ಬಳ್ಳಾರಿ ಮೇ 05. ಬಳ್ಳಾರಿ ನಗರದ ಎ.ಪಿ.ಎಂ.ಸಿ ಆವರಣದ ರೈತ ಭವನದಲ್ಲಿ ದಿನಾಂಕ 04-05-2022 ಬುಧವಾರದಂದು ಮೇಯರ್ ರಾಜೇಶ್ವರಿ ಹುಟ್ಟು ಹಬ್ಬ ಪ್ರಯುಕ್ತ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ನಿರ್ವಹಿಸುತ್ತಿರುವ ರೈತಣ್ಣನ ಮಧ್ಯಾಹ್ನದ ಬಿಸಿ ಊಟದ ಕಾರ್ಯಕ್ರಮಕ್ಕೆ ಶ್ರೀಮತಿ.ಎಂ.ರಾಜೇಶ್ವರಿ ಅವರು ಭೇಟಿ ನೀಡಿ ರೈತರಿಗೆ ಉಟವನ್ನು ಬಡಿಸಿ ರೈತರೊಂದಿಗೆ ಸಂವಾದ ನಡೆಸಿ ಅಲ್ಲಿಯೇ ಭೋಜನ ಸವಿದು ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರು ಮತ್ತು ರೈತಣ್ಣನ ಊಟದ ಚೇರ್‍ಮನ್‍ರಾದ ಕೆ. ಸಿ. ಸುರೇಶ್ ಬಾಬು ಅವರು ಮಹಾಪೌರರಿಗೆ ಹೂ-ಗುಚ್ಚ ನೀಡಿ ಶಾಲು ಹೊದಿಸಿ ಗೌರವಿಸಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸ್‍ರಾವ್, ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಯಶ್‍ವಂತ್‍ರಾಜ್ ನಾಗಿರೆಡ್ಡಿ,ವಿ. ರಾಮಚಂದ್ರ, ಚೇರ್‍ಮನ್, ಎ.ಪಿ.ಎಂ.ಸಿ. ಕಮಿಟಿ, ಶ್ರೀ. ಯು. ಗೋವಿಂದ ರೆಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯರು, ಮಲ್ಲಿಕಾರ್ಜುನ್ ಮಸ್ಕಿ, ಚೇರ್‍ಮನ್, ಮ್ಯಾಗ್‍ಜಿನ್ ಕಮಿಟಿ, ಎ. ಚನ್ನಪ್ಪ, ಸಂಸ್ಥೆಯ ವಿಶೇಷ ಆಹ್ವಾನಿತರು, ಭೀಮಿನೇನಿ ರಂಗಯ್ಯ, ಕಂಪ್ಲಿಯ ಪ್ರಗತಿಪರ ರೈತರು ಹಾಗು ಮಹಾಪೌರರ ತಂದೆ ಮತ್ತು ಭೀಮಿನೇನಿ ಪ್ರಸಾದ್ ಮಹಾಪೌರರ ಸಹೋದರರು ಉಪಸ್ಥಿತರಿದ್ದರು.

0 Comments