Ticker

6/recent/ticker-posts

Ad Code

Responsive Advertisement

Flash News: ಚೀನಾದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ನವದೆಹಲಿ, ಏ.6: ನೆರೆಯ ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದೆ. 

ಬುಧವಾರ ಒಂದೇ ದಿನ 20 ಸಾವಿರ ಸೋಂಕಿತರು ಕಂಡುಬ0ದಿದ್ದು, 23 ನಗರಗಳಲ್ಲಿ ಲಾಕ್ ಡೌನ್ ಮುಂದುವರಿಸಲಾಗಿದೆ. 'ಶೂನ್ಯ ಕೋವಿಡ್' ತಂತ್ರ ಅಳವಡಿಸಿಕೊಂಡಿರುವ ಚೀನಾ ಒಂದೇ ಒಂದು ಕೋವಿಡ್ ಪ್ರಕರಣ ಕಂಡುಬ0ದರೂ ಲಾಕ್ ಡೌನ್ ಮೊರೆ ಹೋಗುತ್ತಿದೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಚೀನಾ ಸರ್ಕಾರ ಹೇಳಿದೆ.ಅಲ್ಲದೆ, ಲಾಕ್ ಡೌನ್ ಮಾಡಿದ್ದರ ಪರಿಣಾಮ ಮಾರ್ಚ್ ವರೆಗೆ ಚೀನಾದಲ್ಲಿ ಕೋವಿಡ್ ಪ್ರಮಾಣ ಕಡಿಮೆಯಿತ್ತು. ಇನ್ನೂ, ಶಾಂಘೈನಲ್ಲಿ ಕರೋನಾ ಪತ್ತೆಗೆ ಸಾಮೂಹಿಕ ಪರೀಕ್ಷೆಯನ್ನು ಸಹ ಮಾಡಲಾಯಿತು. ಇಲ್ಲಿರುವ 2.6 ಕೋಟಿ ಜನಸಂಖ್ಯೆಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಶಾಂಘೈ ಆರೋಗ್ಯ ಅಧಿಕಾರಿಗಳು ಜನರ ಮೇಲೆ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Varthajala daily, Bengaluru

Post a Comment

0 Comments

Ad Code

Responsive Advertisement