ಬಳ್ಳಾರಿ ಏ.23. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ ನೂತನವಾಗಿ ಸದಸ್ಯತ್ವ ಆಗ ಬಯಸುವವರಿಗೆ ಮತ್ತು ಸದಸ್ಯತ್ವದ ನವೀಕರಣಕ್ಕಾಗಿ ಪ್ರಕ್ರಿಯೆ ಆರಂಭವಾಗಿದೆ.ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಬಾಷ ನೇತೃತ್ವದಲ್ಲಿ ಅರ್ಜಿಗಳನ್ನು ನಿನ್ನೆಯಿಂದಲೇ ಸ್ವೀಕರಿಸಲಾಗುತ್ತಿದೆ. ಮೊದಲ ದಿನ 5 ಜನ ಇಂದು 16 ಜನ ಪತ್ರಕರ್ತರು ಸದಸ್ಯತ್ವದ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಾರಿ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುವ ಮತ್ತು ಕಡ್ಡಾಯವಾಗಿ ಆರ್ ಎನ್ ಐ ಸಂಖ್ಯೆ ಮತ್ತು ಪತ್ರಿಕಾ ಮಾಧ್ಯಮದ ಮುದ್ರಣದ ಕುರಿತು ಸ್ಷಷ್ಟವಾದ ಮಾಹಿತಿ ಒದಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಕೇಂದ್ರವನ್ನು ತೆರೆಯಲಾಗಿದ್ದು, ಅರ್ಹ ಪತ್ರಕರ್ತರು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಾಳೆ ಮತ್ತು ಸೋಮವಾರ ಅರ್ಜಿ ಸ್ವೀಕರಿಸಲು ಅವಕಾಶವಿದೆ ಎಂದೂ ಅಧ್ಯಕ್ಷರು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿ.ರವಿಕುಮಾರ್ ಮತ್ತು ಕಾರ್ಯದರ್ಶಿ ರಘುರಾಮ ಶೆಟ್ಟಿ ಅವರು ಸದಸ್ಯತ್ವ ನೋಂದಣಿ ನಿಯಮಾವಳಿಗಳ ಕುರಿತು ಮಾಹಿತಿ ನೀಡಲಿದ್ದಾರೆ. ಅರ್ಹ ಕ್ರಿಯಾಶೀಲ ಪತ್ರಕರ್ತರು 2022-2023 ನೇ ಸಾಲಿನ ಸದಸ್ಯತ್ವ ಕ್ಕಾಗಿ ರೂ.510 ಶುಲ್ಕದೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.

0 Comments