ಕನ್ನಡದ ಖ್ಯಾತ ನೃತ್ಯಪಟು ಕರ್ನಾಟಕ ಕಲಾಶ್ರೀ ಪ್ರವೀಣ್ ಕುಮಾರ್ ಅವರ ಶಿಷ್ಯೆ ಐಸಿರಿ ಪಿ ಶೆಟ್ಟಿ ಅವರ ರಂಗಾಭಿವಂದನೆ 14-4-2022 ರ ನಾಳೆ ಸಂಜೆ 6 ಕ್ಕೆ ನಗರದ ಎಡಿಎ ರಂಗ ಮಂದಿರದಲ್ಲಿ ನಡೆಯಲಿದೆ. ಗುರು ಕಲಾಮಂಡಲಂ ಶ್ರೀಮತಿ ಉಷಾ ದಾತಾರ್, ಖ್ಯಾತ ಸಿನೆಮಾ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮ ಕುರಿತ ವಿವರವುಳ್ಳ ಆಹ್ವಾನ ಪತ್ರಿಕೆಯನ್ನು ಲಗತ್ತಿಸಿದೆ.
ಅಮ್ಮಚ್ಚಿಯೆಂಬ ನೆನಪು ನಂತಹ ಬಾವನಾತ್ಮಕ ಚಿತ್ರವನ್ನು ಕನ್ನಡ ಚಿತ್ರ ರಂಗಕ್ಕೆ ಕೊಟ್ಟ ಚಿಂತನಾತ್ಮಕ ನಿರ್ದೇಶಕಿ ಚಂಪಾ ಶೆಟ್ಟಿ ಹಾಗೂ ರಂಗ ನಿರ್ದೇಶಕ ಪ್ರಕಾಶ್ ಶೆಟ್ಟಿ ಅವರ ಮಗಳಾಗಿರುವ ಐಸಿರಿ ಶೆಟ್ಟಿ ಚಿತ್ಕಲಾ ಶಾಲೆಯಲ್ಲಿ ಗುರು ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಒಂಭತ್ತನೇಯ ವಯಸ್ಸಿನಿಂದಲೇ ಶಾಸ್ತ್ರೀಯವಾಗಿ ಭರತನಾಟ್ಯದ ಅಭ್ಯಾಸದಲ್ಲಿ ತೊಡಗಿದ್ದು ಅನೇಕ ಪ್ರತಿಷ್ಠಿತ ಉತ್ಸವಗಳಲ್ಲಿ ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ರಂಗ ಮಂಟಪ ತಂಡದ ಮೂಲಕ ನಾಟಕದಲ್ಲೂ ತಮ್ಮ ನೃತ್ಯ ಛಾಪು ಬೀರಿದ ಪ್ರತಿಭೆ.
ದಯಮಾಡಿ ನಗರದ ಇಂದಿನ ಕಾರ್ಯಕ್ರಮದಲ್ಲಿ ಪ್ರಕಟಿಸಿ, ..ಸುದ್ಧಿವಾಹಿನಿಯಲ್ಲಿ ಸುದ್ಧಿ ಮಾಡುವ ಮೂಲಕ ಕರೋನಾ ನಂತರ ಮತ್ತೆ ಚಿಗುರೊಡೆಯುತ್ತಿರುವ ಸಾಂಸ್ಕೃತಿಕ ಲೋಕದ ಕಾರ್ಯಕ್ರಮಕ್ಕೆ ಹಾಗೂ ಯುವ ಪ್ರತಿಭೆಗೆ ಪ್ರೋತ್ಸಾಹಿಸಬೇಕೆಂದು ಈ ಮೂಲಕ ಕೋರಿಕೊಳ್ಳುತ್ತಿದ್ದೇನೆ.
ಇತಿ ತಮ್ಮ ವಿಶ್ವಾಸಿ
ಡಾ.ರಾಧಾಕೃಷ್ಣ ಉರಾಳ ಕೆ.










0 Comments