Ticker

6/recent/ticker-posts

Ad Code

Responsive Advertisement

ಸಹಕಾರನಗರ ಉದ್ಯಾನವನಕ್ಕೆ ಎಸ್.ಶ್ರೀನಿವಾಸ ರಾಜು"_ ಹೆಸರು ನಾಮಕರಣ

ಬೆಂಗಳೂರು :   ನಗರದ ಪ್ರತಿಷ್ಠಿತ ಭಾಗಗಳಲ್ಲೊಂದಾಗಿ ಹೆಸರುಗಳಿಸಿರುವ  ಬೆಂಗಳೂರು ಉತ್ತರ ಭಾಗದ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೇರುವ  ಸಹಕಾರ ನಗರದ ಗಣೇಶ ದೇವಸ್ಥಾನದ ಮುಂಭಾಗದಲ್ಲಿರುವ ಉದ್ಯಾನವನಕ್ಕೆ ಸ್ಥಳೀಯ ಶಾಸಕರಾದ ಕೃಷ್ಣ ಭೈರೇಗೌಡರು    "ಶ್ರೀ ಎಸ್. ಶ್ರೀನಿವಾಸ ರಾಜು ಉದ್ಯಾನವನ" ಎಂದು ನಾಮಕರಣ ಮಾಡಿ ಲೋಕಾರ್ಪಣೆ ಮಾಡಿದರು. 


ಈ ಸಂದರ್ಭದಲ್ಲಿ ಯಲಹಂಕ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಪ್ರಸನ್ನ ಕುಮಾರ್, ಬ್ಯಾಟರಾಯನಪುರ ನಗರಸಭೆಯ ಮಾಜಿ ಅಧ್ಯಕ್ಷ ಎಂ.ಹನುಮಂತೇಗೌಡರು, ಬೆಂಗಳೂರು ಮಾಜಿ ಉಪ ಮಹಾಪೌರರಾದ ಎಂ.ಆನಂದ್‌, ಮಾಜಿ ಪಾಲಿಕೆ ಸದಸ್ಯರುಗಳಾದ ಜಯ್ಯಪ್ಪರೆಡ್ಡಿ, ಕೆ.ಎಂ.ಚೇತನ್, ಶ್ರೀಮತಿ ರತ್ನಮ್ಮ ಶ್ರೀನಿವಾಸ ರಾಜು,  ಎಸ್. ಪ್ರದೀಪ್ ರಾಜು,  ದೇವೇಂದ್ರ,  ದೇವರಾಜಪ್ಪ, ಸ್ಥಳೀಯ ಕಾಂಗ್ರೆಸ್‌ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಕುವೆಂಪುನಗರ ಬ್ಲಾಕ್ ಕಾಂಗ್ರೆಸ್‌ ಕಮಿಟಿ ಉಪಾಧ್ಯಕ್ಷ ಎಲ್.ವೀರಣ್ಣ,  ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಆರ್.ವೆಂಕಟರಾಜುರವರ ಅಚ್ಚುಕಟ್ಟಾದ ನಿರೂಪಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Post a Comment

0 Comments

Ad Code

Responsive Advertisement