ಬಳ್ಳಾರಿ ಏ 21. ಬಳ್ಳಾರಿ ತಾಲ್ಲೂಕಿನ ಕೆಲ ನದಿತೀರದ ಪ್ರದೇಶಗಳಲ್ಲಿ ರಾಜಾರೋಷವಾಗಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿದೆ. ಕೆಲ ಠಾಣೆಯ ಅಧಿಕಾರಿಗಳು ಇದಕ್ಕೆ ಸಾಧ್ ನೀಡುತ್ತಾರೆ. ರಾತ್ರಿ ಸಮಯದಲ್ಲಿ ಪೋಲಿಸರು ಕಾವಲು ಇದ್ದು ದಂದೆ ನಡೆಸುತ್ತಾರೆ ಅನ್ನುವ ಅರೋಪಗಳು, ಕೆಲ ಸಾಕ್ಷ್ಯಗಳು ಹಳ್ಳಿಗಳಲ್ಲಿ ಸಿಗುತ್ತವೆ. ಅದನ್ನು ನಿಲ್ಲಿಸಲು ಎಸ್ಪಿ ಅವರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತಿದ್ದಾರೆ. ಅದು ಶ್ಲಾಘನೀಯ ವಿಚಾರ ಆದರೆ ಎಸ್ಪಿ ಅವರಿಗೆ ಟೋಪಿ ಹಾಕುತಿದ್ದಾರೆ ಕೆಲ ಠಾಣೆಯ ಅಧಿಕಾರಿಗಳು, ಅಧಿಕಾರಿಗಳು ಎಸ್ಪಿಯವರ ಮುಂದೆ ಎಲ್ಲವು ಸರಿಯಾಗಿ ನಡೆಯುತ್ತಾ ಇದ್ದಾವೆ ಯಾವುದೇ ಅಕ್ರಮ ಚಟುವಟಿಕೆಗಳು ಇಲ್ಲವೆಂದು ಹೇಳಿ ಸಾಹೇಬರುಗೆ ಟೋಪಿ ಹಾಕಲು ಮುಂದಾಗಿದ್ದಾರೆ. ಹೌದು ಸತ್ಯದ ವಿಚಾರ ಬಯಲುಗೆ ಬಂದಿದೆ,ತಾಲ್ಲೂಕಿನ ಶಂಕರ ಬಂಡೆ ಗ್ರಾಮದಲ್ಲಿ ಎಸ್ ಟಿ ಕಾಲೊನಿ ರಸ್ತೆ ಟೆಂಡರ್ ಕಾಮಗಾರಿ ಪ್ರಭಾವಿ ರಾಜಕಾರಣಿಗಳ ಸಂಬಂದಿಗಳಿಗೆ ಸಿಕ್ಕಿದೆ. ಕೆಲಸವನ್ನು ಆರಂಭಿಸಲು ಮರಳು ಬೇಕು, ಅದಕ್ಕೆ ಆ ಗ್ರಾಮ ನದಿ ತೀರ ಇದೇ, ಕಾಮಗಾರಿ ಮರಳುದಿಂದ, ಮಾಡಿದರೆ ಅನುಕೂಲ ಆಗುತ್ತಾದೆ ಎನ್ನುವ ವಿಚಾರದಲ್ಲಿ ಕಡಿಮೆ ದರದಲ್ಲಿ ಮರಳು ಪಡೆಯುವ ವಿವರವನ್ನು ಇಟ್ಟುಕೊಂಡು, ಸಂಬಂಧಿಸಿದ ಹಗರಿ ಠಾಣೆಯ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಎರಡು ಟ್ರಾಕ್ಟರ್‍ಗಳ ನಂಬರ್ ಕೊಟ್ಟಿದ್ದು ಸಹಕಾರ ಮಾಡಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದ ವಿಚಾರ ಆಗಿರುತ್ತದೆ. ಇದಕ್ಕೆ ಇಬ್ಬರು ರೈತರು ತಮ್ಮ ಟ್ರಾಕ್ಟರ್‍ಗಳನ್ನು ಹೊಟ್ಟೆ ಪಾಡಿಗೆ ಇಳಿಸಿದ್ದಾರೆ.ಎರಡು ದಿನದಿಂದ ಮರಳು ಹಾಕಿದ್ದಾರೆ. ಅಲ್ಲಿಯವರೆಗೆ ಸುಮ್ಮನೆ ಇದ್ದ ಪೋಲಿಸರು ಮಂಗಳವಾರ ರಾತ್ರೋರಾತ್ರಿ ಅಸುಂಡಿ ಗ್ರಾಮದ ಎರಡು ಟ್ರಾಕ್ಟರ್‍ಗಳು ಸೀಜ್ ಮಾಡಿದ್ದಾರೆ. ಖಾಲಿ ಇರುವ ಟ್ರಾಕ್ಟರ್‍ಗಳಿಗೆ ಮರಳು ತುಂಬಿಸಿ ಪ್ರಕರಣ ದಾಖಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲಿ ಮರಳು ತುಂಬುವ ವಿಚಾರ ಎಸ್ಪಿ ಅವರ ಗಮನಕ್ಕೆ ಹೋಗಿದೆ, ಖಡಕ್ ಅಧಿಕಾರಿಗಳ ಕಾಲಿಂಗ್, ಠಾಣೆಯ ಅಧಿಕಾರಿಗಳು ರನ್ನಿಂಗ್,ಇದರಲ್ಲಿ ಒಂದು ಟ್ವಿಸ್ಟ್ ಇದೆ ಮರಳು ಹೊಡೆಯುವ ಟ್ರಾಕ್ಟರ್‍ಗಳಿಗೆ ರಾಜಕೀಯ ಬಣ್ಣ ಪಡೆದುಕೊಂಡಿದೆ, ಇದರಲ್ಲಿ ರೈತರು ಠಾಣೆ, ನ್ಯಾಯಾಲಯಗಳ ಸುತ್ತು ಅಲೆದಾಡುವ ಸೃಷ್ಟಿ ಮಾಡಿದ್ದಾರೆ.ಈ ಮರಳು ದಂದೆ ಹಿಂದೆ ರಾಜಕಾರಣಿಗಳ, ಠಾಣೆಯ ಅಧಿಕಾರಿಗಳ ಕೈವಾಡ ಇದೆ. ಪಬ್ಲಿಕ್ ಎಸ್ಪಿ ಸಾಹೇಬರು ಗಮನಕ್ಕೆ ತಿಳಿಸುವ ವರೆಗೆ ಹೋಗಿದೆ ಪ್ರತಿ ಹಳ್ಳಿಯಲ್ಲಿ ಏನು ನಡೆಯುತ್ತದೆ ಎಂದು ದಿನದಿನ ಮಾಹಿತಿ ಪಡೆಯುವ ಪೋಲಿಸರು ಇಷ್ಟು ವರಗೆ ಕಣ್ಣು ಯಾಕೆ ಮುಚ್ಚಿ ಕೊಂಡಿದ್ದರು?? ದುಡ್ಡಿನ ವ್ಯವಹಾರ ಸರಿ ಹೋಗದೆ ಇರಬಹುದು ಎಂದು ತಿಳಿದುಬಂದಿದೆ. ರಕ್ಷಕರೆ ಭಕ್ಷಕರು ಆಗಿರಬಹುದು ಎನ್ನಲಾಗುತ್ತಿದೆ.ಖಾಲಿ ಟ್ರಾಕ್ಟರ್‍ಗೆ ಮರಳು ತುಂಬಿಸಿ ಅವರು ಮೇಲೆ ಅನ್ಯಾಯ ವಾಗಿ ಪ್ರಕರಣ ದಾಖಲೆ ಮಾಡುವ ವ್ಯವಸ್ಥೆ ಅಪಾಯ ಮಟ್ಟಕ್ಕೆ ಹೋಗುತ್ತದೆ. ಠಾಣೆಗೆ ಮುಟ್ಟಬೇಕಾಗಿರುವ % ಪರ್ಸೆಂಟೇಜ್ ಮುಟ್ಟಿಲ್ಲದಕ್ಕೆ ಇಂತಹ ಪ್ರಕರಣಗಳು ದಾಖಲೆ ಮಾಡಿ ಇರಬಹುದು??. ಇದರಲ್ಲಿ ವಯಸ್ಸು ಅಗಿರವ ಮಹಿಳೆ ಕೂಡಾ ಇದ್ದಾರೆ. ಒಟ್ಟಾರೆ ನಾಲ್ಕು ಜನರ ಮೇಲೆ ಪ್ರಕರಣ ದಾಖಲೆ ಮಾಡಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ ಅಗಿದೆ. ಈಗಲಾದರು ಎಸ್ಪಿ ಸಾಹೇಬರಿಗೆ ಕಣ್ಣು ಮುಚ್ಚದೆ ಇಲಾಖೆ ಗೌರವ ಕಾಪಾಡಬೇಕಾಗಿದೆ. ತಕ್ಷಣವೇ ರೈತರ ಟ್ರಾಕ್ಟರ್‍ಗಳನ್ನು ಬಿಡುಗಡೆ ಮಾಡಬೇಕಾಗಿದೆ,ಇಲ್ಲದಿದ್ದರೆ ಜನರು ಎಸ್ಪಿ ಅವರನ್ನು ಭೇಟಿ ಮಾಡಿ ದೂರು ಕೊಡುವ ಸಾಧ್ಯತೆ ಇದೆ. ದಯವಿಟ್ಟು ರೈತರು ಕೂಡ ಇಂತಹ ಅಕ್ರಮ ದಂದೆಗಳು ಕಾನೂನು ಬಾಹಿರ ಕೆಲಸಗಳು ಮಾಡಬಾರದು.

0 Comments