ಕಳೆದ ಮಾರ್ಚ್ 5ನೇ ತಾರೀಖಿನಂದು ನಮ್ಮೆಲ್ಲರ ಆತ್ಮೀಯರು ಹಾಗೂ ಜಾಂಬವ ಜಾಗೃತಿ ವೇದಿಕೆ ಮುಖಾಂತರ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಬಹು ದೊಡ್ಡ ಕನಸನ್ನು ಕಂಡಿದ್ದ ಅಕ್ಷಯ ಕೃಷ್ಣಮೂರ್ತಿ ರವರ ಅಗಲಿಕೆ ಒಂದು ದೊಡ್ಡ ಆಘಾತವಾಗಿದ್ದು , ಅಗಲಿದ ಚೇತನಕ್ಕೆ ಅಕ್ಷಯ ಕೃಷ್ಣಮೂರ್ತಿ ಆತ್ಮೀಯ ಬಳಗ ಮತ್ತು ಜಾಂಬವ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ ತಿಂಗಳ 9ನೇ ತಾರೀಖಿನ ಶನಿವಾರ ಸಂಜೆ 5ಗಂಟೆಗೆ ಯಿಂದ 8 ಗಂಟೆಗೆ ವರೆಗೂ ಬೆಂಗಳೂರಿನ ನಯನ ಸಭಾಂಗಣದಲ್ಲಿ (ರವೀಂದ್ರ ಕಲಾಕ್ಷೇತ್ರ ಪಕ್ಕ ಜೆ ಸಿ ರಸ್ತೆ) ಅಕ್ಷಯ ಕೃಷ್ಣಮೂರ್ತಿ ರವರ ಭಾವಪೂರ್ಣ ಗೀತ ನಮನ , ನುಡಿ ನಮನ ಸಲ್ಲಿಸುವ ನಿಟ್ಟಿನಲ್ಲಿ ನಮ್ಮ ಸಮುದಾಯದ ಹೆಮ್ಮೆಯ ಗಾಯಕರಾದ ಸಂತವಾಣಿ ಪಿ ಸುಧಾಕರ್ ಮತ್ತು ತಂಡದವರಿಂದ ಗೀತ ಗಾಯನ ಕಾರ್ಯಕ್ರಮ ಮತ್ತು ನಮ್ಮೆಲ್ಲರ ಮೆಚ್ಚಿನ ರಾಜ್ಯಸಭಾ ಸದಸ್ಯರಾದ ಎಲ್. ಹನುಮಂತಯ್ಯ ಸರ್ , ಮಾಜಿ ಸಚಿವರು ವಿಧಾನಸಭಾ ಸದಸ್ಯರಾದ ಆರ್ ಬಿ ತಿಮ್ಮಪೂರ್ ಸೇರಿದಂತೆ ಹಲವಾರು ಗಣ್ಯರು, ಮುಖಂಡರು, ಅಧಿಕಾರಿಗಳು, ಸಂಘಟನೆಗಳ ಮುಖಂಡರು, ಗೆಳೆಯರು ಸೇರಿದಂತೆ ಅಕ್ಷಯ ಕೃಷ್ಣಮೂರ್ತಿ ಸರ್ ಕುಟುಂಬಸ್ಥರಿಂದ ನುಡಿ ನಮನ ಸಲ್ಲಿಸುವ ಮೂಲಕ ಭಾವಪೂರ್ಣ ನಮನಗಳು ಅರ್ಪಿಸಲು ನಿರ್ಧರಿಸಲಾಗಿದೆ.
ಈ ನಮನ ಕಾರ್ಯಕ್ರಮದಲ್ಲಿ ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ತಪ್ಪದೇ ಹಾಜಾರಿರಬೇಕೆಂದು ವಿನಂತಿ.

0 Comments