ಬಳ್ಳಾರಿ ಮೇ 05. ಬಳ್ಳಾರಿ ಜಿಲ್ಲೆ ಅಂದರೆ ಇದಕ್ಕೆ ಪ್ರತ್ಯೇಕತೆ ಇದೆ. ಇಲ್ಲಿಯ ವಾತಾವರಣವೇ ಬೇರೆ. ಎಷ್ಟೇ ಖಡಕ್ ಅಧಿಕಾರಿಗಳು ಬಂದರು ಅವರನ್ನು "ಮೋಡಿ" ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿರುವ ಇಲಾಖೆ ಅಧಿಕಾರಿಗಳು ಅಂದರೆ ಅದು ಬಳ್ಳಾರಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಸಿಕ್ಕಾಪಟ್ಟೆ ಸಿಗ್ತಾರೆ. ಕೆಲ ಠಾಣೆಯ ಅಧಿಕಾರಿಗಳನ್ನ ಪವಾಡ ಪುರುಷರು ಎಂದು ಹೇಳ ಬಹುದು.
ಬಳ್ಳಾರಿ ಜಿಲ್ಲೆಯಲ್ಲಿ ಕೆಲಸವನ್ನು ಮಾಡಿದ ಕೆಲ ಅಧಿಕಾರಿಗಳು ವರ್ಗಾವಣೆ ಆಗಿದ್ದರೂ, ಮತ್ತೆ ಉಲ್ಟಾ ಪಲ್ಟಾ ಮಾಡಿ ಮತ್ತೆ ಬಳ್ಳಾರಿ ಜಿಲ್ಲೆಗೆ ಬರುತ್ತಾರೆ.ಇಂತಹ ಪವಾಡ ಪುರುಷರನ್ನು ಪಡೆದ ಹೆಮ್ಮೆಯ ಜಿಲ್ಲೆ ಬಳ್ಳಾರಿ,ಆದರೆ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರುವ ದಿಗ್ಗಜರು ಕೂಡಾ ಇದ್ದಾರೆ. ಇಲಾಖೆ ಗೌರವವನ್ನು ಹಾಳು ಮಾಡಿ ಹರಾಜ್ ಹಾಕುವಂತ ಟ್ರೈನಿಂಗ್ ಪಡೆದ ಅಧಿಕಾರಿಗಳು ನಮ್ಮಲ್ಲಿದ್ದಾರೆ. ಇನ್ನೂ ಕೆಲ ಪೊಲೀಸ್ ಅಧಿಕಾರಿಗಳು ಅಡ್ಜಸ್ಟ್‍ಮೆಂಟ್ ರಾಜಕಾರಣಿಗಳು ಕೊಡುವ ಪಾರ್ಟಿಯಲ್ಲಿ ಪೊಲೀಸ್ ಡ್ರಸ್ಸಲ್ಲೇ ಡ್ರಿಂಕ್ ಮಾಡ್ತಾರೆ. ಅದೇನೆಂದು ಕೇಳಿದರೇ ? ಇಲ್ಲಿ ಏನು ನಡೆಯುತ್ತಿದಿಯೋ ಎಂದು ನೋಡಲು ಬಂದಿದ್ದೆವು ಎಂದು ಮರೆ ಮಾಚುತ್ತಾರೆ.
ಮಾದರಿ ಆಗುವ ಪೊಲೀಸಸರು ಕೆಲವರು"ಮಾರಕ" ಅಗುತ್ತಾ ಇದ್ದಾರೆ.ಸಾರ್ವಜನಿಕರು ರಹಸ್ಯವಾಗಿ ಕೆಲ ಠಾಣೆಗಳಿಗೆ ಛೀಮಾರಿ ಹಾಕುತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಗೆ ಖಡಕ್ ಅಧಿಕಾರಿಗಳಾಗಿ ಎಸ್ಪಿ ಸೈದುಲ್ ಅಡಾವತ್ ಬಂದಿದ್ದಾರೆ, ಜಿಲ್ಲೆಯಲ್ಲಿ 80%ಕಾನೂನು ಬಾಹಿರ ಚಟುವಟಿಕೆಗಳನ್ನು ಚಾಲೆಂಜ್ ಆಗಿ ಕಡಿವಾಣ ಹಾಕಿದ್ದಾರೆ,"ಸಿಂಗಮ್" ಎಂದು ಖ್ಯಾತಿ ಪಡೆದಿದ್ದಾರೆ. ಆದರೆ ಎಲ್ಲವೂ ಎಸ್ಪಿ ನೋಡಲು ಸಾಧ್ಯವಾಗದು,ಸಾರ್ವಜನಿಕರು ಎಲ್ಲ ಕಷ್ಟಗಳನ್ನು ಎಸ್ಪಿ ಅವರಿಗೆ ನೇರವಾಗಿ ಹೇಳಲು ಸಾಧ್ಯವಾಗದು.
ಕೆಲ ಠಾಣೆಯ ಅಧಿಕಾರಿಗಳು ಕನಿಷ್ಟ ಗೌರವ ಕೊಡುವ ಸೌಜನ್ಯತೆ ಕಲಿತಿಲ್ಲ. ಮಾತುಗಳು ನೋಡಿದರೆ ಸತ್ಯ ಹರಿಶ್ಚಂದ್ರಗೆ ಅಣ್ಣ ತಮ್ಮಂದಿರಂತೆ ವರ್ತಿಸುತ್ತಾರೆ. ಇನ್ನೂ ಕೆಲ ಪ್ರತ್ಯೇಕ ವಾಗಿ ಇರುವ ಎಸ್ಪಿ ಸ್ಕ್ವಾಡ್ ಗಳು ಶಬ್ದ ಇಲ್ಲದೆ ಚರ್ಮವನ್ನು ಸುಲಿಯುತ್ತಾ ಇದ್ದಾರೆ. ಅನ್ನುವುದು ನೊಂದ ಅರೋಪಿಗಳ, ಸಾರ್ವಜನಿಕರ ಮನದಾಳದ ಮಾತುಗಳಾಗಿವೆ. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಏಜೆಂಟ್‍ಗಳನ್ನು ನೇಮಕ ಮಾಡಿಕೊಂಡು ಸುಲಿಗೆ ಮಾಡುತಿದ್ದಾರೆ ಅನ್ನುವುದು ಬಹಿರಂಗ ಸತ್ಯ.
ಠಾಣೆ ಗಳಿಗೆ ಅಮಾಯಕರು ಯಾರು ಪರಿಚಯ ಇಲ್ಲದೆ ಅವರು ಹೋಗಬೇಕು ಅಲ್ಲಿ ಅಧಿಕಾರಿಗಳ ನಡತೆಗಳು ನೋಡಬೇಕು ಕನಿಷ್ಠ ಅವರ ವಿಚಾರಗಳನ್ನು ಕೇಳುವ ಸಮಯ ಕೂಡಾ ಇರೋದಿಲ್ಲ ಅವರಿಗೆ, ಠಾಣೆಗೆ ಬಂದವರನ್ನು ಹೆದರಿಸಿ, ಬೆದಿರಸಿ ಸಾಯಿ ಕುಮಾರ್ ಸ್ಟೈಲ್‍ನಲ್ಲಿ ವರ್ತನೆ ಮಾಡುತ್ತಾರೆ. ಇದನ್ನು ನೋಡಿದ ಅಮಾಯಕರಿಗೆ ಅಚಾರಿ ಅವರಂತಹ ಪೊಲೀಸ್ ಫ್ರೆಂಡ್ ಬೇಕು ಅಗುತ್ತದೆ. ಅದರ ಹಿಂದೆ ಎಲ್ಲವು ಸರಿ ಹೋಗುತ್ತವೆ. ನೋಡಿ ಗ್ರಾಮೀಣ ಪೊಲೀಸ್ ಠಾಣೆಯ ಯಲ್ಲಿ ಆಙSP ಮತ್ತು PI ತಮ್ಮ ಕಚೇರಿಯಲ್ಲಿ ಅಚಾರಿಗೆ ಹುಟ್ಟು ಹಬ್ಬ ಆಚರಣೆ ಮಾಡಿದರಾ ಅಥವಾ ಕಚೇರಿ ಸುತ್ತಲೂ ಸಿಸಿ ಕ್ಯಾಮರಾಗಳ ಮದ್ಯದಲ್ಲಿ ಆಙSP ಆಚರಣೆ ಮಾಡಿಕೊಂಡಿದ್ದಾರಾ,??ಅನ್ನುವುದು ಅಚ್ಚರಿ ಮೂಡಿಸಿದೆ.
ಈ ಅಚಾರಿ ನಗರದ ದೊಡ್ಡ ದೊಡ್ಡ ವ್ಯವಹಾರ ಮಾಡುವ ಅಧಿಕಾರಿಗಳ ಜೊತೆಯಲ್ಲಿ ಕೆಲ ವ್ಯವಹಾರಗಳು ಹೊಂದಿರುವ ಮಾಹಿತಿ ಇದೇ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಾ ಇದೇ. ಸರ್ಕಾರದ ಕಚೇರಿಯಲ್ಲಿ ಬರ್ತ್‍ಡೇ ಪಾರ್ಟಿಗಳು ಮಾಡುವದು ನಿಷೇಧ ಇದ್ದರು, ಚಾಲೆಂಜ್ ಆಗಿ ಕಚೇರಿಯಲ್ಲಿ ಆಚರಣೆ ಮಾಡುತ್ತಾರೆ ಇದಕ್ಕೆ ಎಸ್ಪಿ ಸಾಹೆಬರು ಯಾವ ಕ್ರಮ ಕೈಗೊಳ್ಳುತ್ತಾರೋ ಎಂದು ಕಾದು ನೋಡಬೇಕಾಗಿದೆ.
ಇಲ್ಲದಿದ್ದರೆ ಸಾರ್ವಜನಿಕರ ಮುಂದೆ ಇಲಾಖೆ ಗೌರವವನ್ನು ಕಳೆದು ಕೊಳ್ಳುವ ಪರಿಸ್ಥಿತಿ ಬರಬಾರದು. ಬರ್ತ್‍ಡೇ ಪಾರ್ಟಿಯಲ್ಲಿ ಮಲ್ಲೇಶ್ ದೊಡ್ಡ ಮನಿ, ಶೇಖರಪ್ಪ,ನಿರಂಜನ್, ಕಪ್ಪಗಲ್ ಅಚಾರಿ ಉಪಸ್ಥಿತಿ ಇದ್ದದ್ದನ್ನು ಕಾಣಬಹುದು.

0 Comments