ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಅವರು ಇಂದು ಕುರುಬರಹಳ್ಳಿ ತಮ್ಮ ಸ್ವ ಗೃಹದಲ್ಲಿ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷರಾದ ನರೇಂದ್ರ ಬಾಬು, ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ ಎಸ್ ಹರೀಶ್ ಆರ್ ವಿ ಹರೀಶ್, ಎನ್ ಜಯರಾಂ, ವೆಂಕಟೇಶ್ ಮೂರ್ತಿ, ನಾಗರತ್ನ ಲೋಕೇಶ್ ಜಯಸಿಂಹ, ಮಂಜುನಾಥ್, ಅವಿನ್ ಆರಾಧ್ಯ ಗಂಗ ಹನುಮಯ್ಯ, ರಾಘವೇಂದ್ರ ನಾಗರಾಜ್ ನಿಸರ್ಗ ಜಗದೀಶ್ ಲೋಕೇಶ್, ಬೀ ನಾರಾಯಣ ಸ್ವಾಮಿ ಜಯಲಕ್ಷ್ಮಿ ಮೈತ್ರಿ ಸೇರಿದಂತೆ ಹಲವು ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಘವೇಂದ್ರ ಶೆಟ್ಟಿ ಅವರು ಕ್ಷೇತ್ರದ ಪೌರ ಕಾರ್ಮಿಕರಿಗೆ ಸೀರೆ ವಿತರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಹಾಗೂ ಪತ್ರಿಕಾ ಮಾಧ್ಯಮದವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

0 Comments