ಬೆಂಗಳೂರಿನ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ (ಟಿಟಿಡಿ) ವತಿಯಿಂದ ಏಪ್ರಿಲ್ 23 ರಂದು ಏರ್ಪಡಿಸಿದ್ದ "ಊಂಜಲ್ ಸಂಗೀತೋತ್ಸವ" ಕಾರ್ಯಕ್ರಮದಲ್ಲಿ ಕು|| ಭಾವನಾ ಉಮೇಶ್ ಇವರು, ಅನ್ನಮಾಚಾರ್ಯರ ಕೀರ್ತನೆಗಳಾದ "ಅಯಮೇವ ಅಯಮೇವ", "ಗೋವಿಂದಾಶ್ರಿತ ಗೋವಿಂದ", "ಜೋ ಅಚ್ಯುತಾನಂದ" ಈ ಮೂರು ಕೃತಿಗಳನ್ನು ಹಾಡಿದ ನಂತರ ಶ್ರೀನಿವಾಸ ದೇವರಿಗೆ ಮಂಗಳಾರತಿ ಆದನಂತರ, ಕಾರ್ಯಕ್ರಮವನ್ನು ಮುಂದುವರಿಸಿ, "ಅದಿವೋ ಅಲ್ಲದಿವೋ" (ಅನ್ನಮಯ್ಯ), "ನಿನ್ನನ್ನೇ ನಂಬಿದೆ ನೀರಜನಯನ" (ಪುರಂದರದಾಸರು), "ಬ್ರಹ್ಮ ಮೊಕ್ಕಟೇ ಪರಬ್ರಹ್ಮ ಮೊಕ್ಕಟೇ"(ಅನ್ನಮಯ್ಯ), "ಹಾಲುಕ್ಕಿತೋ ರಂಗ ಹಾದಿಯ ಬಿಡೋ", "ವೆಂಕಟಾಚಲ ನಿಲಯಂ", "ನಿನ್ನ ನೋಡಿ ಧನ್ಯನಾದೆನೋ", "ನಂಬಿದೆ ನಿನ್ನ ಪಾದವ", (ಪುರಂದರದಾಸರು), "ಏನ ಬೇಡಲಿ ನಿನ್ನ ಬಳಿಗೆ ಬಂದು" (ಗೋಪಾಲದಾಸರು), "ತಿಳಿಯದೋ ನಿನ್ನಾಟ", (ವ್ಯಾಸರಾಯರು), "ಹರಿನಾಮ ಜಪ್ಹೆಯೊಳಗಿರಬೇಕು" (ಪುರಂದರದಾಸರು), "ನರಜನ್ಮ ಬಂದಾಗ, ನಾಲಿಗೆ ಇರುವಾಗ ಕೃಷ್ಣ ಎನ್ನಬಾರದೇ" (ಪುರಂದರದಾಸರು) ಮುಂತಾದ ಇನ್ನೂ ಹಲವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶ್ರೀ ಶ್ರೀನಿವಾಸ ಕಾಖಂಡಕಿ ಮತ್ತು ಶ್ರೀ ಅಮಿತ್ ಶರ್ಮಾ ಅವರು ವಾದ್ಯ ಸಹಕಾರ ನೀಡಿದರು.
.jpeg)
0 Comments