Ticker

6/recent/ticker-posts

Ad Code

Responsive Advertisement

ದಿವಂಗತ ರಾಜೀವ್ ಗಾಂಧಿ ರವರ 31 ನೇ ಪುಣ್ಯಸ್ಮರಣೆ ಅಂಗವಾಗಿ ಸದ್ಭಾವನಾ ಯಾತ್ರೆ

  ದಿನಾಂಕ:21/5/22 ರಂದು ಶನಿವಾರ  ರಾಷ್ಟ್ರನಾಯಕ ದೇಶಪ್ರೇಮಿ ಯುವ ನೇತಾರರಾದ ದಿವಂಗತ ರಾಜೀವ್ ಗಾಂಧಿ ರವರ 31 ನೇ  ಪುಣ್ಯಸ್ಮರಣೆ ಅಂಗವಾಗಿ ಸದ್ಭಾವನಾ ಯಾತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ರಾಮಲಿಂಗಾರೆಡ್ಡಿ ರವರು ಚಾಲನೆ ನೀಡಿ ರಾಜೀವ್ ಗಾಂಧಿ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ರಾಜೀವ್ ಗಾಂಧಿ ಅವರ ತ್ಯಾಗ ಬಲಿದಾನವನ್ನು ಸ್ಮರಿಸಿದರು


ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ  ರವರು ಪ್ರಸ್ತುತ ದೇಶ ಸಂಕಷ್ಟದಲ್ಲಿದೆ ರಾಜೀವ್ ಗಾಂಧಿ ರವರ ಆಡಳಿತದಲ್ಲಿ  ಇಡೀ ವಿಶ್ವವೇ  ರವರ ಆಡಳಿತವನ್ನು ಹಾಗೂ ಯೋಜನೆಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಪ್ರಸ್ತುತ ಇಂದು ನಿರುದ್ಯೋಗದ ಸಮಸ್ಯೆ ದೇಶದಲ್ಲಿ ಹೆಚ್ಚಾಗಿದೆ  ರಾಜೀವ್ ಗಾಂಧಿ ರವರು  ದೇಶದ ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ಯುವಕರಿಗೆ ಅತಿ ಹೆಚ್ಚಿನ ಶಕ್ತಿಯನ್ನು ತುಂಬಿ ಯುವಪೀಳಿಗೆ ಗೆ ಉದ್ಯೋಗದಲ್ಲಿ ಹಾಗೂ ಮತದಾನದ ಹಕ್ಕನ್ನು  ನೀಡಿ ಅವಕಾಶ ಕಲ್ಪಿಸಿಕೊಟ್ಟರು 

ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ದಾಪುಗಾಲು ಹಾಕಲು ಅವರ ಪರಿಶ್ರಮವೇ ಮುಖ್ಯ ಇಂದು ದೇಶದಲ್ಲಿ ರಾಜಕೀಯ ಅರಾಜಕತೆ ನಡೆಯುತ್ತಿದೆ ಕೋಮು ದ್ವೇಷ ಭ್ರಷ್ಟಾಚಾರ ಹೆಚ್ಚುತ್ತಿದೆ ಆರ್ಥಿಕ ಪರಿಸ್ಥಿತಿ ಕುಸಿದಿದೆ ಇದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದಿಂದ ಸಾಧ್ಯವಿಲ್ಲ ಇವರ ದುರಾಡಳಿತದಿಂದ ಇಂದು  ಜನರು ಜೀವನ ನಡೆಸುವುದೇ ಕಷ್ಟಕರವಾಗಿದೆ ಹಾಗೂ ಯುವ ಪೀಳಿಗೆ  ಸಂಕಷ್ಟದಲ್ಲಿ ಸಿಲುಕಿದ್ದಾರೆ ರಾಜೀವ್ ಗಾಂಧಿ  ರವರು ಮಾಡಿದ ಅಭೂತಪೂರ್ವ ಅಭಿವೃದ್ಧಿ ಹಾಗೂ ಬೆಳವಣಿಗೆ ಮೋದಿ ಸರ್ಕಾರದಲ್ಲಿ ಹಾಳಾಗುತ್ತಿದೆ 

ರಾಜು ಬಂದಿರುವರು  ದೇಶಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು ಪ್ರಾಣತ್ಯಾಗ ಮಾಡಿದರು ಅವರ ತ್ಯಾಗ ಬಲಿದಾನ ಅವರ ಅತ್ಯುತ್ತಮ ಆಡಳಿತ ಇಂದಿಗೂ ದೇಶದ ಜನರಲ್ಲಿ ಮನೆ ಮಾಡಿದೆ ಅವರ ಅಭಿವೃದ್ಧಿ ಕಾರ್ಯಗಳನ್ನು ನಾವೆಲ್ಲರೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮುಂದುವರೆಸಿ ದೇಶದ ಏಳಿಗೆಗೆ ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ  ಸಮಿತಿಯಿಂದ ನಡೆದ ಸದ್ಭಾವನಾ ಯಾತ್ರೆಯಲ್ಲಿ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್ ಒಬಿಸಿ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣ್   ಬೆಂಗಳೂರು ನಗರ ಪ್ರಚಾರ ಸಮಿತಿ ಅಧ್ಯಕ್ಷರಾದ ಜಿ ಜನಾರ್ಧನ್ ಎ.ಆನಂದ್  ಆದಿತ್ಯ ಪ್ರಕಾಶ್ ಪುಟ್ಟರಾಜು ಮಂಜುನಾಥ ಪ್ರಕಾಶ್ ವೆಂಕಟೇಶ್ ರಾಮಕೃಷ್ಣ ಹಾಗೂ  ಪಕ್ಷದ ಮುಖಂಡರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement