Ticker

6/recent/ticker-posts

Ad Code

Responsive Advertisement

ಜ್ಞಾನಯಜ್ಞ ದಾಸವಾಣಿ ಶ್ರೀ ಹರಿ ಭಜನೆ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ  ನಂಜನಗೂಡುಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ108  ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಹಾಗೂ  ಟಿ,ಟಿ,ಡಿ,ಹಿಂದೂ ಧರ್ಮ ಪ್ರಚಾರ ಪರಿಷತ್ ನ ಸಹಕಾರದೊಂದಿಗೆ ಇದೇ ಏಪ್ರಿಲ್ 26 ನೇ ತಾರೀಖಿನಿಂದ 29 ನೇ ತಾರೀಖಿನವರೆಗೆ ವಿಶೇಷವಾಗಿ ಶ್ರೀ ಹರಿ ಭಜನೆ, ಪ್ರವಚನ, ದಾಸವಾಣಿ, ಉತ್ಸವ ಇತ್ಯಾದಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ, 26 ನೇ ತಾರೀಕು ಸಂಜೆ 6 ರಿಂದ 7 ವರೆಗೆ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಜಯನಗರ ವೃಂದದಿಂದ  ಶ್ರೀಹರಿ ಭಜನೆ, ಸಂಜೆ 7 ರಿಂದ 8 ರವರೆಗೆ ಪ್ರವಚನ ವಿದ್ವಾನ್ - ವಿನಾಯಕ ಆಚಾರ್ಯರಿಂದ, 27-4-2022 ರಂದು ಸಂಜೆ 6 ರಿಂದ 7 ರವರೆಗೆ ಶ್ರೀ ಭೀಮೇಶ ಕೃಷ್ಣ ಭಜನಾ ಮಂಡಳಿ ಶ್ರೀನಿವಾಸನಗರ ವೃಂದದಿಂದ  ಶ್ರೀ ಹರಿ ಭಜನೆ,  

7 ರಿಂದ 8 ಪ್ರವಚನ, 28-4-2022 ರಂದು ಗುರುವಾರದ ಪ್ರಯುಕ್ತ ಸಂಜೆ 6 ರಿಂದ ದೀಪೋತ್ಸವ ,ಪಲ್ಲಕ್ಕಿ ಉತ್ಸವ ರಥೋತ್ಸವ, ಗಜವಾಹನ ಉತ್ಸವ     ದೊಂದಿಗೆ ಸ್ವಸ್ತಿವಾಚನ ಮಹಾ ಮಂಗಳಾರತಿ 8 ರವರೆಗೆ, ಈ ದಿನ ಸಂಜೆ 8 ರಿಂದ 9-30 ರವರೆಗೆ ಕುಮಾರಿ-ಸುಶ್ರಾವ್ಯ ಆಚಾರ್ಯ,ವೃಂದದಿಂದ "ದಾಸವಾಣಿ"ಕಾರ್ಯಕ್ರಮವೂ, ನೆರವೇರಲಿದೆ , 29-4-2022 ರಂದು ಸಂಜೆ 6 ರಿಂದ 7 ವರೆಗೆ ಶ್ರೀ ವಾಣಿ ಭಜನಾ ಮಂಡಳಿ ಚಿಕ್ಕಲಸಂದ್ರ ವೃಂದದಿಂದ ಶ್ರೀಹರಿ ಭಜನೆ, 7 ರಿಂದ 8 ವರೆಗೆ ಪ್ರವಚನ ಮಂಗಳ ಮಹೋತ್ಸವದ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ  ಕಾರ್ಯಕ್ರಮಗಳು ಶ್ರೀಮಠದ ಆವರಣದಲ್ಲಿ ನಡೆಯಲಿದೆ.

  




ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ , ಕೆ ವಾದೀಂದ್ರ ಆಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದು ಈ ಸಂದರ್ಭದಲ್ಲಿ ಶ್ರೀಕೃಷ್ಣಗುಂಡಾ- ಚಾರ್ಯ, ಶ್ರೀ ನಂದಕಿಶೋರ್ ಆಚಾರ್ಯ, ಶ್ರೀ ಸುಧೀಂದ್ರ ದೇಸಾಯಿ ಹಾಗೂ ಮಠದ ಸಿಬ್ಬಂದಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು,

Post a Comment

0 Comments

Ad Code

Responsive Advertisement