ಬೆಂಗಳೂರು, ಏ.6: ಸಿಲಿಕಾನ್ ಸಿಟಿ ಜನರಿಗೆ ಬಿಎಂಟಿಸಿ ಸಿಹಿಸುದ್ದಿ ನೀಡಿದ್ದು, ಪ್ರಯಾಣಿಕರಿಗೆ ಮೊಬೈಲ್ ಪಾಸ್ ಜಾರಿಗೆ ತರಲು ಮುಂದಾಗಿದ್ದು, ಇಂದು ಚಾಲನೆ ನೀಡಲಾಯಿತು.
ಬಿಎಂಟಿಸಿಯ ಮೊಬೈಲ್ ಪಾಸ್ ಅನ್ನು ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ ಮೂಲಕ ಖರೀದಿ ಮಾಡಬಹುದಾಗಿದ್ದು, ಮೊಬೈಲ್‌ನಲ್ಲೇ ಪಾಸ್ ತೋರಿಸಿ ಇನ್ಮುಂದೆ ಪ್ರಯಾಣಿಸಬಹುದು. ಮೊಬೈಲ್ ಆಪ್‌ನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟಾçನಿಕ್ ಟಿಕೆಟ್ ಮಿಷನ್‌ನಲ್ಲಿ ಸ್ಕಾ÷್ಯನ್ ಮಾಡಿ ಪ್ರಯಾಣಿಬಹುದಾಗಿದೆ. ಇದರಿಂದ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್ ಖರೀದಿಸುವ ಅಗತ್ಯ ವಿಲ್ಲವಾಗಲಿದೆ. ಇಷ್ಟು ದಿನ ಪೇಪರ್ ರೂಪದಲ್ಲಿ ಬಿಎಂಟಿಸಿ ಬಸ್ ಟಿಕೆಟ್ ನೀಡುತ್ತಿತ್ತು. ಇದೀಗ ಪಾಸನ್ನು ಮೊಬೈಲ್ ನಲ್ಲೇ ಕ್ಯೂಆರ್ ಕೋಡ್ ಸ್ಕಾ÷್ಯನ್ ಮಾಡಬಹುದಾಗಿದೆ.
Varthajala daily, Bengaluru

0 Comments