ಬಳ್ಳಾರಿ ಏ 29. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ, ಜಗತ್ತಿನಾದ್ಯಂತ ಆಚರಿಸುವ ಈದ್ ಉಲ್ ಫಿತ್ರ್ ರಂಜಾನ್ ಹಬ್ಬದ ಎಲ್ಲರಿಗೂ ಶುಭಾಶಯ ಎಂದು ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಹಾಗೂ ತಾಲ್ಲೂಕಾ ದಂಡಾಧಿಕಾರಿ ಎನ್ ಆರ್ ಮಂಜುನಾಥ ಸ್ವಾಮಿ ಶುಭ ಕೋರಿದರು. ಕರ್ನಾಟಕ ರಾಜ್ಯ ಪೋಲೀಸ್ ಕಂದಾಯ ಇಲಾಖೆಗಳ ಸಹಯೋಗದಲ್ಲಿ ಪೋಲೀಸ್ ಠಾಣಾ ಆವರಣದಲ್ಲಿ ರಂಜಾನ್ ಹಬ್ಬದ ಆಯೋಜಿಸಿದ ಶಾಂತಿ ಸಭೆಯಲ್ಲಿ ಅವರು ಮಾತನಾಡುತ್ತಾ 2ವರ್ಷಗಳಿಂದ ಕರೋನಾ ನಿರ್ಬಂಧದಿಂದ ರಂಜಾನ್ ಹಬ್ಬ ಸರಳ ರೀತಿಯಲ್ಲಿ ಆಚರಿಸಲಾಯಿತು. ಮೇ 2ಅಥವಾ 3ರಂದು ಈ ಬಾರಿ ಅರ್ಥಪೂರ್ಣವಾಗಿ ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸೋಣ ಅದೇ ದಿನ ಬಸವ ಜಯಂತಿ ಆಚರಣೆಯು ಸಹ ಇರುತ್ತದೆ ಭಾವೈಕ್ಯತೆಯಿಂದ ಎಲ್ಲರೂ ಆಚರಿಸೋಣ ಎಂದು ಹೇಳಿದರು.
ಪೋಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಯಶವಂತ ಬಿಸನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೇಶದಲ್ಲಿ ನಾಲ್ಕನೇ ಕರೋನಾ ಅಲೆ ಸೋಂಕಿತರ ಪ್ರಕರಣ ಆರಂಭವಾಗಿದೆ ಎಂದು ಆರೊಗ್ಯ ಇಲಾಖೆ ತಿಳಿಸಿದೆ, ಹುಬ್ಬಳ್ಳಿಯಲ್ಲಿ ಹಿಂದೂ ಮುಸ್ಲಿಮರ ಗಲಭೆ ನಡೆದವು ಆದರೆ ಇಲ್ಲಿ ಹಿಂದೂ ಮುಸ್ಲಿಂ ಅವರು ಸಹೋದರತೆಯಿಂದ ನಾವೆಲ್ಲರೂ ಇದ್ದೇವೆ ಕಿಡಿಗೇಡಿಗಳು ಇರುತ್ತಾರೆ ಆದರೆ ನಾವು ಅಹಿತಕರ ಘಟನೆಗಳಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಿ ಕೊಳ್ಳಬೇಕು ಎಂದು ಸರ್ವರಲ್ಲಿ ಮನವಿ ಮಾಡಿದರು. ಪೋಲೀಸ್ ಸಬ್ ಇನ್ಸ್‍ಪೆಕ್ಟರ್ ಕೆ ರಂಗಯ್ಯ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರು. ಮತ್ತು ಕಾರ್ಯಕ್ರಮ ನಿರೂಪಿಸಿದರು ಮುಸ್ಲಿಂ ಧರ್ಮ ಗುರುಗಳಾದ ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಮಾತನಾಡಿ ಮೇ 2ಅಥವಾ 3ರಂದು ರಮ್ಜಾನ್ ಹಬ್ಬದ ಕಾರಣ ನಿಮ್ಮ ಸಹಕಾರ ಇರಬೇಕು ಎಂದರು ಖತೀಬ್ ಜಹಿರುದ್ದೀನ್ ಬಾಬು ಮಾತನಾಡಿದರು. ಈದ್ಗಾ ಮತ್ತು ಖಬರಸ್ಥಾನ್ ಅಧ್ಯಕ್ಷ ಹಂಡಿ ಹಾಶಿಮ್, ಕರ್ನಾಟಕ ವಕ್ಫ್ ಬೋರ್ಡ್ ಮಾಜಿ ಬಳ್ಳಾರಿ ಜಿಲ್ಲಾ ಸದಸ್ಯ ಹಾಜಿ ಎ ಅಬ್ದುಲ್ ನಬಿ, ಸೌದಾಗರ್ ಜುಮ್ಮಾ ಸುನ್ನಿ ಮಸೀದಿ ಗೌರವ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ಎ ಮೊಹಮ್ಮದ್ ನೌಶಾದ್ ಅಲಿ ,ಡಾಕ್ಟರ್ ಮೊಹಮ್ಮದ್ ಅಲಿ ,ಲತೀಫ್ ಬಾಯಿ ಮೊಹಮ್ಮದ್ ಅಜಮ್,ನಗರಸಭಾ ಸದಸ್ಯ ಮೊದಿನ್,ಎ ರಬ್ಬಾನಿ , ಬಿ ನಗರಸಭಾ ಸದಸ್ಯ ಬಿ ವೆಂಕಟೇಶ್ ಹಿಂದೂ ಮುಸ್ಲಿಮರ ಗಣ್ಯರು ಇದ್ದರು.

0 Comments