Ticker

6/recent/ticker-posts

Ad Code

Responsive Advertisement

ಕಂದಾಯ ತನಿಖಾಧಿಕಾರಿಗಳ ವಿರುದ್ದ ಸರ್ಕಾರ ಶಿಸ್ತು ಕ್ರಮ ತೆಗೆದುಕೊಳ್ಳಬೇಕು

 ಮಧುಗಿರಿ - ಬಗರ್ ಹುಕುಂ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಕೆಲವು ಕಂದಾಯ ತನಿಖಾಧಿಕಾರಿಗಳು ಕಡತಗಳನ್ನು ಮಂಡಿಸುವಲ್ಲಿ ವಿಫಲರಾಗಿದ್ದು, ಇಂತಹ ಕಂದಾಯ ತನಿಖಾಧಿಕಾರಿಗಳ ವಿರುದ್ದ ಸರ್ಕಾರ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಬಗರ್ ಹುಕುಂ ಕಮಿಟಿಯ ಸದಸ್ಯರು ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.


ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಮಿತಿ ಸದಸ್ಯರು, ತಾಲೂಕಿನ ಐಡಿಹಳ್ಳಿ ಕೊಡಿಗೇನಹಳ್ಳಿ ಮಿಡಿಗೇಶಿ ಹೋಬಳಿಗಳ ಕಂದಾಯ ತನಿಖಾಧಿಕಾರಿಗಳು ಶಾಸಕ ಎಂಬಿ ವೀರಭದ್ರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಿತಿ ಸಭೆಯಲ್ಲಿ ಪ್ರತಿ ಸಭೆಯಲ್ಲಿ ನೂರು ಕಡತಗಳನ್ನು ಪ್ರತಿಯೊಬ್ಬ ಕಂದಾಯ ತನಿಖಾಧಿಕಾರಿಗಳು ಮಂಡಿಸಬೇಕು ಎಂದು ನೋಟಿಸ್ ಜಾರಿ ಮಾಡಿದ್ದರು ಕೂಡ ಕಡತಗಳನ್ನು ಮಂಡಿಸದ ಕಾರಣ ಫಲಾನುಭವಿಗಳಿಗೆ ನಾನಾ ರೀತಿಯ ತೊಂದರೆಗಳಾಗಿದ್ದು, ಕರ್ತವ್ಯಲೋಪ ಎಸಗಿದ ಕಂದಾಯ ತನಿಖಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಹಾಗೂ ಕೆಲವು ಸಾಗುವಳಿ ಪತ್ರಗಳ ಖಾತೆ ಪಹಣಿ ಮಾಡಿರುವುದಿಲ್ಲ. ಪಲಾನುಭವಿಗಳ ಬಳಿ ಹಣ ಪಡೆದು ಸಾಗುವಳಿ ಚೀಟಿ ನೀಡಿಲ್ಲ. ಕೆಲವು ಕಡೆ ಸುಳ್ಳು ಸಾಗುವಳಿ ಚೀಟಿ ನೀಡಿ ವಂಚನೆ ಎಸಗಿದ್ದಾರೆ. ಇದಕ್ಕೆಲ್ಲ ಕಾರಣರಾದವರನ್ನು ಕಂಡು ಹಿಡಿದು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಮಿಟಿ ಸದಸ್ಯರಾದ ಜೆ.ಹೆಚ್.ನಾರಾಯಣ್, ಪ್ರಸನ್ನ ಕುಮಾರ್, ಉಮಾದೇವಿ ಹಾಗೂ ಮತ್ತಿತರರು ಇದ್ದರು. 

ವರದಿ: ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement