ಮಾಗಡಿ/ಬ್ಯಾಲಕೆರೆ ( ನಮ್ಮರಾಮನಗರ ಜಿಲ್ಲಾಸುದ್ದಿವಿಭಾಗ): " ಮೆ 1 ರಿಂದ 5 ರವರವಿಗೆ ನಡೆಯುವ ಶಿವಶರಣೆ ಹೊನ್ನಾದೇವಿ ನೂತನ ಗುಡಿಗೋಪುರ ಕಳಶ ಮತ್ತು ವಿಗ್ರಹಪ್ರತಿಷ್ಠಾಪನೆ ನಡೆಯಲಿದೆ" ಎಂದು ಬ್ಯಾಲಕೆರೆರಾಜಶೇಖರ್ ಹೇಳಿದರು. ಇಲ್ಲಿನ ನೂತನ ಪ್ರಾಂಗಣದ ಪತ್ರಿಕಾ ಗೋಷ್ಠಿಯಲಿ ವಿವರಣೆ ನೀಡಿ ಮಾತನಾಡಿದರು.ಶಿವಶರಣೆ ಹೊನ್ನಾದೇವಿಯ ಜಾತ್ರೆ ರಥೋತ್ಸವ ಯುಗಾದಿಹಬ್ಬದ ಮುನ್ನ ಒಂದುವಾರ ಕಾಲ ವಿಜೃಂಬಣೆಯಿಂದ ನಡೆಯುತ್ತದೆ.ದೀಪಾವಳಿ ವೇಳೆ ಕರಗಮಹೋತ್ಸವವರು ಪ್ರಸಿದ್ದಿಯಾಗಿದೆ.ರಾಜ್ಯದಲ್ಲಿ ಡಾ ಶಿವಕುಮಾರಸ್ವಾಮಿ ಹೆಸರಿನ ಪ್ರೌಢಶಾಲೆಯಿರುವುದೆಬ್ಯಾಲಕೆರೆಯಲ್ಲಿ ಮಾತ್ರ.ಶ್ರೀಗಳು 1979 ರಲ್ಲಿ ಗ್ರಾಮೀಣ ಬಸವಜಯಂತಿಯನ್ನು ಮೊಟ್ಟ ಮೊದಲಬಾರಿಗೆ ಇದೆ ಗ್ರಾಮದಿಂದ ಪ್ರಾರಂಬಿಸಿ ಸಾವಿರಾರು ಜಗಜ್ಯೋತಿ ಬಸವೇಶ್ವರರ ನಾಟಕಗಳ ಪ್ರದರ್ಶನ ನಡೆದಿದೆ.ನಾನಾ ಕಾರಣಗಳಿಂದ ಏಳುವರ್ಷಗಳು ತಡವಾಗಿ ಗುಡಿನಿರ್ಮಾಣವಾಗಿದೆ.
ಅದರ ಉದ್ಘಾಟನೆಗೆ ಹೊನ್ನಾದೇವಿ ಭಕ್ತರ ಶಾಂತಿಗ್ರಾಮ, ಸೋಮದೇವನಹಳ್ಲಿ, ರಾಣೋಜಿಪಾಳ್ಯ, ರಂಗೇಹಳ್ಳಿ, ಗುಡೇಪಾಳ್ಯ, ನಾಗಶೆಟಿಹಳ್ಲಿ,ಗೊಲ್ಲರಹಟ್ಟಿ,ಯಾಗನಹಳ್ಳಿ,ಸಿದ್ದಯ್ಯನಪಾಳ್ಯ ಮತ್ತು ಖಾಸಾ ಭಕ್ತರಿಂದ ಗುಡಿಯ ನಿರ್ಮಾಣಕಾರ್ಯ ಪೂರ್ಣಗೊಂಡಿದೆ. ಇವರೆಲ್ಲರ ಸಹಕಾರದಿಂದ ದೇವಳದ ಆಡಳಿತ ಸಮಿತಿ ನಾಲ್ಕು ದಿನ ನಡೆಯುವ ದೇವರ ಕಾರ್ಯದಲ್ಲಿ ನಿತ್ಯ ನಿರಂತರ ದಾಸೋಹ ನಡೆಸಲು ನಿರ್ಧರಿಸಿದೆ.ದೇವತಾಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತಿಸಲಾಗಿದೆ" ಎಂದು ವಿವರಗಳನ್ನು ನೀಡಿದರು. ಗ್ರಾಮದ ಮುಖಂಡರಾದ ಮರಳಸಿದ್ದಯ್ಯ,ಶಿವಣ್ಣ,ರೇವಣ್ಣ,ಹೊನ್ನಬಸವಯ್ಯ,ಎಲ್.ಎನ್.ಸ್ವಾಮಿ,ತುಮಕೂರಿನ ಮಂಜುನಾಥ್, ವೆಂಕಟಗಿರಿ ,ರಾಜಪ್ಪ,ರಾಮಚಂದ್ರ,ಚಿಕ್ಕರಾಜು,ಹರೀಶ್ ಗ್ರಾಮದ ಗಣ್ಯರು ಇದ್ದರು.

0 Comments