ಬಳ್ಳಾರಿ.ಮೇ.23: ಉಚಿತ ಸಾಮೂಹಿಕ ವಿವಾಹಗಳು ಬಡರಿಗೆ ಆರ್ಥಿಕ ತೊಂದರೆ ಮತ್ತು ಸಾಲಗಳಿಂದ ಮುಕ್ತಿಸಿಗಲಿದೆ ಎಂದು ಸಾರಿಗೆ ಸಚಿವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಬಿ ಶ್ರೀರಾಮುಲು ತಿಳಿಸಿದರು.
ಅವರು ನಗರದ ಸಂಗನಕಲ್ಲು ರಸ್ತೆಯಲ್ಲಿರುವ ವಿಸ್ಡಮ್‍ಲ್ಯಾಂಡ್ ಶಾಲೆಯ ಆವರಣದಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ 131ನೇ ಜಯಂತಿ ಮತ್ತು ವಿಶ್ವಗುರು ಶ್ರೀ ಬಸವಣ್ಣನವರ 889ನೇ ಜಯಂತಿಯ ಪ್ರಯುಕ್ತ ಆದಿ ಎಜುಕೇಷನ್ ಅಂಡ್ ಸೋಷಿಯಲ್ ವೆಲ್‍ಫರ್ ಟ್ರಸ್ಟ್ ಮತ್ತು ಕರ್ನಾಟಕ ದಲಿತ ನ್ಯಾಯ ಮತ್ತು ಹಕ್ಕುಗಳ ಹೋರಾಟ ಸಮಿತಿಯ ಸಹಯೋಗದಲ್ಲಿ ಸತತ ಎರಡನೇ ವರ್ಷದ 28 ಜೋಡಿಗಳ ಉಚಿತ ವಿವಾಹಗಳನ್ನು ನೆರವೇರಿಸಿಲಾಯಿತು. ಇದಕ್ಕೂ ಮುಂಚೆ 2017ನೇ ಸಾಲಿನಲ್ಲಿ 31 ಜೋಡಿ ವಿವಾಹಗಳನ್ನು ನಡೆಸಲಾಗಿತ್ತು.
ಈ ಕಾರ್ಯಕ್ರಮವನ್ನು ಕಮ್ಮರಚೇಡು ಕಲ್ಯಾಣ ಸ್ವಾಮಿಜಿ ಮತ್ತು ಸಚಿವರ ಶ್ರೀರಾಮುಲು ರವರು ದೀಪ ಬೆಳಗಿಸುವ ಮೂಲಕ 28 ಜೋಡಿಗಳಿಗೆ ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಗ್ರಾಮಿಣ ಶಾಸಕ ಬಿ ನಾಗೇಂದ್ರ, ಬೆಂಗಳೂರು ನಗರ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ, ಕಾಂಗ್ರೆಸ್ ಮುಖಡಂರಾದ ಸುನಿಲ್‍ರಾವ್, ಬಿಜಿಪಿಎ ಮುಖಂಡರಾದ ಅಬ್ದುಲ್ ಅಜೀಜ್, ಆದಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಮಹಾನಂದಿ ಕೊಟ್ಟಂ ನಿವಾಸಿ ಎಸ್.ಎಂ ವೀರೇಶ್‍ಕುಮಾರ್ ಮತ್ತು ಪದಾಧಿಕಾರಿಗಳಾದ ಗಂಗಪ್ಪ, ಸಂಗನಕಲ್ಲು ಶೇಖಣ್ಣ, ಗುರುಸಿದ್ದಪ್ಪ, ಗುರು, ಗುರುಸಿದ್ದೇಶ್ವರ, ವಿಜಯ್‍ಕುಮಾರ್, ಮಂಜುನಾಥ್, ಅರ್ಜುನ್, ರೈತನಾಯಕರಾದ ಸಂಗನಕಲ್ಲು ಕೃಷ್ಣಪ್ಪ ಸೇರಿದಂತೆ ಹಲವಾರು ಮುಖಂಡರಿದ್ದರು. ಹಾಗೂ ಬಳ್ಳಾರಿ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಮತ್ತು ವಧು-ವರರ ಬಂಧು ಭಾಂಧವರು ನವ ಜೋಡಿಗಳನ್ನು ಆಶೀರ್ವದಿಸಿದರು.
.jpg)
0 Comments