ಬಳ್ಳಾರಿ ಏ 29. ಸಿರುಗುಪ್ಪ ನಗರದ ಸೌದಾಗರ್ ಜುಮ್ಮಾ ಮಸೀದಿಯಲ್ಲಿ ಶಬೇ ಖದರ್ ಶುಭರಾತ್ರಿ ರಮ್ಜಾನ್ ತಿಂಗಳ ರೋಜಾ ಸಹರಿ ಔತಣ ಕೂಟವನ್ನು ಈದ್ಗಾ ಮತ್ತು ಖಬರಸ್ತಾನ್ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್ ಅವರು ಏರ್ಪಡಿಸಿದ್ದರು.
ಖುರಾನ್ ಹಾಫೀಜ್ ಅಬ್ದುಲ್ಲಾ ಸಾಹೇಬ್ ,ಮೌಲಾನಾ ಹಾಜಿ ಎಸ್ ಅಬ್ದುಲ್ ಸಮದ್ ನಿಜಾಮಿ, ಜಿಲ್ಲಾ ವಕ್ಫ್ ಮಾಜಿ ಸದಸ್ಯ ಹಾಜಿ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಮಸೀದಿ ಗೌರವ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ಖತೀಬ್ ಜಹೀರುದ್ದೀನ್ ಬಾಬು, ಮೊಹಮ್ಮದ್ ನೌಶಾದ್ ಅಲಿ, ಡಾ ಮೊಹಮ್ಮದ್ ಅಲಿ, ಹಂಡಿ ಹುಸೇನ್ ಸಾಬ್, ಮೌಜನ್ ಕೆಎಂ ಹೊನ್ನೂರ್ ವಲಿ, ಮಸೀದಿಯ ಅಧ್ಯಕ್ಷ ಮಹಬೂಬ್ ಬಾಷಾ ಸೇರಿದಂತೆ ನೂರಾರು ಸಮುದಾಯದ ಆಪ್ತರು ಭಾಗವಹಿಸಿದ್ದರು ಮತ್ತು ದುವಾ ಮಾಡಿದರು.

0 Comments