Ticker

6/recent/ticker-posts

Ad Code

Responsive Advertisement

ಟಿ.ಹೆಚ್. ಎಂ.ಶಿವಯ್ಯ ಮತ್ತು ಟಿ.ಹೆಚ್.ಎಂ.ಶಿವಗಂಗಮ್ಮ ಅವರ ದತ್ತಿ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ

ಬಳ್ಳಾರಿ ಮೇ 23. ಕನ್ನಡ ಸಾಹಿತ್ಯ ಪರಿಷತ್, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ  ಏಕೀಕರಣ ಹೋರಾಟಗಾರ ಜಸ್ಟಿಸ್ ಟಿ.ಹೆಚ್.ಎಂ ಸದಾಶಿವಯ್ಯ ಅವರ ವೇದಿಕೆ, ಚಂದನವನ ಉದ್ಯಾನ,ವೀರನಗೌಡ ಕಾಲೋನಿ, ಬಳ್ಳಾರಿಯಲ್ಲಿ ಹಮ್ಮಿಕೊಂಡಿದ್ದ ಟಿ.ಹೆಚ್. ಎಂ.ಶಿವಯ್ಯ ಮತ್ತು ಟಿ.ಹೆಚ್.ಎಂ.ಶಿವಗಂಗಮ್ಮ ಅವರ ದತ್ತಿ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋತ್ ಐ.ಎ.ಎಸ್ ಅವರು ಸಮಾಳ ಬಾರಿಸುವುದರ ಮೂಲಕ ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯ ಮತ್ತು ಸಂಸ್ಕøತಿ ಉಳಿಯಬೇಕಾದರೆ ಕಸಾಪದಿಂದ ನಡೆಯುವ ಕಾರ್ಯಕ್ರಮಗಳು ಅವಶ್ಯಕ ಎಂದು ಹೇಳಿದರು.ಮಹಾನಗರ ಪಾಲಿಕೆ ಸ್ವಚ್ಛವಾಗಿರಲಬೇಕಾದರೆ ತಮ್ಮೆಲ್ಲರ ಸಹಕಾರ ಅವಶ್ಯಕ ಎಂದು ಹೇಳಿದರು. ವಚನ ಭಾಷಾoತರ ಇತಿಹಾಸ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಟಿ.ಎಚ್. ಎಂ.ಬಸವರಾಜ ಅವರು ಬಸವಣ್ಣ ಅವರ ವಚನಗಳು ಇಪ್ಪತ್ತೇಳು ಭಾμÉಗಳಲ್ಲಿ ಅನುವಾದಿಸಲ್ಪಟ್ಟಿರುವುದು ಒಂದು ಇತಿಹಾಸ. ಇದನ್ನು ಕನ್ನಡ ಅನುವಾದ ಸಾಹಿತ್ಯದಲ್ಲಿ ದಾಖಲಿಸಬೇಕಾದ ಇತಿಹಾಸ.ವಚನ ಸಾಹಿತ್ಯ ಅನುವಾದಕ್ಕೆ ಸುದೀರ್ಘವಾದ ಇತಿಹಾಸ ಇದೆ. ಹದಿನೈದನೇ ಶತಮಾನದ ಮೊಗ್ಗೆಯ ಮಾಯಿದೇವರು ಅಲ್ಲಮಪ್ರಭುವಿನ ಷಟ್ ಸ್ಥಲವಚನಗಳನ್ನು ಪ್ರಭುಗೀತಾ ಹೆಸರಿನಲ್ಲಿ ಸಂಸ್ಕೃತಕ್ಕೆ ಅನುವಾದಿಸಿದ್ದಾರೆ.ಇದನ್ನು ಬಿಟ್ಟರೆ ಬಸವಣ್ಣ ಅವರ ವಚನಗಳು ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣಮು ಎಂಬುದರಲ್ಲಿ ಆಗಾಗ ಭಾವಾನುರೂಪದಲ್ಲಿ ಕಾಣಿಸಿಕೊಂಡಿವೆ.ಈ ರೀತಿಯಾಗಿ ಅನುವಾದಕಾರ್ಯ ಯಾವ ರೀತಿಯಲ್ಲಿ ಬೆಳವಣಿಗೆ ಹೊಂದಿದೆ ಎಂದು ಹೇಳಿದರು. ಶ್ರೀ ಕಲ್ಯಾಣ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ನೆಲ,ಜಲ,ಭಾಷೆ, ಸಂಗೀತ, ಕಲೆ ಉಳಿಸಿ ಬೆಳಸಲು ಕಸಾಪ ಸೇವೆ ಅನನ್ಯ ಎಂದರು. ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಡಾ. ನಿಷ್ಠಿರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕು ಘಟಕಗಳಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ಇರುತ್ತದೆ ಎಂದರು. ಶಿವಪ್ರಕಾಶ್ ವಸ್ತ್ರದ್,ಜಯಪ್ರಕಾಶ ಗೌಡ, ಸುಕುಮಾರ್,ಕಸಾಪ ತಾಲೂಕು ಘಟಕ ಅಧ್ಯಕ್ಷ ಎ.ಎರ್ರಿಸ್ವಾಮಿ ಸ್ವಾಮಿಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೆ.ಎಂ.ಮಹೇಶ್ವರ ಸ್ವಾಮಿ, ನಾಡಗೌಡರ ನಾಗರಾಜ ಗೌಡ,ಡಾ.ಸಿದ್ದರಾಮಯ್ಯ ಕುರ್ತಿಕೋಟಿ, ರವಿಚೇಳ್ಳಗುರ್ಕಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ದೊಡ್ಡ ಬಸವ ಗವಾಯಿಗಳು ವಚನ ಗಾಯನ ಮಾಡಿದರೆ,ಡಿ.ಇಂದ್ರಾಣಿ ನಾಟ್ಯಕಲಾ ಸಂಘ ವಚನಾಂಜಲಿ ನೃತ್ಯ ರೂಪಕ ಪ್ರದರ್ಶನ ಮಾಡಿದರು.ವಿಜಯಲಕ್ಷ್ಮಿ ರಾವ್ ತಂಡದಿಂದ ಕೋಲಾಟ ಹಾಗೂ ಜಡೇಶ್ಸ ಎಮ್ಮಿಗನೂರು ಅವರ ಜಾನಪದ ಹಾಡುಗಳು ಸಭಿಕರ ಮನಸೆಳೆದವು.

ಎ.ಎರ್ರಿಸ್ವಾಮಿ, ಜೆ.ಹುಸೇನ್ ಬಾಷ ವಕೀಲರು, ಚಂದ್ರಶೇಖರ್ ಆಚಾರ್ ಅವರು ಕಾರ್ಯಕ್ರಮ ನಿರೂಪಿಸಿದರು.ವೀರಭದ್ರ ಆಚಾರ್ ಸ್ವಾಗತಿಸಿದರು.



 



Post a Comment

0 Comments

Ad Code

Responsive Advertisement