ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಬಿ.ಬಿ.ಎಂ.ಪಿ.ರಾತ್ರೋರಾತ್ರಿ ಮಂಡನೆ ಮತ್ತು ಬಜೆಟ್ ಲೋಪದೋಷಗಳ ಬಗ್ಗೆ ಇಂದು ಪತ್ರಿಕಾಗೋಷ್ಟಿ ಜರುಗಿತು.
ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿರವರು, ಮಾಜಿ ಮಹಾಪೌರರುಗಳಾದ ರಾಮಚಂದ್ರಪ್ಪ,ಜೆ.ಹುಚ್ಚಪ್ಪ,
ಶ್ರೀಮತಿ ಜಿ.ಪದ್ಮಾವತಿ,ಶ್ರೀಮತಿ ಗಂಗಾಬಿಕೆ ಮಲ್ಲಿಕಾರ್ಜುನ್,ಸಂಪತ್ ರಾಜ್ ,ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜು,ವಿರೋಧ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ರವರು ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.
ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿರವರು ಮಾತನಾಡಿ 83ರಿಂದ88ರವರಗೆ ಪಾಲಿಕೆ ಸದಸ್ಯನಾಗಿದ್ದೇ 35ವರ್ಷ ಶಾಸಕನಾಗಿದ್ದೇ 40ಪಾಲಿಕೆ ಬಜೆಟ್ ಮಂಡನೆ ನೋಡಿದ್ದೇನೆ.
ಪಾಲಿಕೆ ಬಜೆಟ್ ಮಂಡನೆಯಲ್ಲಿ ಪೂರ್ವಭಾವಿಯಾಗಿ ಸಂಘಸಂಸ್ಥೆಗಳ,ಅಧಿಕಾರಿಗಳು,ಜನರ ಅಭಿಪ್ರಾಯ ಸಂಗ್ರಹಿಸಿ ಬಜೆಟ್ ಮಂಡನೆ ಮಾಡುತ್ತಿದ್ದರು ಅದರೆ ಇಂದು ಆನ್ ಲೈನ್ ಮೂಲಕ ರಾತ್ರೋರಾತ್ರಿ ಮಂಡನೆ ಮಾಡಿ,ಪಾಲಿಕೆ ಬಜೆಟ್ ಮಂಡನೆ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿದೆ.
ಆನ್ ಲೈನ್ ಮತ್ತು ಅಫ್ ಲೈನ್ ಮೂಲಕ 150ಕೋಟಿ ಅಷ್ಟು ಡಬಲ್ ಬಿಲ್ಲು ಪಾವತಿ ಮಾಡಲಾಗಿದೆ.
ಮುಖ್ಯಮಂತ್ರಿಗಳು ಬಜೆಟ್ ಆನ್ನು ರದ್ದುಗೊಳಿಸಿ,ಪುನರ್ ಪರಿಶೀಲಿಸಿ ವಾಸ್ತವಿಕ ಬಜೆಟ್ ಮಂಡಿಸಬೇಕು ಎಂದು ಹೇಳಿದರು.


0 Comments