Ticker

6/recent/ticker-posts

Ad Code

Responsive Advertisement

ಕಪ್ಪು ಹಣಕ್ಕೆ ಹುಡುಕಾಡಿ ಕಳ್ಳತನಗೈದ ಭೂಪರು…!

ಬೆಂಗಳೂರು: ಮನೆಯಲ್ಲಿ ಅಕ್ರಮವಾಗಿ  2 ಕೋಟಿ ಕ್ಯಾಶ್ ಇಡಲಾಗಿತ್ತು,  ಬ್ಲಾಕ್ ಮನಿ ಇರೋ ಮಾಹಿತಿ ತಿಳಿದು ಇತ್ತ ಕಳ್ಳರು ಎರಡು ಕೋಟಿ ರೂ.ಗಳ ಕಳ್ಳತನ ಮಾಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಲಾಗಿದೆ.


ಮಧ್ಯಪ್ರದೇಶ ಮೂಲದ ಸಂದೀಪ್ ಲಾಲ್ ಮನೆಯಲ್ಲಿ  ಮಾರ್ಚ್ 28ರಂದು 2 ಕೋಟಿ ಕ್ಯಾಶ್ ಎಗರಿಸಿ ಕಳ್ಳರು ಪರಾರಿಯಾಗಿದ್ದರು. ಸಂದೀಪ್ ಲಾಲ್ ರಿಯಲ್ ಎಸ್ಟೇಟ್, ಆರ್ಕಿಟೆಕ್ಟ್ ಮಾಡ್ತಿದ್ದ.   ಕಳ್ಳತನದ ಬಗ್ಗೆ ಕೊಟ್ಟ ದೂರಿನಲ್ಲಿ ಹಣದ ಮಾಹಿತಿಯೇ  ಇಲ್ಲ.  2 ಕೋಟಿ ಕ್ಯಾಶ್ ಕಳ್ಳತನವಾದ್ರೂ ಪೊಲೀಸರು FIR ನಲ್ಲಿ ತೋರಿಸಿರಲಿಲ್ಲ. ಆರೋಪಿಗಳ ಪತ್ತೆಗೆ 4 ತಂಡ ರಚನೆ ಮಾಡಿ, CCTV ದೃಶ್ಯ ಆಧರಿಸಿ ತನಿಖೆ ನಡೆಸಲಾಗಿದೆ.

ಕಳ್ಳತನ ನಡೆದ ನಾಲ್ಕು ದಿನಗಳ ನಂತರ ದಿಲೀಪ್, ಸುನೀಲ್ ಅರೆಸ್ಟ್ ಮಾಡಲಾಗಿದ್ದು,  2 ಕೋಟಿ ಕಳ್ಳತನವಾದ್ರೂ  1.76 ಕೋಟಿ ಕ್ಯಾಶ್ ಮಾತ್ರ ರಿಕವರಿಯಾಗಿದೆ.  ಕಪ್ಪು ಹಣದ ಮಾಹಿತಿ ತಿಳಿದು ಈ ಕಳ್ಳತನ ಕೃತ್ಯಕ್ಕೆಕೈ ಹಾಕಲಾಗಿದ್ದು, ಮನೆಯಲ್ಲಿ ಸಿಕ್ಕ ಫಿಂಗರ್ ಪ್ರಿಂಟ್ ನಿಂದ ದಿಲೀಪ್ ಮಾಹಿತಿ ಸಿಕ್ಕಿದೆ.  FIR ದಾಖಲಿಸುವಾಗ ಪೊಲೀಸರು ED, IT ಇಲಾಖೆಗೆ ಮಾಹಿತಿ ನೀಡಿದ್ದು,  ಕೋಟ್ಯಾಂತರ ಹಣ ರಿಕವರಿ ನಂತರ ಐ.ಟಿ. ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.



ಈ ಹಣ ಎಲ್ಲಿಂದ ಬಂತು ಎಂದು  ಪೊಲೀರು  ಸಂದೀಪ್ ಲಾಲ್ ವಿಚಾರಣೆ ಮಾಡದ ಹಿನ್ನೆಲೆ  ಕುಮಾರಸ್ವಾಮಿ ಲೇಔಟ್ ಪೊಲೀಸರ ತನಿಖೆ ಅನುಮಾನಕ್ಕೆ ಕಾರಣವಾಗಿದೆ.



Post a Comment

0 Comments

Ad Code

Responsive Advertisement