ಬೆಂಗಳೂರು, ಏಪ್ರಿಲ್ 04 (ಕರ್ನಾಟಕ ವಾರ್ತೆ) : ಸಕಾಲ ಯೋಜನೆಯಡಿ 2022ರ ಫೆಬ್ರವರಿ ಮಾಹೆಯವರೆಗೆ 26.56 ಕೋಟಿ ಅರ್ಜಿಗಳನ್ನು ಸ್ವೀಕರಿಸಿದ್ದು, 26.41 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
ಇವರು ಇಂದು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸಕಾಲ ದಶಮಾನೋತ್ಸವ ಕಾರ್ಯಕ್ರಮದಲ್ಲಿ ನವೀಕೃತ ಜಾಲತಾಣ ಲೋಕಾರ್ಪಣೆ ಮಾಡಿದರು. ಸಕಾಲ ಯೋಜನೆ ರಾಜ್ಯದಲ್ಲಿ ಪ್ರಾರಂಭವಾಗಿ ಏಪ್ರಿಲ್ 2ಕ್ಕೆ 10 ವರ್ಷಗಳನ್ನು ಪೂರೈಸಿದ್ದು ದಶಮಾನೋತ್ಸವ ಆಚರಿಸಲಾಗಿತ್ತಿದೆ ಎಂದರು.
ಪ್ರಾರಂಭದಲ್ಲಿ 11 ಇಲಾಖೆಗಳ 151 ಸೇವೆಗಳೊಂದಿಗೆ ಆರಂಭವಾದ ಸಕಾಲ ಯೋಜನೆಯು ಪ್ರಸ್ತುತ 99 ವಿವಿಧ ಇಲಾಖೆ-ಸಂಸ್ಥೆಗಳ 1,115 ಸೇವೆಗಳನ್ನು ನೀಡುವ ಕಾರ್ಯಕ್ರಮವಾಗಿದೆ. ಈ ಯೋಜನೆಯನ್ನು ಸಕಾಲ 2.0ಗೆ ಉನ್ನತೀಕರಿಸಲಾಗುತ್ತಿದೆ ಎಂದರು.
ಸಕಾಲದಡಿ ಅರ್ಜಿ ಸಲ್ಲಿಸಿದ ನಾಗರೀಕರ ಅರ್ಜಿಗಳ ವಿಲೇವಾರಿ ವಿಳಂಬವಾದಲ್ಲಿ ಅಥವಾ ತಿರಸ್ಕøತವಾದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಲಭ್ಯವಿರುವ ಬಗ್ಗೆ ಸಾರ್ವಜನಿಕರಿಗೆ ಎಸ್.ಎಂ.ಎಸ್ ಸಂದೇಶ ಕಳುಹಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.
ನಾಗರಿಕರಿಗೆ ಸಕಾಲದಲ್ಲಿ ಸೇವೆ ಒದಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿ ‘ತತ್ಕಾಲ್’ ಸೇವೆಯನ್ನು ಸಕಾಲ ಸೇವೆ ವ್ಯಾಪ್ತಿಯೊಳಗೆ ತರಲಾಗುವುದು. ಸಕಾಲ ಯೋಜನೆಯಲ್ಲಿ ಸಾಕಷ್ಟು ಕೆಲಸಗಳಾಗಿದ್ದು, ಇನ್ನೂ ಉತ್ತಮ ಕೆಲಸಗಳಾಗಬೇಕಾದರೆ ಅಧಿಕಾರಿಗಳ ಮನಸ್ಥಿತಿಯನ್ನು ಬದಲಾಯಿಸಬೇಕು ಎಂದರು.
ಮಾಜಿ ಸಕಾಲ ಸಚಿವರಾದ ಸುರೇಶ್ ಕುಮಾರ್ ಅವರ ಕಲ್ಪನೆಯ ಕೂಸಾದ ‘ಸಕಾಲ’ ಯೋಜನೆಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆ ಮಾಡಿ, ಸಾರ್ವಜನಿಕರಿಗೆ ಮಹತ್ವಪೂರ್ಣ ಸೇವೆ ಸಲ್ಲಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಸಕಾಲ ಪೋಸ್ಟರ್ ಬಿಡುಗಡೆ ಮಾಡಿದರು. ಮಾರ್ಚ್ ಮಾಹೆಯಲ್ಲಿ ಸಕಾಲ ವಿಲೇವಾರಿಯಲ್ಲಿ ಮೊದಲ ಸ್ಥಾನ ಪಡೆದ ಚಿಕ್ಕಬಳ್ಳಾಪುರ, ದ್ವಿತೀಯ ಸ್ಥಾನ ಪಡೆದ ತುಮಕೂರು ಹಾಗೂ ತೃತೀಯ ಸ್ಥಾನ ಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಪ್ರಶÀಂಸನಾ ಪತ್ರವನ್ನು ವಿತರಿಸಿದರು.
ಮಾಜಿ ಸಕಾಲ ಸಚಿವರಾದ ಸುರೇಶ್ ಕುಮಾರ್ ಅವರು ಮಾತನಾಡಿ, ಈ ಮೊದಲು ಸಕಾಲ ಯೋಜನೆಯನ್ನು ವಿಶ್ವೇಶ್ವರಯ್ಯ ಗೋಪುರದಲ್ಲಿ ಉದ್ಘಾಟನೆ ಮಾಡಲಾಗಿತ್ತು. ಈ ಯೋಜನೆಯಡಿ ಸಾಕಷ್ಟು ಕೆಲಸಗಳಾಗಿದ್ದು, ಅನೇಕ ಪ್ರಶಸ್ತಿಗಳು ದೊರೆತಿವೆ. ಸಕಾಲ ಯೋಜನೆಗೆ ಯಾವುದೇ ಮಹತ್ವ ಕಡಿಮೆಯಾಗದಂತೆ ಇನ್ನಷ್ಟು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮಾತನಾಡಿ ಎಲ್ಲಾ ಜಿಲ್ಲೆಗಳು ಸಕಾಲದಡಿ ಸ್ವೀಕರಿಸಿದ ಅರ್ಜಿಗಳನ್ನು ಆದಷ್ಟು ಶ್ರೀಘ್ರವಾಗಿ ವಿಲೇವಾರಿ ಮಾಡಿ, ನಾಗರಿಕರಿಗೆ ಸೇವೆ ಸಲ್ಲಿಸಲು ಮುಂದಾಗಬೇಕು ಎಂದರು.
ಸರ್ಕಾರದ ಕಾರ್ಯದರ್ಶಿ ಪೊನ್ನುರಾಜು ಮಾತನಾಡಿ, ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಳಂಬವಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಕಾಲ ಯೋಜನೆಯನ್ನು ಆರಂಭಿಸಲಾಯಿತು. ಪ್ರಾರಂಭದಲ್ಲಿ ಮ್ಯಾನುಯಲ್‍ನಲ್ಲಿ ಅರ್ಜಿಯನ್ನು ಸ್ವೀಕರಿಸುತ್ತಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ಸೇವೆ ನೀಡಲು ವಿಳಂಬವಾಗುವುದನ್ನು ತಡೆಗಟ್ಟಲು ಡಿಜಿಟಲ್ ಸೇವೆಯನ್ನು ಪ್ರಾರಂಭಿಸಲಾಯಿತು. ಕ್ರಮೇಣವಾಗಿ ತಂತ್ರಜ್ಞಾನದ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದರು.
ಆನ್‍ಲೈನ್ ಮೂಲಕ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯಾಗಿರುವ ಖಿesz ಎಂಬ ವೇದಿಕೆಯಡಿ ಸಕಾಲ ಸಂಬಂಧಿತ ಮಾಹಿತಿಯನ್ನು ಅಳವಡಿಸಲಾಗಿದ್ದು, ಈ ವರೆಗೆ ಸುಮಾರು 1.36 ಲಕ್ಷ ವೀಕ್ಷಣೆ ಲಭ್ಯವಾಗಿರುತ್ತದೆ. ಸಕಾಲ ಮಿತ್ರ ಯೋಜನೆಯನ್ನು ಸಹ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಸಕಾಲ ಟಾಸ್ಕ್ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.
ಅಪರ ಮಿಷನ್ ನಿರ್ದೇಶಕರಾದ ಡಾ: ಬಿ.ಆರ್. ಮಮತ ಮಾತನಾಡಿ, ಸಕಾಲ ಯೋಜನೆಯು ಪ್ರಾರಂಭವಾಗಿ 10 ವರ್ಷಗಳಾಗಿದ್ದು, ಈ ವರ್ಷ ಪ್ರತಿ ಇಲಾಖೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಕಾಲ ದಶಮಾನೋತ್ಸವದ ಆಚರಣೆ ಮಾಡಲಾಗುವುದು ಎಂದರು.
ದಶಮಾನೋತ್ಸವದ ಅಂಗವಾಗಿ ವಿವಿಧ ಇಲಾಖೆಗಳಿಂದ ಪ್ರಬಂಧ, ಚಿತ್ರಕಲೆ, ಚರ್ಚಾಸ್ಪರ್ಧೆ ಹಾಗೂ ಇನ್ನಿತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರ ಸಹಭಾಗಿತ್ವವನ್ನು ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಸ್ಪರ್ಧೆ ನಡೆಸಲಾಗುವುದು ಎಂದರು.
ಈ ವರ್ಷ ಪೂರ್ತಿ ಪ್ರತಿಯೊಂದು ಇಲಾಖೆಯಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನೂತನ ಜಾಲತಾಣವನ್ನು ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.
ಸಕಾಲ ಹುಟ್ಟು ಹಾಕಿ, ಬೆಳೆಸಲು ಸಾಕಷ್ಟು ಶ್ರಮ ವಹಿಸಿ, ಸಕಾಲ ಸಚಿವರು ಎಂದೇ ಹೆಸರು ವಾಸಿಯಾಗಿರುವ ಮಾಜಿ ಸಚಿವರಾದ ಸುರೇಶ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಈ ಹಿಂದೆ ಸಕಾಲ ಮಿಷನ್ ಯೋಜನೆಯಲ್ಲಿ ಅಪರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುನೀಶ್ ಮೌದ್ಗಿಲ್, ಮನೋಜ್ ರಂಜನ್, ಶ್ಯಾಮಲಾ ಇಕ್ಬಾಲ್, ರೂಪ ಮೌದ್ಗಿಲ್, ಆಡಳಿತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಬಿ.ಎನ್. ವರಪ್ರಸಾದರೆಡ್ಡಿ, ಕೆ. ಮಥಾಯಿ, ತಾಂತ್ರಿಕ ಸಂಯೋಜನಾ ಅಧಿಕಾರಿ ಪಿ.ವಿ.ಭಟ್ ,ಎನ್‍ಐಸಿ ತಂಡದ ಶ್ರೀನಿವಾಸ್ ಇವರುಗಳನ್ನು ಗೌರವಿಸಲಾಯಿತು.
0 Comments