ಜಯನಗರದ ಐದನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಸನ್ನಿಧಿಯಲ್ಲಿ ಪರಮಪೂಜ್ಯ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹ ದೊಂದಿಗೆ ಗುರುವಾರದ ಪ್ರಯುಕ್ತ ರಾಯರ ಬೃಂದಾವನಕ್ಕೆ ವಿಶೇಷ ಅಭಿಷೇಕ ಅಲಂಕಾರ ಹಾಗೂ ಸಂಜೆ ಉತ್ಸವದೊಂದಿಗೆ ಮಹಾಮಂಗಳಾರತಿಯು ನೆರವೇರಿತು .
ಈ ಸಂದರ್ಭದಲ್ಲಿ ಕುಮಾರಿ-ಭಾವನಾ ಉಮೇಶ್ ವೃಂದದವರು ದಾಸವಾಣಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಎಂದು ಪುರೋಹಿತರಾದ ನಂದಕಿಶೋರ್ ಆಚಾರ್ಯ ತಿಳಿಸಿದರು ಇದೇ ಸಂದರ್ಭದಲ್ಲಿ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರು ಮಾತನಾಡುತ್ತಾ 15 ನೇ ತಾರೀಕು ಶುಕ್ರವಾರ ದಿನದಂದು ಪರಮಪೂಜ್ಯ ಶ್ರೀ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರ ಜನ್ಮ ದಿನೋತ್ಸವದ ಅಂಗವಾಗಿ ವಿಶೇಷ ಪೂಜಾ ಹೋಮಾ ದಿಗಳು ನೆರವೇರಲಿದೆ ಎಂದು ತಿಳಿಸಿದರು,16 ನೇ ತಾರೀಕು ಶನಿವಾರದಂದು ಹುಣ್ಣಿಮೆ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಬೆಳಗ್ಗೆ9 ಗಂಟೆಗೆ ನೆರವೇರುತ್ತದೆ, ಈ ಸೇವೆಯಲ್ಲಿ ಭಾಗವಹಿಸುವ ಭಕ್ತರು ಈ ವಾಟ್ಸಪ್ ನಂಬರ್ 9449133929 ಕ್ಯಾಟ್ಲಾಗ್ ಮುಖಾಂತರ ಸೇವೆ ಸಲ್ಲಿಸಬಹುದು ,


0 Comments