Ticker

6/recent/ticker-posts

Ad Code

Responsive Advertisement

ಪಿಎಸ್‍ಐ ಅಕ್ರಮ ನೇಮಕಾತಿ- ಆರಗ ಜ್ಞಾನೇಂದ್ರ, ಅಶ್ವತ್ ನಾರಾಯಣ ಅವರನ್ನು ಸಂಪುಟದಿಂದ ಹೊರಹಾಕಬೇಕೆಂದು ರಾಜು ನಾಯಕ ಆಗ್ರಹ

ಬಳ್ಳಾರಿ ಮೇ 05.  ಪಿಎಸ್‍ಐ ಅಕ್ರಮ ನೇಮಕಾತಿಯ ನೈತಿಕ ಹೊಣೆ ಒತ್ತು ರಾಜ್ಯ ಸರ್ಕಾರದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮತ್ತೊಬ್ಬ ಸಚಿವ ಅಶ್ವತ್ ನಾರಾಯಣ ಅವರ ರಾಜಿನಾಮೆ ಪಡೆಯಬೇಕು ಎಂದು ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ ರಾಜು ನಾಯಕ ಆಗ್ರಹಿಸಿದರು.

ತಾಲೂಕು ಸಮೀಪದ ವೀರಾಪುರ ಬಳಿಯ ಚಿಟಗಿನಹಾಳ್ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮ ದೇವತೆ ಶ್ರೀ ಮಾರೆಮ್ಮ ದೇವಿ ಜಾತ್ರಾ ನಿಮಿತ್ಯ ದೇವಿಯ ದರ್ಶನ ಪಡೆದ ನಂತರ ಮಾತನಾಡಿ,ರಾಜ್ಯದಲ್ಲಿ ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಮುಂಚೆನೆ ಗೃಹ ಸಚಿವರ ಗಮನಕ್ಕೆ ವಿದ್ಯಾರ್ಥಿಗಳು ತಂದಿದ್ದರೂ, ಅವರ ಬೇಜವಾಬ್ದಾರಿತನದಿಂದ ನೇಮಕಾತಿ ಅಕ್ರಮವಾಗಿದೆ. ಮುಂಚಿತವಾಗಿ ಕಟ್ಟುನಿಟ್ಟಿನ ಪಾಲನೆ ಮಾಡಿದ್ದರೆ, ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿರಲಿಲ್ಲ. ಗಡ್ಡಕ್ಕೆ ಬೆಂಕಿ ಹತ್ತಿಕೊಂಡ ನಂತರ ಗಡ್ಡಕ್ಕೆ ತಗುಲಿರುವ ಬೆಂಕಿ ನಂದಿಸಲು ನೀರಿಗಾಗಿ ಬಾವಿ ತೋಡಲು ಹೊರಟರೆ ಗಡ್ಡ ಉರಿದು ಕ್ರಮೇಣ ಮುಖಕ್ಕೆ ಆವರಿಸುವ ಸಂಭವ ಹೆಚ್ಚು. ಆದ್ದರಿಂದ ಯಾವಾಗಲು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದರು.

ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಗೃಹ ಸಚಿವರ ನಿರ್ಲಕ್ಷ್ಯದಿಂದ ಪಿಎಸ್‍ಐ ಅಕ್ರಮ ನೇಮಕಾತಿಗೆ ಕಡಿವಾಣ ಬಿದ್ದಿಲ್ಲ. ಆದರೆ ಈಗ ತನಿಖೆಯ ನೆಪದಲ್ಲಿ ಸರ್ಕಾರ ಮತ್ತು ಗೃಹ ಸಚಿವರು ಜಾರಿಕೊಳ್ಳುತ್ತಿದ್ದು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕಾಗಿದೆ. ಹೀಗಾಗಿ ಸರ್ಕಾರ ನೈತಿನ ಹೊಣೆ ಹೋರಬೇಕು. ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸ್ಥಾನದಿಂದ ಆರಗ ಜ್ಞಾನೇಂದ್ರ ಅವರನ್ನು ಕಿತ್ತಿ ಹಾಕಬೇಕು. ಮತ್ತು ಸಚಿವ ಅಶ್ವತ್ ನಾರಾಯಣ ಅವರ ತಮ್ಮ ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದು, ಹೀಗಾಗಿ ಸಚಿವ ಅಶ್ವತ್ ನಾರಾಯಣ ಅವರನ್ನು ಸಹ ಸಂಪುಟದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸುವ ಜತೆಗೆ ಅಕ್ರಮ ನೇಮಕಾತಿ ಜತೆಗೆ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರಕ್ಕೆ ಮುಂಬರುವ ಚುನಾವಣೆಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದರು.ಗ್ರಾಮದ ಮುಖಂಡರು ಹಾಗೂ ಯುವಕರು ರಾಜು ನಾಯಕ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಶ್ರೀ ಮಾರೆಮ್ಮ ದೇವಿಯ ದರ್ಶನದೊಂದಿಗೆ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಯರ್ರೆಪ್ಪಗೌಡ, ಗ್ರಾಪಂ ಮಾಜಿ ಸದಸ್ಯ ಶರಣೇಗೌಡ, ಮುಖಂಡರಾದ ಬಿ.ಟಿ.ರವಿಪ್ರಕಾಶ್, ಉಮಾಪತಿ, ಶೆಕ್ಷಾವಲಿ, ಮೈಬೂಬ್, ರಾಜಕುಮಾರ, ಕಾಸಿಂ, ಮಾರೆಮ್ಮ, ಹುಸೇನಿ, ಶಿವಕುಮಾರ್, ಮದುರೆ ವಿರೇಶ್, ಯರ್ರಿಸ್ವಾಮಿ, ಸೋಮೇಶ್ ಸೇರಿದಂತೆ ಅನೇಕರಿದ್ದರು.


 

Post a Comment

0 Comments

Ad Code

Responsive Advertisement