Ticker

6/recent/ticker-posts

Ad Code

Responsive Advertisement

ವಿಜಯನಗರ: ವರನಟ ಡಾ.ರಾಜ್ ಕುಮಾರ್ ಅವರ ಜಯಂತಿ ಆಚರಣೆ

ಹೊಸಪೇಟೆ(ವಿಜಯನಗರ)ಏ.24: ವಿಜಯನಗರ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಡಾ.ರಾಜ್ ಕುಮಾರ್ ಅವರ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಭಾನುವಾರದಂದು ಸರಳವಾಗಿ ಆಚರಿಸಲಾಯಿತು.

ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿಗಳಾದ ಮಹೇಶ್ ಬಾಬು ಅವರು ಪುಷ್ಪ ನಮನ ಸಲ್ಲಿಸಿ ಎಲ್ಲಾರಿಗೂ ಡಾ.ರಾಜ್ ಕುಮಾರ್ ಅವರ ಜಯಂತಿಯ ಶುಭಾಶಯಗಳನ್ನು ತಿಳಿಸಿ ನಂತರ ಅವರು ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಪ್ರಥಮ ಬಾರಿಗೆ ಡಾ.ರಾಜ್ ಕುಮಾರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರರಾದ ಗುರುಬಸವರಾಜ, ಗ್ರೇಡ್-2 ತಹಶೀಲ್ದಾರರಾದ ಮೇಘಾ, ಮರಿಯಮ್ಮನಹಳ್ಳಿಯ ಕಂದಾಯ ನಿರೀಕ್ಷಕರರಾದ ಅಂದಾನಿಗೌಡ, ವಾರ್ತಾ ಇಲಾಖೆಯ ಪ್ರ.ದ.ಸ.ರಾದ ಕೆ.ರಾಮಾಂಜನೇಯ, ವಾಹನ ಚಾಲಕರಾದ ಪಿ.ಕೃಷ್ಣ ಸ್ವಾಮಿ, ಲೋಕೇಶ, ತಾಯೇಶ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಇದ್ದರು.


Post a Comment

0 Comments

Ad Code

Responsive Advertisement