Ticker

6/recent/ticker-posts

Ad Code

Responsive Advertisement

ಜೆಡಿಎಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತೆ ಜನತೆ ಆಶೀರ್ವಾದ ಮಾಡಬೇಕಿದೆ..

 ಮಧುಗಿರಿ : ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತೆ ಜನತೆ ಆಶೀರ್ವಾದ ಮಾಡಬೇಕೆಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಮ್ಮ ರಾಜ್ಯದ ನದಿಗಳ ನೀರು ನಮ್ಮ ಪಾಲಿಗೆ ದಕ್ಕುತ್ತಿಲ್ಲ ಅಂತರಾಜ್ಯ ನದಿ ವಿವಾದಗಳಿಂದ ಸಮಸ್ಯೆ ಬಗೆಹರಿದಿಲ್ಲ. ನಮ್ಮ ಭಾಗದಲ್ಲಿ ಸದಾ ಬರಗಾಲವಿದ್ದು ಕುಡಿಯುವ ನೀರಿಗೂ ತೊಂದರೆಯಿದೆ ನೇತ್ರಾವತಿ ನದಿಯ 2 ಸಾವಿರ ಟಿಎಂಸಿ ಯಷ್ಟು ನೀರು ಸಮುದ್ರ ಸೇರುತ್ತಿದೆ ನೀರಾವರಿ ವಿಷಯದ ಬಗ್ಗೆ ಸಂಪೂರ್ಣ ಅರಿವಿರುವ ಹೆಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಹೆಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ ಮಾತ್ರ ನೀರಾವರಿ ಸಮಸ್ಯೆಗಳು ಬಗೆಹರಿಯಲು ಸಾದ್ಯ ಎಂದರು.

ಬಾಕ್ಸ್ : 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ನಾನೇ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಎಂದು ತಿಳಿಸಿದ ವೀರಭದ್ರಯ್ಯ ಯಾರು ಆತಂಕ ಪಡುವ ಅಗತ್ಯವಿಲ್ಲ ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಮುಂದಿನ ಚುನಾವಣೆಯಲ್ಲೂ ಕೂಡ ನಾನೇ ಗೆಲ್ಲುತ್ತೇನೆ ಎಂದು ಕಾರ್ಯಕರ್ತರಲ್ಲಿದ್ದ ಗೊಂದಲಗಳಿಗೆ ತೆರೆ ಎಳೆದರು.

ಪುರಸಭಾ ಸದಸ್ಯ ಎಂ.ಆರ್. ಜಗನ್ನಾಥ್ ಮಾತನಾಡಿ, ನೀರಾವರಿ ಯೋಜನೆಗಳಿಂದ ಕೃಷಿ ಕ್ಷೇತ್ರ ಬಲಿಷ್ಠ ಗೊಳ್ಳುವುದರಿಂದ ಈ ದೇಶ ಸುಭಿಕ್ಷವಾಗಲಿದ್ದು ರೈತರ ಬದುಕು ಹಸನಾಗಲಿದೆ ಹೆಚ್.ಡಿ ಕುಮಾರಸ್ವಾಮಿ ಸಿ.ಎಂ ಆಗಿದ್ದಾಗ ರೈತರ ಸಾಲ ಮನ್ನಾಮಾಡಿದ್ದರು. ಮುಂಬರುವ ಚುನಾವಣೆಯಲ್ಲಿ ಎಂ.ವಿ.ವೀರಭದ್ರಯ್ಯರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಸರಕಾರ ವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದರು. 

ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ ಮಾತನಾಡಿ, ಹೆಚ್.ಡಿ.ಕೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿಯಾಗಿದ್ದು ನಮ್ಮ ರಾಜ್ಯಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಲು ಬದ್ದರಾಗಿದ್ದಾರೆ ಎಂದರು.

ತುಮಕೂರು ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಎಸ್.ಆರ್.ಲಕ್ಷ್ಮಮ್ಮ, ತಾ.ಜೆ.ಡಿ.ಎಸ್ ಅಧ್ಯಕ್ಷ ಬಸವರಾಜು, ನಗರ ಘಟಕದ ಅಧ್ಯಕ್ಷ  ಎಂ.ಎಸ್. ಚಂದ್ರಶೇಖರ್ ಬಾಬು, ಪುರಸಭಾ ಸದಸ್ಯರಾದ ಕೆ.ನಾರಾಯಣ್, ನರಸಿಂಹಮೂರ್ತಿ, ಮುಖಂಡರುಗಳಾದ ಹನುಮಂತರಾಯಪ್ಪ, ಸಿಡದರಗಲ್ಲು ಶ್ರೀನಿವಾಸ್, ಬಿಜವರ ಶ್ರೀನಿವಾಸ್, ದತ್ತಣ್ಣ, ಸುರೇಶ್, ರಾಮ್ ರೆಡ್ಡಿ, ಚೌಡಪ್ಪ, ತಿಮ್ಮಣ್ಣ, ಮೋಹನ್, ವಿಜಯ್ ಕುಮಾರ್, ನಾಜೀಮ್, ಕೀರ್ತಿಶ್ರೀ, ಗೀತಮ್ಮ, ಶ್ರೀಕುಮಾರ್, ರಘು, ಚಂದ್ರಕುಮಾರ್, ಗೋವಿಂದರಾಜು, ಶಿವಣ್ಣ, ಶಿವಪ್ಪನಾಯಕ, ಶಫೀಕ್, ಜಿ.ಆರ್. ಧನಪಾಲ್ ಇದ್ದರು.

ಜಲಧಾರೆ ರಥಯಾತ್ರೆಯನ್ನು ಜೆಡಿಎಸ್ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿದರು. 

ವರದಿ: ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement