸಂಬಂಧಿ ಚೆನೈ ವಾಸಿ ಮೊಹಮ್ಮದ್ ಹರ್ಷದ್ ನದೀಮ್ ಈತನ ಬಳಿ ಕೊಟ್ಟಿರುವುದಾಗಿ ತಿಳಿದುಬಂದ ಮೇರೆಗೆ ದಿನಾಂಕ: 13/05/2022 ರಂದು ನದೀಮ್ ನನ್ನು ಚೆನೈನಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ವಿಚಾರ ಮಾಡಲಾಗಿ ನನ್ನ ಭಾವ ರತ್ನಕುಮಾರ್ ರೆಡ್ಡಿ ಹಾಗೂ ನನ್ನ  ಅಕ್ಕ ತಾಸಿನ್ ಫಾತಿಮಾ @ ತನು ಇವು ಕಳವು ಮಾಡಿದ್ದ ಚಿನ್ನಾಭರಣಗಳಾಗಿದ್ದು ಚೆನೈನಲ್ಲಿ ಮಾರಾಟ ಮಾಡಿ ಹಣ ನೀಡುವಂತೆ ತಿಳಿಸಿರುತ್ತಾರೆಂದು ನೀಡಿದ ಆತನ ಹೇಳಿಕೆಯ ಮೇರೆಗೆ ಆತನ ವಶದಲ್ಲಿದ್ದ 42 ಲಕ್ಷ ರೂ. ಬೆಲೆಬಾಳುವ 875 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ 65 ಲಕ್ಷ ಬೆಲೆ ಬಾಳುವ 116 ಗ್ರಾಂ ವಜ್ರದ ಒಡವೆಗಳನ್ನು, ಒಟ್ಟು 1 ಕೋಟಿ 7 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರದ ಒಡವೆಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ.

  ನಂತರ ಆತನ ಮಾಹಿತಿ ಮೇರೆಗೆ ಪ್ರಮುಖ ಆರೋಪಿ ರತ್ನಕುಮಾರ್ 40 ವರ್ಷ ಹಾಗೂ ಈತನ ಪತ್ನಿ ಶ್ರೀಮತಿ ತಾಸಿನ್ ಫಾತಿಮಾ@ತನು 36 ವರ್ಷ ಈಕೆಯನ್ನು ದಿನಾಂಕ: 18/05/2022 ರಂದು ಚೆನೈನ ಶ್ರೀಪಾಂಡಿಯಾನ್ ನಗರದ, ಮಾಂಗಾಡಿವಿನ ಆಲ್ಟೀಸ್ ಅಪಾರ್ಟ್‍ಮೆಂಟ್‍ನಲ್ಲಿ ವಶಕ್ಕೆ ಪಡೆದು ಸದರಿಯವರ ಬಳಿಯಿಂದ 5 ಲಕ್ಷ ಬೆಲೆಬಾಳುವ 103 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 10 ಲಕ್ಷ ರೂ. ಬೆಲೆಬಾಲುವ 10 ಗ್ರಂ ತೂಕದ ವಜ್ರದ ಒಡವೆಗಳು, ಒಟ್ಟು 15 ಲಕ್ಷ ರೂ. ಮಾಲನ್ನು ಅಮಾನತ್ತುಪಡಿಸಿಕೊಂಡಿರುತ್ತದೆ.

  ಸದರಿ ಪ್ರಕರಣಗಳಲ್ಲಿ ಒಟ್ಟು ಸುಮಾರು 47 ಲಕ್ಷ ಬೆಲೆಬಾಳುವ 978 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 5 ಲಕ್ಷ ರೂ. ಬೆಲೆಬಾಳುವ 176 ಗ್ರಾಂ ತೂಕದ ವಜ್ರದ ಒಡವೆಗಳು, ಒಟ್ಟು 1 ಕೋಟಿ 22 ಲಕ್ಷ ಮೊತ್ತದ ಮಾಲನ್ನು ಅಮಾನತ್ತ್ತುಪಡಿಸಿಕೊಂಡಿರುತ್ತದೆ.

 ಪ್ರಮುಖ ಆರೋಪಿಯಾದ ರತ್ನಕುಮಾರ್, ಈತ ಚಾಳಿಬಿದ್ದ 2015 ರಿಂದಲೂ ಈತ ತನ್ನ ಸಹಚರರ ಒಡಗೂಡಿ ಇದೇ ರೀತಿ ಅಪದಾಧಗಳಲ್ಲಿ ಭಾಗಿಯಾಗಿದ್ದು ಈತನ ವಿರುದ್ದ 26 ಪ್ರಕರಣಗಳು ದಾಖಲಾಗಿರುತ್ತದೆ.

ಸದರಿ ಪ್ರಕರಣವನ್ನು ಬೆಂಗಳೂರು ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್ ಶ್ರೀ. ಹರೀಶ್ ಪಾಂಡೆ, ಐ.ಪಿ.ಎಸ್ ಇವರ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ. ಟಿ.ಎ. ಶಿವಕುಮಾರ್ ರವರ ನೇತೃತ್ವದಲ್ಲಿ, ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀ. ಜಿ. ಸಿದ್ಧರಾಜು, ರವರು ಆರೋಪಿಯನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಜೆ.ಪಿ. ನಗರ ಪೊಲೀಸ್ ರಿಂದ ಕ್ಷಿಪ್ರ ಕಾರ್ಯಚರಣೆ, ಅಂತರ್ ರಾಜ್ಯಕುಖ್ಯಾತ ಕಳ್ಳರಾದ 1) ಮನರುಲ್ಲಾ ಶೇಖ್ @ ಅನಾರುಲ್ಲಾ ಶೇಖ್, 2) ಸೈಫೂದ್ದೀನ್ ಶೇಖ್ 3) ಅಶೋಕ್ ಸಿಂಗ್ ಬಹದ್ದೂರ್ ಇವರ ಬಂಧನದಿಂದ ಸುಮಾರು 55 ಲಕ್ಷ ಬೆಲೆ ಬಾಳುವ 1 ಕೆ.ಜಿ 100 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಯಶಸ್ವಿಯಾಗಿರುತ್ತಾರೆ.

ಪ್ರಿಯದರ್ಶಿನಿ ಜ್ಯೂವೆಲರ್ಸ್ ಅಂಗಡಿಯನ್ನು ವ್ಯಾಪಾರ ಮುಗಿಸಿ ನಂತರ ಚಿನ್ನದ ಒಡವೆಗಳನ್ನು ಕಬ್ಬಿಣದ ಲಾಕರ್‍ನಲ್ಲಿ ಇಟ್ಟು ಬೀಗವನು  ಹಾಕಿ ಹೋಗಿರುತ್ತಾರೆ. ದಿನಾಂಕ: 18/04/2022 ರಂದು ಬೆಳಿಗ್ಗೆ 10:00 ಗಂಟೆಗೆ ಜ್ಯೂವೆಲರ್ಸ್ ಅಂಗಡಿಯ ಬಾಗಿಲನ್ನು ತೆರೆದು ಒಳಗೆ ಹೋಗಿ ನೋಡಿದಾಗ ಎಲ್ಲಾ ಚಿನ್ನದ ಬಾಕ್ಸ್‍ಗಳು ಚೆಲ್ಲಾ ಪಿಲ್ಲಿಯಾಗಿ ಖಾಲಿಯಾಗಿ ಬಿದ್ದಿದ್ದು, ಯಾರೋ ಕಳ್ಳರು 2ನೇ ಮಹಡಿಯ ಗೋಡೆಯನ್ನು ಕೊರೆದು ಒಳಗೆ ಪ್ರವೇಶ ಮಾಡಿ ಲಾಕರ್ ಅನ್ನು ಗ್ಯಾಸ್ ಕಟರ್‍ನಿಂದ ಲಾಕರ್ ಒಡೆದು ಅಂದಾಜು ಬೆಲೆ 2,50,00,000/- ರೂ ಬೆಲೆ ಬಾಳುವ ಸುಮಾರು 05 ಕೆ.ಜಿ. ಚಿನ್ನದ ಆಭರಣಗಳನ್ನು ಕಳವು ಮಾಡಿದ್ದು, ಪತ್ತೆ ಮಾಡಿ ಕೊಡುವಂತೆ ಕೊಟ್ಟ ದೂರನ್ನು ಪಡೆದು ಠಾಣಾ ಮೊ.ಸಂ:77/2022 ಕಲಂ. 457, 380 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲೆ ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.

ತನಿಖಾ ಕಾಲದಲ್ಲಿ ಆರೋಪಿಯನ್ನು ಪತ್ತೆ ಮಾಡಲು 8 ತಂಡಗಳನ್ನು ರಚನೆ ಮಾಡಿದ್ದು ದಿನಾಂಕ: 20/05/2022 ರಂದು ಜಾರ್ಖಂಡ್ ರಾಜ್ಯದ ಆರೋಪಿಗಳಾದ 1) ಎ.ಎಂ ಹುಸೈನ್ @ ಆದಿಲ್ 2) ಮನರುಲ್ಲಾ ಶೇಖ್ 3) ಸುಲೇಮಾನ್ ಶೇಖ್ 4) ಅಜಿಜುರ್ ರೆಹಮಾನ್ 5) ರಮೇಶ್ ಬಿಷ್ಠ @ ರಾಜು ಬಿಷ್ಠ @ ನೇಪಾಳಿ ರಾಜು 6) ಸದ್ದಾಂ 7) ಮನರುಲ್ ಶೇಖ್  ಅನಾರುಲ್ಲಾ ಶೇಖ್ 8) ಸೈಫುದ್ದೀನ್ ಶೇಖ್ 9) ಸಲೀಂ ಶೇಖ್ 10) ಶ್ರೀಮತಿ ಶೈನೂರ್ ಬೀಬಿ ಎಂಬ ಅಂತರ ರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸಿ ಅವರ ವಶದಿಂದ ಸುಮಾರು 55 ಲಕ್ಷ ಬೆಲೆ ಬಾಳುವ 1 ಕೆ.ಜಿ 100 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಯಶಸ್ವಿಯಾಗಿರುತ್ತಾರೆ. ಆರೋಪಿಯಾದ ಎ1 ಮನರುಲ್ಲಾ ಶೇಖ್ @ ಅನಾರುಲ್ಲಾ ಶೇಖ್ ಈತನನ್ನು ಈ ಹಿಂದೆ ಜಯನಗರ ಪೊಲೀಸ್ ಠಾಣಾ ಮೊ.ಸಂ. 114/2010 ಕಲಂ 457, 380 ಐ.ಪಿ.ಸಿ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಈತನಿಂದ 25,000/- ರೂ ನಗದು ಹಣವನ್ನು ವಶಪಡಿಸಿಕೊಂಡಿರುತ್ತೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ ಸಂದೀಪ್ ಪಾಟೀಲ್ ಐ.ಪಿ.ಎಸ್. ದಕ್ಷಿಣ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ. ಹರೀಶ್ ಪಾಂಡೆ ಐ.ಪಿ.ಎಸ್ ರವರ ನೇತೃತ್ವದಲ್ಲಿ ಜಯನಗರ ಉಪವಿಭಾಗದ ಎ.ಸಿ.ಪಿ. ಶ್ರೀ ಶ್ರೀನಿವಾಸ್ ಕೆ.ವಿ. ರವರ ಮಾರ್ಗದರ್ಶನದಲ್ಲಿ ಕೆ.ಜಿ,ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀ ರಕ್ಷಿತ್, ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀ ಮಂಜುನಾಥ ಕೆ.ಆರ್, ಜೆ.ಪಿ. ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀ ರಾಧಕೃಷ್ಣ ಟಿ.ಎಸ್. ಜಯನಗರ  ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀ ಮಂಜುನಾಥ್ ಯು,ಆರ್ ಪಿ.ಎಸ್.ಐ ಗಳಾದ ಶ್ರೀ ಅರವಿಂದ್ ಕುಮಾರ್ ಜೆ. ಶ್ರೀ ಪ್ರವೀಣ್ ಕುಮಾರ್ ಶ್ರೀ. ಪ್ರಸನ್ನ ಕುಮಾರ್ ಶ್ರೀ ಹರಿಪ್ರಸಾದ್, ಕುಃ ಆಶಾ ಕೆ.ಬಿ ಶ್ರೀ ಪದ್ಮನಾಭ್, ಶ್ರೀ ಚಂದನ್ ಕಾಳೆ, ಶ್ರೀ ವಿನಯ್, ಮಂಜುನಾಥ್ ಪಿ.ಎಸ್.ಐ, ಶ್ರೀನಿವಾಸ್ ಪಿ.ಎಸ್.ಐ ಶ್ರೀ ಶಿವಶಂಕರ್ ಪಿ.ಎಸ್.ಐ ಹಾಗೂ ದಕ್ಷಿಣ ವಿಭಾಗದ ವಿವಿಧ ಠಾಣೆಯ ಸಿಬ್ಬಂದಿಯವರ ಒಳಗೊಂಡ ತಂಡವು ಅಂತರ್ ರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸಿ ಅವರ ವಶದಿಂದ 55 ಲಕ್ಷ ಬೆಲೆ ಬಾಳುವ 1 ಕೆ.ಜಿ. 100 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಹಾಗೂ ಮಾನ್ಯ ಅಪರ ಪೊಲೀಸ್ ಆಯುಕ್ತರು, ಪಶ್ಚಿಮ ರವರು ಮುಕ್ತ ಕಂಠದಿಂದ ಪ್ರಶಂಸಿಸಿರುತ್ತಾರೆ.


Post a Comment

0 Comments

Ad Code

Responsive Advertisement