Ticker

6/recent/ticker-posts

Ad Code

Responsive Advertisement

NRITHYA KUTEERA - BHARATHA NATYA - ನೃತ್ಯ ಕುಟೀರ ತಂಡದ ಭರತನಾಟ್ಯ ಪ್ರದರ್ಶನ

 ಬೆಂಗಳೂರಿನ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 108 ಶ್ರೀ  ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದಿಂದ್ರಾಚಾರ್ ಅವರ ನೇತೃತ್ವದಲ್ಲಿ, ಏಪ್ರಿಲ್ 7 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಕುಟೀರ ತಂಡವು ಭರತನಾಟ್ಯ ಪ್ರದರ್ಶನವನ್ನು ನೀಡಿದರು. ಗುರು ವಿದುಷಿ ದೀಪಾ ಭಟ್ ರವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ಈ ಮಕ್ಕಳು, ಭಕ್ತಿ ಪೂರ್ವ ಪ್ರದರ್ಶನ ನೀಡಿ ರಾಯರ ಕೃಪೆಗೆ ಪಾತ್ರರಾದರು.








 ಮತ್ತೊಂದು ವಿಶೇಷವೆಂದರೆ ಸ್ವತಃ ಗುರು ದೀಪಾ ಭಟ್ ಇವರು, ಆ ಕ್ಷಣಕ್ಕೆ ಅಲ್ಲೇ ನಿರ್ಧರಿಸಿ "ಇಂದು ಎನಗೆ ಗೋವಿಂದ" ಕೃತಿಗೆ ನರ್ತಿಸಿ ರಾಯರಿಗೆ ಅರ್ಪಿಸಿದ್ದು ಅಲ್ಲದೆ , ತಮ್ಮ ರಂಗಪ್ರವೇಶದ 20ನೇ ವಾರ್ಷಿಕೋತ್ಸವವನ್ನು ಈ ಮೂಲಕ ಆಚರಿಸಿಕೊಂಡರು!!

Post a Comment

0 Comments

Ad Code

Responsive Advertisement