ಬೀದರ್, ಏ.14: ನಗರದ ಅಂಬಿಗರ ಚೌಡಯ್ಯ ಯುವ ಸೇನೆಯ ಕೇಂದ್ರ ಕಛೇರಿಯಲ್ಲಿ ಚಂದ್ರಶೇಖರ್ ಆಜಾದ್ ಯುವ ಸಂಘದಿ0ದ ಡಾ. ಬಿ.ಆರ್ ಅಂಬೇಡ್ಕರ್ ರವರ 131ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಅವರು ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಶಿಕ್ಷಣ ಪ್ರಬಲ ಹಾಗೂ ಪರಿಣಾಮಕಾರಿ ಅಸ್ತç ಎಂಬುದನ್ನು ಅಂದೆ ಅರಿತಿದ್ದ ಅಂಬೇಡ್ಕರ್ ಅವರು ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ ನೀಡಲು ಸಾಧ್ಯವಾಯಿತು ಎಂದು ಹೇಳಿದರು.
ದುಂಡು ಮೇಜಿನ ಪರಿಷತ್ತಿನ ಮೊದಲ ಸಭೆಯಲ್ಲಿಯೇ ಬ್ರಿಟಿಷರ ಸಲಹೆಗಳನ್ನು ನಿರಾಕರಿಸಿದ ಅವರು ನಮ್ಮ ದೇಶಕ್ಕೆ ಯಾವ ರೀತಿಯ ಸಂವಿಧಾನ ನೀಡಬೇಕು ಎಂಬುವದು ಭಾರತಿಯರಾದ ನಮಗೆ ಗೊತ್ತಿದೆ ನಿಮ್ಮ ಸಲಹೆ ನಿಮ್ಮ ಹತ್ತಿರವೇ ಇರಲಿ ಎಂದು ಖಾರವಾಗಿ ನುಡಿದಿದ್ದರು ಅಂಬೇಡ್ಕರ್.
ಜನರಿಂದಲೇ ರಚನೆಯಾಗುವ ಸರ್ಕಾರಗಳು ಹೇಗಿರಬೇಕು ಎಂದು ಚಿಂತಿಸಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ ಅಂತೆಯೇ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ, ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಯುವ ನಾಯಕರಾದ ವಿಜಯಕುಮಾರ ಅಷ್ಟೂರ್, ಚಂದ್ರಶೇಖರ್ ಆಜಾದ್ ಯುವ ಸಂಘದ ಅಧ್ಯಕ್ಷ ವಿಜಯಕುಮಾರ ಭಂಡೆ, ಯುವ ಮುಖಂಡರಾದ ಚಂದ್ರಕಾ0ತ ಹಳ್ಳಿಖೆಡಕರ್, ಕೀರಣ ತಾಂಡುಲಕರ್, ಡೇವಿಡ್ ಕೆಂಪೆ, ಗೌತಮ ನಿಜಾಂಪೂರೆ, ಅನೀಲಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

0 Comments