ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ವತಿಯಿಂದ ಶ್ರೀಮತಿ ಶ್ರೀದೇವಿ ಜಗದೀಶ ಹಾಗೂ ಶ್ರೀ ವೈ.ಎಂ.ಜಗದೀಶ ಪುತ್ರಿ ಮತ್ತು ಗುರು ಶ್ರೀಮತಿ ಶ್ವೇತ ವೆಂಕಟೇಶ ರವರ ಶಿಷ್ಯೆ ಕು||ಮೋನಿಷಾ ಐಸಿರಿ ಗೌಡ ರವರ ಕಥಕ್ ರಂಗಮಂಚ ಪ್ರವೇಶವು ಮೇ 3 ,ಸಂಜೆ 6.00 ಗಂಟೆಗೆ ನಗರದ ವೈಯಾಲಿಕಾವಲ್ ನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯಲಿದೆ.
ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಹಾಗು ನಂದಿನಿ ಕೆ ಮೆಹ್ತ ರವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಬಾಲ್ಯದಿಂದಲೇ ನೃತ್ಯಾಭಾಸ ಆರಂಭಿಸಿದ ಕು| ಮೋನಿಷಾ ಕಥಕ ನೃತ್ಯ ಪ್ರಕಾರದಲ್ಲಿ ಡಾ.ಮಾಯಾರಾವ್ ರವರ ಬಳಿ ಪ್ರಾರಂಭಿಕ ಅಭ್ಯಸಿಸಿ ಭರತನಾಟ್ಯದಲ್ಲಿ ಡಾ.ಸುಪರ್ಣ ವೆಂಕಟೇಶ್ ರವರಿಂದ ಕಲಿತು ಇದೀಗ ಗುರು ಶ್ರೀಮತಿ ಶ್ವೇತ ವೆಂಕಟೇಶ ರವರಲ್ಲಿ ಕಥಕ್ ತರಬೇತಿ ಪಡೆಯುತ್ತಿದ್ದಾರೆ . ಬೆಂಗಳೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ .




0 Comments