ಬಳ್ಳಾರಿ ಏ 29.ಅಲ್ಲಾಹನ ಮೇಲೆ ವಿಶ್ವಾಸ ಇಡಬೇಕು ಪ್ರತಿ ದಿನ 5ಸಲ ನಮಾಜು ನಿರ್ವಹಿಸಬೇಕು, ಪವಿತ್ರ ಖುರಾನ್ ಓದಿರಿ, ಕೇಳಿರಿ, ಕಲಿಯಿರಿ, ಕಲಿಸಿರಿ,ರಮ್ಜಾನ್ ತಿಂಗಳ 30 ದಿನ ರೋಜಾ ಉಪವಾಸ ವ್ರತ ಮಾಡಬೇಕು, ಸಂಪಾದನೆ ಗಳಿಕೆಯಲ್ಲಿ ಎರಡೂವರೆ ದಷ್ಟು ಬಡವರಿಗೆ ದಾನ ಜಕಾತ್ ನೀಡಬೇಕು,, ಆಯುಷ್ಯದಲ್ಲಿ 1ಸಲವಾದರೂ ಹಜ್ ಯಾತ್ರೆ ಕೈಗೊಳ್ಳಬೇಕು, ವಂಚಿತರು ಸಂಬಂಧಿಕರು ನೆರೆ ಹೊರೆಯವರು ಬಡವರು ನಿರ್ಗತಿಕರಿಗೆ ಈದ್ ಉಲ್ ಫಿತ್ರ್ ಹಬ್ಬಕ್ಕೆ ಫಿತ್ರ ನೀಡಬೇಕು ಎಂದು ಸೌದಾಗರ್ ಜುಮ್ಮಾ ಸುನ್ನಿ ಮಸೀದಿ ಇಮಾಮ್ ಕಾಮಿ ಲೇ ಜಾಮಿಯಾ ನಿಜಾಮಿಯಾ ಮೌಲಾನಾ ಹಾಜಿ ಎಸ್ ಅಬ್ದುಲ್ ಸಮದ್ ನಿಜಾಮಿ ಹಾಗೂ ಖುರಾನೆ ಹಾಫಿಜ್ ಅಬ್ದುಲ್ಲಾ ಸಾಹೇಬ್ ಅವರು ಸಿರುಗುಪ್ಪದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೇಳಿದರು.
ಮಾಹೆ ರಮ್ಜಾನ್ ನೂರಾನಿ ರಾತ್ ಶುಭರಾತ್ರಿ ಶಬ್ ಎ ಲೈಲತುಲ್ ಖದರ್ ಸತಾವಿ ವಿಶೇಷ ಸಾಮೂಹಿಕ ಇಶಾ ತರಾವಿ ನಮಾಜ್ ನಿರ್ವಹಿಸಿ ಶಬೇ ಲೈಲತುಲ್ ಖದರ್ ಕುರಿತು ಉಪನ್ಯಾಸ ಭಾಷಣ ಮಾಡಿ ದಿವ್ಯ ಜೀವನ ನಮ್ಮೆಲ್ಲರಿಗೂ ಅಲ್ಲಾಹನ ಅನುಪಮಾ ಆದರ್ಶ ಸುಖ ಶಾಂತಿ ಸಮೃದ್ಧಿ ಗೊಳ್ಳಲಿ ಎಂದು ದುವಾ ಮಾಡಿದರು. ಹಾಜಿ ಎ ಮೊಹಮ್ಮದ್ ಇಬ್ರಾಹಿಂ ನಿಜಾಮಿ ಅವರು ಸಲಾತೊ ಸಲಾಂ ಓದಿದರು. ನಂತರ ತಹಜುದ್ ನಮಾಜ್ ಸಾಮೂಹಿಕವಾಗಿ ನಿರ್ವಹಿಸಿದರು ಮಸೀದಿ ಅಧ್ಯಕ್ಷ ಮಕಾಂದಾರ ಮಹಬೂಬ್ ಬಾಷಾ, ಎ ರಬ್ಬಾನಿ, ಎಸ್ ಮೊಹಮ್ಮದ್ ಇಲಿಯಾಸ್ , ಜಹೀರುದ್ದೀನ್ ಬಾಬು ,ಮಸೀದಿ ಗೌರವ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ಕರ್ನಾಟಕ ವಕ್ಫ್ ಬೋರ್ಡ್ ಮಾಜಿ ಬಳ್ಳಾರಿ ಜಿಲ್ಲಾ ಸದಸ್ಯ ಹಾಜಿ ಎ ಅಬ್ದುಲ್ ನಬಿ ನಿಜಾಮಿ, ಈದ್ಗಾ ಖಬರ್ ಸ್ಥಾನ ಅಧ್ಯಕ್ಷ ಹಂಡಿ ಹಾಶಿಮ್, ಡಾ ಮೊಹಮ್ಮದ್ ಅಲಿ, ಎ ಮೊಹಮ್ಮದ್ ನೌಶಾದ್ ಅಲಿ ,ಮೌಜನ್ ಕೆಎಂ ಹೊನ್ನೂರ್ ವಲಿ ,ಹಂಡಿ ಹುಸೇನ್ ಸಾಬ್ ಸೇರಿದಂತೆ ನೂರಾರು ಸಮುದಾಯದವರು ಈ ಶುಭರಾತ್ರಿಯಲ್ಲಿ ಭಾಗವಹಿಸಿದ್ದರು.

0 Comments