Ticker

6/recent/ticker-posts

Ad Code

Responsive Advertisement

ಭಾರತ್ ಕೋ - ಆಪರೇಟಿವ್ ಬ್ಯಾಂಕ್ ನಷ್ಟದಲ್ಲಿಲ್ಲ - ಎಂ ವೀರಪ್ಪ

ಬೆಂಗಳೂರು: ದಿ ಭಾರತ್ ಕೋಪರೇಟಿವ್ ಬ್ಯಾಂಕ್ ಲಿ  ಆರ್ಥಿಕ ದಿವಾಳಿಯಾಗಿ ನಷ್ಟದಲ್ಲಿದೆ ಎಂದು ಅನೇಕ ಮಾಧ್ಯಮಗಳಲ್ಲಿ ಬಿಂಬಿತವಾಗಿದೆ ಆದರೆ ಇದು ಸತ್ಯಕ್ಕೆ ದೂರವಾದ ಸಂಗತಿ ಎಂದು ಬ್ಯಾಂಕಿನ ಉಪಾಧ್ಯಕ್ಷರಾದ ಎಂ ವೀರಪ್ಪ ಇಂದು ತಿಳಿಸಿದರು  

 


 ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು ಭಾರತ್ ಕೋ - ಆಪರೇಟಿವ್ ಬ್ಯಾಂಕ್ ಲಿ  , ಬೆಂಗಳೂರು ಇದು 2021-22 ಆರ್ಥಿಕ ವರ್ಷದಲ್ಲಿ ರೂ .10 ಕೋಟಿಗಳಿಗಿಂತ ಹೆಚ್ಚಿನ ಒಟ್ಟು ಲಾಭ ಗಳಿಸಿದೆ . ಕೆಲವು ಮಾಧ್ಯಮಗಳಲ್ಲಿ ನಷ್ಟದಲ್ಲಿರುವ " 41 ಅರ್ಬನ್ ಕೋ - ಆಪರೇಟಿವ್ ಬ್ಯಾಂಕುಗಳು ಎಂದು ಬಿಂಬಿಸಲಾಗಿತ್ತುನಮ್ಮ ಬ್ಯಾಂಕಿನ ಹೆಸರನ್ನು ಸೇರಿಸಿ ಪ್ರಕಟವಾಗಿತ್ತು. 2020-21ನೇ ಸಾಲಿನಲ್ಲಿ ಹೂಡಿಕೆಗಳ ಮೇಲೆ ಆರ್.ಬಿ. ಮಾರ್ಗಸೂಚಿ ಪ್ರಕಾರ ಅವಕಾಶ ಕಲ್ಪಿಸಿದ್ದರಿಂದ ಬ್ಯಾಂಕು ನಷ್ಟ ಹೊಂದಲು ಪ್ರಮುಖ ಕಾರಣವಾಗಿರುತ್ತದೆ . ಬ್ಯಾಂಕು ಉತ್ತಮ ಸ್ಥಿತಿಯಲ್ಲಿದೆ.

 ಲೆಕ್ಕಪರಿಶೋಧನಾ ವರದಿಯಲ್ಲಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನವರು ನಡೆಸಿದ ಪರಿವೀಕ್ಷಣಾ ವರದಿಯಲ್ಲಿ ಯಾವುದೇ ಹಣದುರಪಯೋಗ ಮತ್ತು ವಂಚನೆ ಪ್ರಕರಣಗಳು ವರದಿಯಾಗಿರುವುದಿಲ್ಲ .  ಮಾಹಿತಿಗೆ ಬ್ಯಾಂಕಿನ ಸದಸ್ಯರು , ಠೇವಣಿದಾರರು ಹಾಗೂ ಗ್ರಾಹಕರು ಭಯಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ . ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಭವಿಷ್ಯದಲ್ಲಿ ಬ್ಯಾಂಕಿನ ಪ್ರಗತಿಗೆ ಶ್ರಮಿಸಲು ಆಡಳಿತ ಮಂಡಳಿಯು ಬದ್ಧವಾಗಿದೆ ಎಂದರು.

 

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ಅನಿತಾನಂದಿನಿನಂಜುಂಡೇಗೌಡಗಂಗಾಧರಪಿಳ್ಳನಜನಪ್ಪ  ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು. 


Post a Comment

0 Comments

Ad Code

Responsive Advertisement