Ticker

6/recent/ticker-posts

Ad Code

Responsive Advertisement

ಆರ್ಯವೈಶ್ಯ ಮಹಾಸಭಾ ಕಾರ್ಯಕಾರಿ ಚುನಾವಣೆ ಮುಕ್ತ ಜಿಲ್ಲೆ ಚಿಕ್ಕಬಳ್ಳಾಪುರ

 **

 ಆರ್ಯವೈಶ್ಯ ಮಹಾಸಭಾ ಕಾರ್ಯಕಾರಿ  ಸಮಿತಿ ಸದಸ್ಯರ ಚುನಾವಣೆಗೆ ದಿನಾಂಕ:-23/04/2022 ರಂದು  ಚಿಕ್ಕಬಳ್ಳಾಪುರ  ಜಿಲ್ಲೆಯು 4  ಕ್ಷೇತ್ರಗಳನ್ನು ಒಳಗೊಂಡಿದ್ದು 1.ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಕ್ಷೇತ್ರ 2.ಚಿಂತಾಮಣಿ ಕ್ಷೇತ್ರ 3.ಗೌರಿಬಿದನೂರು ಕ್ಷೇತ್ರ4.ಗುಡಿಬಂಡೆ, ಬಾಗೇಪಲ್ಲಿ, ಚೇಳೂರು ಮೂರು ತಾಲ್ಲೂಕುಗಳು ಸೇರಿ ಒಂದು ಕ್ಷೇತ್ರ.ಈ ರೀತಿ 4 ಕ್ಷೇತ್ರಗಳಿಗೆ 4 ಅಭ್ಯರ್ಥಿಗಳಿಗೆ ಜಿಲ್ಲೆಯಾದ್ಯಂತ ಸುಮಾರು 10 ಸದಸ್ಯರು ಸ್ಪರ್ಧಿಸಿದ್ದು ಅಂದರೆ1.ಕೆ.ವಿ. ಸುಕುಮಾರ್






2.ಎಸ್.ವಿ.ನಾಗಭೂಷಣಂ 3.ಎನ್. ರಮೇಶ್  ಬಾಬು,4.ಎಂ .ಎನ್.ರಾಮಮೋಹನ್,5 ಜಿ.ಆರ್. ಅರುಣ್ ಕುಮಾರ್ 6.ಬಿ.ಆರ್.ನಾಗರಾಜ್ 7.ಡಿ. ಎನ್. ಅಮರನಾಥ ಗುಪ್ತ 8.ಎಸ್.ರಮೇಶ್ ಬಾಬು(ರೂಪಾಶ್ರೀರಮೇಶ್),9ಎನ್ ಆರ್.ಕಾಳಿ ಪ್ರಸಾದ್ 10.ಜಿ.ಸುಬ್ಬರಾಯ ಶೆಟ್ಟಿ

ಈ ರೀತಿಯಾಗಿ 10 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಇದರಲ್ಲಿ 5 ಅಭ್ಯರ್ಥಿಗಳು ನಾಮಪತ್ರ ಗಳನ್ನು  ಹಿಂಪಡೆದಿದ್ದು 1 ಬಾಗೇಪಲ್ಲಿ ಕ್ಷೇತ್ರಕ್ಕೆ    ತೀವ್ರ ಪೈಪೋಟಿ ಎದುರಿಸಬೇಕಾಗಿದ್ದು ನಾಗರಾಜು ಮತ್ತು ಸುಬ್ಬರಾಯ ಶೆಟ್ಟಿಗೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.ಚುನಾವಣೆ ನಡೆಸಲೇಬೇಕು ಎಂಬ ನಾಗರಾಜ್ ರವರ ಹೇಳಿಕೆ ಯಾಗಿತ್ತು ಕಡೆಗೂ ಹಿರಿಯ ಮುಖಂಡರು ಮತ್ತು ಮಾಜಿ ಸದಸ್ಯರು ಸೇರಿ ನಾಗರಾಜ್ ರವರನ್ನು  ಮನವೊಲಿಸಿ ಕಣದಿಂದ ದೂರ ಉಳಿಯಲು ಹೇಳಿ ನಾಮಪತ್ರ ವಾಪಸ್ ಪಡೆಯಲು ಯಶಸ್ವಿಯಾಗಿರುತ್ತಾರೆ.

ಕಡೆಗೆ  ನಾಗರಾಜ್ ರವರು ಕೂಡ ಎಲ್ಲರ ಮಾತನ್ನು ಆಲಿಸಿ  ಸಂಘದ ಅಭಿವೃದ್ಧಿಗೆ ಒತ್ತುಕೊಟ್ಟು ನಾಮಪತ್ರ ವಾಪಸ್ ಪಡೆದಿರುತ್ತಾರೆ. ಕಡೆಯದಾಗಿ 4 ಕ್ಷೇತ್ರಗಳಿಗೆ 4 ಅಭ್ಯರ್ಥಿಗಳು ಇರುವುದರಿಂದ ಇರುವವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿರುತ್ತದೆ. ಅಂದರೆ ಗೌರಿಬಿದನೂರು  ಕ್ಷೇತ್ರಕ್ಕೆ ಎಂ.ಎನ್ ರಾಮಮೋಹನ್, ಚಿಂತಾಮಣಿ ಕ್ಷೇತ್ರಕ್ಕೆ ಡಿ.ಎನ್.ಅಮರನಾಥ ಗುಪ್ತ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ರಮೇಶ್ ಬಾಬು ಎಸ್( ರೂಪಶ್ರೀ ರಮೇಶ್) ಬಾಗೆಪಲ್ಲಿ,ಗುಡಿಬಂಡೆ ಚೇಳೂರು ಕ್ಷೇತ್ರಗಳಿಗೆ ಜಿ.ಸುಬ್ಬರಾಯ ಶೆಟ್ಟಿ  ಎಲ್ಲಾ ಮುಖಂಡರು ಅಭ್ಯರ್ಥಿಗಳು ಒಮ್ಮತದಿಂದ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ.

ಇದಕ್ಕೆ ಜಿಲ್ಲಾ ಸಂಘದ ಅಧ್ಯಕ್ಷರಾದ ನಂಜುಂಡ ರಾಮಯ್ಯ ಶೆಟ್ಟಿ ಮಾಜಿ ಈಸಿ ಸದಸ್ಯರಾದ ಶ್ರೀಧರ್ ಮತ್ತು ಬಿ .ಆರ್. ಎಸ್ ಮತ್ತು ಕಾರ್ಯದರ್ಶಿಗಳಾದ ಎ. ಎನ್ ರಮೇಶ್ ಗುಪ್ತ  ಮತ್ತು ಆರ್ಯವೈಶ್ಯ ಮಹಾ ಸಭೆಯ ಅಧ್ಯಕ್ಷರು ಮತ್ತು ಮುಖಂಡರುಗಳಾದ ಆರ್ .ಪಿ .ರವಿಶಂಕರ್ ಮತ್ತು ಅಖಿಲ ಭಾರತ ಆರ್ಯ ವೈಶ್ಯ ಮಹಾ ಸಭಾ ಪ್ರಧಾನ ಕಾರ್ಯ ದರ್ಶಿಗಳಾದ ಕೆ. ಆರ್ .ಕೃಷ್ಣ ಮತ್ತು ಬಿಜೆಪಿ ಮುಖಂಡರಾದ ಪಿ.ಸುರೇಶ್ ಮತ್ತು ಗುಡಿಬಂಡೆ ಪಟ್ಟಣ ಪಂಚಾಯಿತಿ ಸದಸ್ಯರಾದ ಸಿ.ಆರ್ .ಮಂಜುನಾಥಗುಪ್ತ ಮತ್ತುLIC ನಾಗಭೂಷಣ ರವರುಗಳ ಪರಿಶ್ರಮದಿಂದ  ಚುನಾವಣಾ ಮುಕ್ತ  ಜಿಲ್ಲೆ ಯಾಗಿರುತ್ತದೆ.

ಇದಕ್ಕೆ ತುಂಬಾ ಸಹಕರಿಸಿದ ಎಲ್ಲರ ಮಾತಿಗೂ ಬೆಲೆಕೊಟ್ಟು ಜನಾಂಗೀಯ ಸಂಘವು ಬೆಳೆಯಬೇಕು ಎಂಬ ಉದ್ದೇಶದಿಂದ ಇದಕ್ಕೆ ಕೈಜೋಡಿಸಿದ ಬಿ .ಆರ್. ನಾಗರಾಜ್ ರವರಿಗೆ ಎಲ್ಲರೂ ಶುಭ ಹಾರೃಸಿದ್ದು ವಿಶೇಷವಾಗಿರುತ್ತದೆ .

Post a Comment

0 Comments

Ad Code

Responsive Advertisement