ಬಳ್ಳಾರಿ ಮೇ 05. ಬಳ್ಳಾರಿಯ ಪ್ರತಿಷ್ಟಿತ ವೀರಶೈವ ವಿದ್ಯಾವರ್ಧಕ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಹಿನ್ನೆಯಲ್ಲಿ, ಹಾನಗಲ್ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಇದೇ ಮೇ 8, ಭಾನುವಾರದಂದು, ಉದ್ಯೋಗ ಮೇಳ ನಡೆಯಲಿದ್ದು, ರಾಜ್ಯದ 30 ಕ್ಕು ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿವೆ.
ಎಸ್ ಎಸ್ ಎಲ್ಸಿ, ಪಿಯುಸಿ, ಪಧವಿ ಮತ್ತು ಡಿಪ್ಲೋಮಾ ಹಾಗೂ ಐಟಿಐ ಓದಿದ. ಜಿಲ್ಲೆಯ 800ಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶವನ್ನ ಒದಗಿಸಿಕೊಡಲಿದೆ ಎಂದು ಹಾನಗಲ್ ಕುಮಾರೇಶ್ವರ ಪಾಲಿಟೆಕ್ನಿಕ್ ಸಂಸ್ಥೆಯ ಚೇರ್‍ಮನ್ ಕಿರಣ್ ಕುಮಾರ್ ಇಂದು ಪತ್ರಿಕಾಗೋಷ್ಠಿ ನಡೆಸಿ, ಉದ್ಯೋಗ ಮೇಳದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ವಿದ್ಯಾರ್ಥಿಯು 200 ರೂಪಾಯಿಗಳು ಪಾವತಿಸಿ ಪ್ರವೇಶ ಪಡೆಯುವುದು ಕಡ್ಡಾಯವೆಂದು ತಿಳಿಸಿದರು.
ಇನ್ನು, ನೂರು ವರ್ಷಗಳ ಇತಿಹಾಸಹೊಂದಿರುವ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘ ಇದಾಗಿದ್ದು. 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರದಲ್ಲಿದ್ದು.ಮೇ 8, ಭಾನುವಾರ ಆಯೋಜಿಸಿರುವ ಉದ್ಯೋಗ ಮೇಳವನ್ನ, ನಗರದ ಶಾಸಕ ಸೋಮಶೇಖರ್ ರೆಡ್ಡಿಯವರು ಉದ್ಘಾಟಿಸಲಿದ್ದಾರೆ ಮತ್ತು. ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಸರ್ವಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ್ ಸೇರಿದಂತೆ ಹಲವಾರು ಗಣ್ಯರು ಉದ್ಯಗಮೇಳದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ, ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ್ಯರಾದ, ಹೆಚ್.ಎಂ.ಕಿರಣ್ ಕುಮಾರ್, ಸದಸ್ಯರಾದ, ಹಳೆಕೋಟೆ ವೀರನಗೌಡ, ಹಲಕುಂದಿ ವಿಜಯ್‍ಕುಮಾರ್. ಸಂಗನಕಲ್ ಚಂದ್ರಶೇಖರ್, ಪ್ರಾಂಶುಪಾಲರಾದ, ವೀರಗಂಗಾಧರ್ ಸ್ವಾಮಿ ಸೇರಿದಂತೆ ಹಲವಾರು ಸದಸ್ಯರು ಉಪಸ್ಥಿತರಿದ್ದರು.

0 Comments