Ticker

6/recent/ticker-posts

Ad Code

Responsive Advertisement

Flash News: ಒಂದೇ ಕಾಮಗಾರಿಗೆ 2 ಬಾರಿ ಹಣ ಪಾವತಿ!

ಬೆಂಗಳೂರು, ಏ.6: ಬಿಬಿಎಂಪಿಯೂ ಒಂದೇ ಗುತ್ತಿಗೆ ಕಾಮಗಾರಿಗೆ ಎರಡು ಬಾರಿ ಹಣ ಪಾವತಿ ಮಾಡಿರುವ ಆರೋಪ ಕೇಳಿಬಂದಿದ್ದು, ಕಮಿಷನ್ ಹಣಕ್ಕೆ ಬಿಬಿಎಂಪಿಯ ಹಣಕಾಸು ವಿಭಾಗದ ಅಧಿಕಾರಿಗಳೇ ಎಡವಟ್ಟು ಮಾಡಿರುವ ದೂರು ಬಂದಿದೆ.

2019 ರಲ್ಲಿ ಕಾಮಾಕ್ಷಿಪಾಳ್ಯದಲ್ಲಿ ರಾಜಕಾಲುವೆ ಕಾಮಗಾರಿ ಮಾಡಿದ್ದ ಗುತ್ತಿಗೆದಾರನೊಬ್ಬ ಬಿಲ್ ಪಾವತಿಗೆ ಬಿಬಿಎಂಪಿಗೆ 2020 ರಲ್ಲಿ ಅರ್ಜಿ ಸಲ್ಲಿಸಿದ್ದ. ಹಿರಿತನ ಇಲ್ಲದ ಕಾರಣ ಬಿಲ್ ಪಾವತಿ ಆಗಿರಲಿಲ್ಲ. ನಂತರ ಹಣಕಾಸು ವಿಭಾಗದ ಅಧಿಕಾರಿಗಳ ನೇರವಿನೊಂದಿಗೆ ಆಫ್ ಲೈನ್ ನಲ್ಲಿ ಒಂದು ಕೋಟಿ 62 ಲಕ್ಷದ 70 ಸಾವಿರದ 500 ರೂಪಾಯಿಯನ್ನು 2020 ಮಾರ್ಚ್ ನಲ್ಲಿ ಪಡೆದುಕೊಂಡಿದ್ದ ಎನ್ನಲಾಗಿದೆ. ಹಣಕಾಸು ವಿಭಾಗದಿಂದ ಗುತ್ತಿಗೆದಾರ ಮಾಡಿದ ಕೆಲಸಕ್ಕೆ ಹಣ ಪಾವತಿ ಮಾಡಲಾಗಿತ್ತು. ಆದರೆ, ಇದೆಲ್ಲಾ ಆಗಿ ಎರಡು ವರ್ಷದ ನಂತರ ಅಂದರೆ, ಕಳೆದ ತಿಂಗಳು ಇದೇ ಗುತ್ತಿಗೆದಾರನಿಗೆ ಮತ್ತೆ ಒಂದು ಕೋಟಿ 62 ಲಕ್ಷದ 70 ಸಾವಿರದ 500 ರೂಪಾಯಿಯನ್ನು ಹಣ ಮಾಡಿದ್ದಾರಂತೆ. ಒಂದು ಕಾಮಗಾರಿಗೆ ಒಂದೇ ಬಾರಿ ಹಣ ಪಾವತಿ ಮಾಡಬೇಕು. ಆದರೆ ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ಒಂದೇ ಕಾಮಗಾರಿಗೆ ಎರಡು ಎರಡು ಬಾರಿ ಹಣ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Varthajala daily, Bengaluru

Post a Comment

0 Comments

Ad Code

Responsive Advertisement