Ticker

6/recent/ticker-posts

Ad Code

Responsive Advertisement

ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ - ಕ್ರೀಡಾ ಪೋಷಕ ಪ್ರಶಸ್ತಿ ಗೌರವ

ಕರ್ನಾಟಕ ಸರ್ಕಾರವು ಕ್ರೀಡಾಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ರಾಜ್ಯದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳನ್ನು ನಾಡಿಗೆ ಕೊಡುಗೆ ನೀಡಿರುವ ಹಿರಿಯ ಕ್ರೀಡಾಪಟುಗಳು/ ತರಬೇತುದಾರರುಗಳಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು 1992ನೇ ಸಾಲಿನಿಂದ ನೀಡುತ್ತಾ ಬಂದಿದೆ. ಏಕಲವ್ಯ ಪ್ರಶಸ್ತಿಯು ಏಕಲವ್ಯನ ಕಂಚಿನ ಪ್ರತಿಮೆಸ್ಕ್ರೋಲ್ಸಮವಸ್ತ್ರ ಮತ್ತು ರೂ.2.00 ಲಕ್ಷಗಳ ನಗದು ಬಹುಮಾನವನ್ನೊಳಗೊಂಡಿರುತ್ತದೆ. ಹಾಗೂ ಜೀವಮಾನ ಸಾಧನೆ ಪ್ರಶಸ್ತಿಯು ಪ್ರಶಸ್ತಿ ಫಲಕಸಮವಸ್ತ್ರ ಮತ್ತು ರೂ.1.50 ಲಕ್ಷಗಳ ನಗದು ಬಹುಮಾನವನ್ನೊಳಗೊಂಡಿರುತ್ತದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಅವರು ಮಾಹಿತಿ ನೀಡಿದರು.

 

           ಗ್ರಾಮೀಣ ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ 2014ನೇ ಸಾಲಿನಿಂದ ಗ್ರಾಮೀಣ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯು ಪ್ರಶಸ್ತಿ ಫಲಕಸ್ಕ್ರೋಲ್ಸಮವಸ್ತ್ರ ಮತ್ತು ರೂ.1.00 ಲಕ್ಷಗಳ ನಗದು ಬಹುಮಾನವನ್ನೊಳಗೊಂಡಿರುತ್ತದೆ.

 

ರ್ನಾಟಕ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕ್ರೀಡಾ ಪ್ರವರ್ತಕರನ್ನು ಗುರುತಿಸಿ ಕ್ರೀಡಾ ಪೋಷಕ ಪ್ರಶಸ್ತಿಯನ್ನು 2017-18ನೇ ಸಾಲಿನಿಂದ ನೀಡುತ್ತಿದೆ. ಕ್ರೀಡಾ ಪೋಷಕ ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು ರೂ.5.00 ಲಕ್ಷಗಳ ನಗದು ಬಹುಮಾನವನ್ನೊಳಗೊಂಡಿರುತ್ತದೆ.

 

ಏಕಲವ್ಯ ಪ್ರಶಸ್ತಿ ಆಯ್ಕೆ ಮಾನದಂಡ: ಅರ್ಜಿ ಆಹ್ವಾನಿಸಿದ ವರ್ಷದ ಹಿಂದಿನ 5 ವರ್ಷಗಳಲ್ಲಿನ ಕ್ರೀಡಾಸಾಧನೆ ಹಾಗೂ ಅತೀ ಶ್ರೇಷ್ಠ3 ಸಾಧನೆಗಳ ಆಧಾರದ ಮೇಲೆ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಕ್ರೀಡೆಯಲ್ಲಿ ಗಣನೀಯ ಸಾಧನೆ ಮಾಡಿದ ಕ್ರೀಡಾಪಟುವನ್ನು ಗುರುತಿಸಿ ನೇರವಾಗಿ ಆಯ್ಕೆ ಸಮಿತಿ ಅಥವಾ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಬಹುದಾಗಿದೆ

 

ಜೀವಮಾನ ಸಾಧನೆ ಪ್ರಶಸ್ತಿ ಆಯ್ಕೆ ಮಾನದಂಡ:  ಹಿರಿಯ ಕ್ರೀಡಾಪಟುಗಳು /ತರಬೇತುದಾರರು ಕ್ರೀಡಾಪಟುವಾಗಿ ಮಾಡಿದ ಸಾಧನೆತರಬೇತಿ ನೀಡಿದ ಕ್ರೀಡಾಪಟುಗಳ ಸಾಧನೆ ಹಾಗೂ ಕ್ರೀಡಾಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. 

 

ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಆಯ್ಕೆ ಮಾನದಂಡ: ಗ್ರಾಮೀಣ ಮತ್ತು ವಿಶಿಷ್ಟ ಕ್ರೀಡೆಗಳಲ್ಲಿ ಅರ್ಜಿ ಆಹ್ವಾನಿಸಿದ ವರ್ಷದ ಹಿಂದಿನ 5 ವರ್ಷಗಳಲ್ಲಿನ ಕ್ರೀಡಾಸಾಧನೆ ಹಾಗೂ ಅತೀ ಶ್ರೇಷ್ಠ 3 ಸಾಧನೆಗಳ ಆಧಾರದ ಮೇಲೆ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. 

 

ಕ್ರೀಡಾ ಪೋಷಕ ಪ್ರಶಸ್ತಿ ಆಯ್ಕೆ ಮಾನದಂಡ: ಕ್ರೀಡಾ ಪ್ರತಿಭೆಗಳನ್ನು ಎಳೆಯ ಹಂತದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸುತ್ತಿರುವಕ್ರೀಡಾಪಟುಗಳಿಗೆ ಉದ್ಯೋಗಶಿಕ್ಷಣ ನೀಡುತ್ತಿರುವಕ್ರೀಡೆಯನ್ನುಅಭಿವೃದ್ದಿಯ ಸಾಧನವಾಗಿ ಪರಿಗಣಿಸಿ ಕ್ರೀಡಾಸ್ಪರ್ಧೆ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಹಾಗೂ ಕಂಪನಿಗಳ ಸಾಮಾಜಿಕ ಜವಾಬ್ದಾರಿ ಅಡಿ ಕ್ರೀಡೆಗೆ ಪ್ರೋತ್ಸಾಹ ನೀಡಿಕ್ರೀಡಾಪಟುಗಳ ಕ್ರೀಡಾಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಸಂಸ್ಥೆಗಳು/ ವಿಶ್ವವಿದ್ಯಾನಿಲಯಗಳು/ ಕಂಪನಿಗಳಿಗೆ ಕ್ರೀಡಾ ಪೋಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

 

ಪ್ರಸಕ್ತ ಸಾಲಿನಲ್ಲಿ 2020 ನೇ ಸಾಲಿನ ಏಕಲವ್ಯಜೀವಮಾನ ಸಾಧನೆಕರ್ನಾಟಕಕ್ರೀಡಾರತ್ನ ಪ್ರಶಸ್ತಿ ಹಾಗೂ 2021-22 ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

 

2020ನೇ ಸಾಲಿನಲ್ಲಿ ಸ್ವೀಕರಿಸಲಾದ ಅರ್ಜಿಗಳ ವಿವರ

 

ವರ್ಷ

ಏಕಲವ್ಯ

ಜೀವಮಾನ ಸಾಧನೆ

ಕರ್ನಾಟಕ ಕ್ರೀಡಾರತ್ನ

ಕರ್ನಾಟಕ ಕ್ರೀಡಾ ಪೋಷಕ

2020

151

28

53

25

 

2020ನೇ ಸಾಲಿನಲ್ಲಿ ಪ್ರಶಸ್ತಿ ನೀಡಲಾಗುತ್ತಿರುವ ಸಂಖ್ಯೆ

 

ಏಕಲವ್ಯ

ಜೀವಮಾನ ಸಾಧನೆ

ಕರ್ನಾಟಕ ಕ್ರೀಡಾರತ್ನ

ಕರ್ನಾಟಕ ಕ್ರೀಡಾ ಪೋಷಕ

15

02

14

10

 

 

2020ನೇ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃತರ ಹೆಸರು

ಕ್ರ.ಸಂ

 ಹೆಸರು

ಕ್ರೀಡೆ

ಕ್ರ.ಸಂ

 ಹೆಸರು

ಕ್ರೀಡೆ

1

ಜೀವನ್ಕೆ.ಎಸ್

ಅಥ್ಲೆಟಿಕ್ಸ್

9

ನಿತಿನ್

ನೆಟ್ಬಾಲ್

2

ಅಶ್ವಿನಿಭಟ್

ಬ್ಯಾಡ್ಮಿಂಟನ್

10

ಜಿತರುಣ್ಕೃಷ್ಣಪ್ರಸಾದ್

ರೋಯಿಂಗ್

3

ಲೋಪಮುದ್ರಾತಿಮ್ಮಯ್ಯ

ಬ್ಯಾಸ್ಕೆಟ್ಬಾಲ್

11

ಲಿಖಿತ್ಎಸ್.ಪಿ

ಈಜು

4

ಕರುಣ್ನಾಯರ್

ಕ್ರಿಕೆಟ್

12

ಅನರ್ಘ್ಯಮಂಜುನಾಥ್

ಟೇಬಲ್ ಟೆನ್ನಿಸ್

5

ದಾನಮ್ಮಚಿಚಖಂಡಿ

ಸೈಕ್ಲಿಂಗ್

13

ಅಶ್ವಲ್ರೈ

ವಾಲಿಬಾಲ್

6

ವಸುಂಧರಾಎಂ.ಎನ್.

ಜುಡೋ

14

ಪ್ರಧಾನ್ಸೋಮಣ್ಣ

ಹಾಕಿ

7

ಪ್ರಶಾಂತ್ಕುಮಾರ್ರೈ

ಕಬಡ್ಡಿ

15

ರಾಧಾವಿ

ಪ್ಯಾರಾ ಅಥ್ಲೆಟಿಕ್ಸ್

8

ಮುನೀರ್ಬಾಷಾ

ಖೋ-ಖೋ

 

 

 

 

2020 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ

 

ಕ್ರ.ಸಂ

ಹೆಸರು

ಕ್ರೀಡೆ

1

ಗಾವಂಕರ್ಜಿ.ವಿ.

ಅಥ್ಲೆಟಿಕ್ಸ್

2

ಕ್ಯಾಪ್ಟನ್ ದಿಲೀಪ್ ಕುಮಾರ್

ಕಯಾಕಿಂಗ್ ಕನೋಯಿಂಗ್

 

2020ನೇ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ

 

ಕ್ರ.ಸಂ.

ಹೆಸರು

ಕ್ರೀಡೆ

1

ಪೂಜಾಗಾಲಿ

ಆಟ್ಯಾ-ಪಾಟ್ಯಾ

2

ಬಿ.ಎನ್ಕಿರಣ್ಕುಮಾರ್

ಬಾಲ್ ಬ್ಯಾಡ್ಮಿಂಟನ್

3

ಗೋಪಾಲನಾಯ್ಕ್

ಕಂಬಳ

4

ದೀಕ್ಷಾಕೆ

ಖೋ-ಖೋ

5

ಶಿವಯೋಗಿಬಸಪ್ಪಬಾಗೇವಾಡಿ

ಗುಂಡುಕಲ್ಲು ಎತ್ತುವುದು

6

ಲಕ್ಷ್ಮೀಬಿರೆಡೆಕರ್

ಕುಸ್ತಿ

7

ಪಿಗೋಪಾಲಕೃಷ್ಣ

ಯೋಗ

8

ರಾಘವೇಂದ್ರಎಸ್ಹೊಂಡದಕೇರಿ

ಪವರ್ಲಿಫ್ಟಿಂಗ್

9

ಸಿದ್ದಪ್ಪಪಾಂಡಪ್ಪಹೊಸಮನಿ

ಸಂಗ್ರಾಣಿಕಲ್ಲು ಎತ್ತುವುದು

10

ಸೂರಜ್ಎಸ್ಅಣ್ಣಿಕೇರಿ

ಕುಸ್ತಿ

11

ಶಶಾಂಕ್ಬಿ.ಎಂ

ಪ್ಯಾರಾ ಈಜು

12

ಡಿ.ನಾಗಾರಾಜು

ಯೋಗ

13

ಶ್ರೀವರ್ಷಿಣಿ

ಜಿಮ್ನಾಸ್ಟಿಕ್

14

ಅವಿನಾಶ್ವಿನಾಯ್ಕ

ಜುಡೋ


Post a Comment

0 Comments

Ad Code

Responsive Advertisement