Ticker

6/recent/ticker-posts

Ad Code

Responsive Advertisement

ಬಳ್ಳಾರಿ ಜಿಲ್ಲಾ ವಾಣಿಜ್ಯ -ಕೈಗಾರಿಕಾ ಸಂಸ್ಥೆಯ ವತಿಯಿಂದ ಸೇವಾ ತೆರಿಗೆ ವಿಶೇಷ ಕಾರ್ಯಾಗಾರ

ಬಳ್ಳಾರಿ ಏ 28. ನಗರದ ಬಿ. ಡಿ. ಎ. ಎ. ಸಭಾಂಗಣದಲ್ಲಿ ದಿನಾಂಕ 28-04-2022 ಗುರುವಾರದಂದು ಸರಕು ಮತ್ತು ಸೇವಾ ತೆರಿಗೆ ವಿಷಯವಾಗಿ ವಿಶೇಷ ಕಾರ್ಯಾಗಾರವನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿತ್ತು. ಈ ಸಭೆಯ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಬಿ. ವಿ. ಮುರಳಿಕೃಷ್ಣ, ಹೆಚ್ಚುವರಿ ಆಯುಕ್ತರು, (ಈ-ಆಡಳಿತ) ವಾಣಿಜ್ಯ ತೆರಿಗೆ ಇಲಾಖೆ, ಕೆ. ಸುನಿಲ ಕುಮಾರ್ ನಾಯರ್, ಐ ಆರ್ ಎಸ್, ಸಹಾಯಕ ಆಯುಕ್ತರು, ಸಿ. ಜಿ. ಎಸ್. ಟಿ, ಬಳ್ಳಾರಿ ವಿಭಾಗ, ಶ್ರೀಮತಿ. ಬಿ. ಪವಿತ್ರ, ಜಂಟಿ ಆಯುಕ್ತರು, (ಜಾರಿ) ವಾಣಿಜ್ಯ ತೆರಿಗೆ ಇಲಾಖೆ, ಬಳ್ಳಾರಿ ಇವರು ಭಾಗವಹಿಸಿದ್ದರು. ಸರಕು ಮತ್ತು ಸೇವಾ ತೆರಿಗೆಯ ವಿಶೇಷ ಕಾರ್ಯಾಗಾರವನ್ನು ಪಿ. ಪಾಲಣ್ಣ, ಚೇರ್‍ಮನ್, ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ ಸಸಿಗೆ ನೀರುಣಿಸುವ ಮೂಲಕ ನೆರವೇರಿಸಿದರು. 

ವಾಣಿಜ್ಯ ತೆರಿಗೆ ಇಲಾಖೆ, ಸಂಸ್ಥೆಯ ಅಧ್ಯಕ್ಷರಾದ ಸಿ. ಶ್ರೀನಿವಾಸ್ ರಾವ್, ಗೌರವ ಕಾರ್ಯದರ್ಶಿಗಳಾದ  ಯಶ್‍ವಂತ್‍ರಾಜ್ ನಾಗಿರೆಡ್ಡಿ, ಹಿರಿಯ ಉಪಾಧ್ಯಕ್ಷರಾದ ಬಿ. ಮಹರುದ್ರಗೌಡರು, ಲೆಕ್ಕಪರಿಶೋಧಕರ ಸಂಘದ ಚೇರ್‍ಮನ್‍ರಾದ ವಿನೋದ್ ಬಾಗ್ರೇಚಾ ಮತ್ತು ತೆರಿಗೆ ಸಲಹಗಾರರ ಸಂಘದ ಚೇರ್‍ಮನ್‍ರಾದ ಶ್ರೀಧರ್ ಪಾರ್ಥ್‍ಸಾರಥಿ ಇವರುಗಳು ಜೊತೆಗೂಡಿದರು. ಸಂಸ್ಥೆಯ ಅಧ್ಯಕ್ಷರಾದ ಸಿ. ಶ್ರೀನಿವಾಸ್ ರಾವ್ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಂಸ್ಥೆಯು ನಡೆದ ಬಂದ ದಾರಿ ಮತ್ತು ಸಂಸ್ಥೆಯ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾ ಸಂಸ್ಥೆಯ ವತಿಯಿಂದ ವರ್ತಕರು, ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ ಸಹಕಾರಿಯಾಗುವ ಇಂತಹ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ಆಯೋಜಿಸುತ್ತೇವೆ. ಇದರ ಲಾಭವನ್ನು ತಾವುಗಳು ಪಡೆದುಕೊಳ್ಳಬೇಕಾಗಿ ಕೋರಿದರು.

 ಕೆ. ಸುನಿಲ ಕುಮಾರ್ ನಾಯರ್, ಐ ಆರ್ ಎಸ್, ಸಹಾಯಕ ಆಯುಕ್ತರು, ಸಿ. ಜಿ. ಎಸ್. ಟಿ, ಬಳ್ಳಾರಿ ವಿಭಾಗ ಮಾತನಾಡಿ ಕಳೆದ 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ ಪದ್ದತಿ ಜಾರಿಗೆ ಬಂದಾಗ ವರ್ತಕರಲ್ಲಿ ವ್ಯಾಪಾರಸ್ಥರಲ್ಲಿ ಸಾಕಷ್ಟು ಗೊಂದಲಗಳಿದ್ದವು, ಆದರೆ ಕಾಲಕ್ರಮೇಣ ಹೊಸ ಪದ್ದತಿಯನ್ನು ಬಹುತೇಕ ಅರ್ಥ ಮಾಡಿಕೊಂಡಿದ್ದಾರೆ. ಆದರೂ ವರ್ತಕರು, ವ್ಯಾಪಾರಸ್ಥರಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತಾಗಿ ಏನೇ ಸಮಸ್ಯೆಗಳಿದ್ದರೂ ನಮ್ಮ ಕಛೇರಿಗೆ ನೇರವಾಗಿ ಬಂದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಸಭೆಗೆ ತಿಳಿಸಿದರು. ನಂತರ ಮಾತನಾಡಿದ ಶ್ರೀಧರ್ ಪಾರ್ಥ್‍ಸಾರಥಿ, ಮತ್ತು ತೆರಿಗೆ ಸಲಹಗಾರರ ಸಂಘದ ಚೇರ್‍ಮನ್ ಅವರು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಸಹಕಾರದಿಂದಾಗಿ ನಾವು ಸೂಚಿಸಿದ ಬಹುತೇಕ ಸಲಹೆಗಳು ಜಿ. ಎಸ್. ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಿ ಜಾರಿಗೆ ಬಂದಿವೆ. 

ಅಲ್ಲದೇ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಸರಕು ಮತ್ತು ಸೇವಾ ತೆರಿಗೆ ಪಾವತಿಸಿರುವ ಕೀರ್ತಿ ಬಳ್ಳಾರಿಯ ಪಾಲಾಗಿದೆ. ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡುತ್ತದೆ ಎಂದು ನುಡಿದರು. ಬಿ. ವಿ. ಮುರಳಿಕೃಷ್ಣ, ಹೆಚ್ಚುವರಿ ಆಯುಕ್ತರು, (ಈ ಆಡಳಿತ) ಸರಕು ಮತ್ತು ಸೇವೆ ತೆರಿಗೆಗಳಲ್ಲಿ ಕಾಲಕಾಲಕ್ಕೆ ಆದ ಬದಲಾವಣೆಗಳನ್ನು ಸವಿವರವಾಗಿ ತಿಳಿಸುತ್ತಾ ಪ್ರಾತ್ಯಕ್ಷಕಿಯೆ ಮೂಲಕ ಸರಕು ಮತ್ತು ಸೇವಾ ತೆರಿಗೆ ಪದ್ದತಿಯ ಮಾಹಿತಿಯನ್ನು ಸಭಿಕರಿಗೆ ತಿಳಿಸಿ ಸಭಿಕರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮಚಿತ್ತದಿಂದ ಉತ್ತರಿಸಿ ಎಲ್ಲರ ಗೊಂದಲಗಳಿಗೆ ತೆರೆ ಎಳೆದರು. ಈ ಮಧ್ಯೆ ಟ್ಯಾಲಿ ಸರ್ಟಿಫೈಡ್ ಪಾರ್ಟ್‍ನರ್‍ನ ಚೇತನ್ ಇನಸ್ಟಿಟ್ಯೂಟ್ ಆಫ್ ಬಿಸಿನೆಸ್ ಸೊಲ್ಯೂಷನ್ಸ್ ಬಳ್ಳಾರಿ ಇವರು ಪ್ರಾಯೋಗಿಕವಾಗಿ ಈ ವೇ ಬಿಲ್ಲಿಂಗ್, ಈ ಇನ್ವಾಯ್ಸ್ ಕುರಿತು ಟ್ಯಾಲಿ ಮೂಲಕ ಮಾಹಿತಿಯನ್ನು ನೀಡಿದರು.


Post a Comment

0 Comments

Ad Code

Responsive Advertisement