Ticker

6/recent/ticker-posts

Ad Code

Responsive Advertisement

Flash News: ಹಾಲಿನ ದರ ಏರಿಕೆಗೆ ರೇವಣ್ಣ ವಿರೋಧ

ನವದೆಹಲಿ, ಏ.06: ಹಾಲಿನ ದರ ಏರಿಕೆಗೆ ಮಾಜಿ ಸಚಿವ ಹಾಗೂ ಕೆಎಂಎಫ್‌ನ ಮಾಜಿ ಅಧ್ಯಕ್ಷ ಹೆಚ್.ಡಿ ರೇವಣ್ಣ ವಿರೋಧ ವ್ಯಕ್ತಪಡಿಸಿದ್ದು, ಈಗ ಹಾಲಿನ ಬೆಲೆ ಹೆಚ್ಚಳ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.

ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿವೆ. ಹಾಸನ ಹಾಲು ಒಕ್ಕೂಟದವರು ಬೆಲೆ ಏರಿಕೆ ಪ್ರಸ್ತಾಪ ಮಾಡಿಲ್ಲ.

ಬೇರೆ ಯಾವ ಒಕ್ಕೂಟದವರು ಹಾಲಿನ ದರ ಹೆಚ್ಚಳಕ್ಕೆ ಕೇಳಿದ್ದಾರೋ ಗೊತ್ತಿಲ್ಲ ಎಂದರು. ಕೆಎಂಎಫ್‌ನ ನಷ್ಟ ಸರಿದೂಗಿಸಲು ಈಗ ಬೆಲೆ ಹೆಚ್ಚಳ ಮಾಡುವುದು ಸೂಕ್ತವಲ್ಲ ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ 10 ಲಕ್ಷ ಲೀಟರ್ ಹಾಲನ್ನು ಖಾಸಗಿಯವರು ಮಾರಾಟ ಮಾಡುತ್ತಿದ್ದಾರೆ. ಇವರನ್ನು ಕೇಳುವವರು ಯಾರೂ ಇಲ್ಲ. ಹಾಲು ಮಾರಾಟ ಖಾಸಗಿಯವರ ಹಿಡಿತಕ್ಕೆ ಹೋಗುವುದನ್ನು ತಪ್ಪಿಸಬೇಕು ಎಂದರು. ದರ ಏರಿಕೆಗೆಮೊದಲು ಗ್ರಾಹಕರು ಮತ್ತು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

Varthajala Daily, Bengaluru

Post a Comment

0 Comments

Ad Code

Responsive Advertisement