Ticker

6/recent/ticker-posts

Ad Code

Responsive Advertisement

BITM : BELLARY : ಬಿಐಟಿಎಂ ಕಾಲೇಜಿನಲ್ಲಿ ಐಇಇಇ-ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ

ಬಳ್ಳಾರಿ ಏ 28. ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅ0ಡ್ ಮ್ಯಾನೇಜ್ ಮೆ0ಟ್ ಕಾಲೇಜಿನ ಐಇಇಇಯ ವಿದ್ಯಾರ್ಥಿ ವಿಭಾಗವು, 23, 24ನೇ 2022ರ0ದು 2 ದಿನದ ಅ0ತರಾಷ್ಟ್ರೀಯ ಮಟ್ಟದ ಡಿಸ್ಟ್ರೀಬ್ಯೂಟೆಡ್ ಕ0ಪ್ಯೂಟಿ0ಗ್ ಅ0ಡ್ ಎಲೆಕ್ಟ್ರಿಕಲ್ ಸರ್ಕೂಟ್ಸ ಅ0ಡ್ ಎಲೆಕ್ಟ್ರಾನಿಕ್ಸ (ಐಸಿಡಿಸಿಇಸಿಇ-2022) ಸಮ್ಮೇಳನವನ್ನು, ಐಇಇಇ ಬೆ0ಗಳೂರು ಸೆಕ್ಷನ್ ಮತ್ತು ಐಇಇಇ ಇನ್ಫಾರ್ಮೇಷನ್ ಥಿಯರಿ ಸೊಸೈಟಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಡಾ.ಹಮೀದರೇಜಾ ಕರ್ಮಿ,ಪೋಲಿಟೆಕ್ನಿಕೊ ಡಿ ಮಿಲಾನೋ, ಇಟಲಿ, ಡಾ.ಜೆರಿಚೂನ್-ವಿ-ಲಿನ್, ವೆಸ್ಟ ನಾರ್ವೆ ವಿಶ್ವವಿದ್ಯಾಲಯ, ನಾರ್ವೆ.ಗೌರವ ಅತಿಥಿಗಳಾಗಿ ಡಾ.ತಿಪ್ಪಾರೆಡ್ಡಿ ವೆಲ್ಲೊರ್, ಡಾ.ಪರಮೇಶಾಚಾರಿ ಬಿ,ಡಿ. ಛೇರ್, ಬೆ0ಗಳೂರು ವಿಭಾಗ, ಐಇಇಇ, ಮೈಸೂರು. ಡಾ.ಡ್ಯಾನಿಲೋ ಪೆಲುಸಿ, ಟೆರಾಮೋ ವಿಶ್ವವಿದ್ಯಾಲಯ, ಇಟಲಿ.ಪ್ರೋ.ಕೆ.ಜೆ.ರಾಯ್ ಲಿಯು, ಸಿಇಒ ಮತ್ತು ಅಧ್ಯಕ್ಷರು ಐಇಇಇ. ಕಾಲೇಜಿನ ಪ್ರಾ0ಶುಪಾಲರಾದ ಡಾ.ಯಡವಳ್ಳಿ ಬಸವರಾಜ, ಡಾ,ಯು.ಈರಣ್ಣ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಡೀನ್, ಡಾ.ವಿ.ಸಿ.ಪಾಟೀಲ್, ಡೀನ್ ರಿಸರ್ಚ ಅ0ಡ್ ಡೆವಲಪಮೆ0ಟ್,ಪ್ರೋ.ಪ್ರಥ್ವೀರಾಜ್ ಭೋಪಾಲ್, ಉಪನಿರ್ದೇಶಕರು, ಬಿ.ಐ.ಟಿ.ಎ0 ಮತ್ತು ಟ್ರಸ್ಟಿ ಹಾಗು ಡಾ.ಯಶವ0ತ ಭೋಪಾಲ್, ನಿರ್ದೇಶಕರು, ಮ್ಯಾನೆಜ್ಮೆ0ಟ್ ಟ್ರಸ್ಟಿ,ಬಿ.ಐ.ಟಿ.ಎ0 ಇವರುಗಳ ಸಮ್ಮುಖದಲ್ಲಿ ಸಮ್ಮೇಳನದ ಉಧ್ಘಾಟನಾ ಸಮಾರ0ಭವು ಅಧ್ಧೂರಿಯಾಗಿ ಜರುಗಿತು. ಕಾರ್ಯಕ್ರಮದ ಪ್ರಾರ0ಭದಲ್ಲಿ ಇ ಅ0ಡ್ ಸಿಇ ವಿಭಾಗ ಮುಖ್ಯಸ್ಥರಾದ ಡಾ.ಕೆ.ಎ0.ಸದ್ಯೋಜಾತ ಕೆ.ಎ0 ಇವರು ಸ್ವಾಗತ ಭಾಷಣವನ್ನು ನಡೆಸಿಕೊಡುವುದರ ಮೂಲಕ ಭಾಗವಹಿಸಿದ ಸ0ಶೋಧಕರಿಗೆ, ವಿದ್ಯಾರ್ಥಿಗಳಿಗೆ ಹಾಗು ವೇದಿಕೆಯ ಮೇಲಿದ್ದ ಎಲ್ಲ ಅತಿಥಿಗಳಿಗೆ ಸ್ವಾಗತ ಕೋರಿದರು. 


  ಡಾ.ಅಬ್ದುಲ್ ಲತೀಫ್ ಹಾರೂನ್, ಸಹ ಪ್ರಾಧ್ಯಾಪಕ, ಪಬ್ಲಿಕೆಷನ್ ಛೇರ್ ಇವರು 2 ದಿವಸದ ಸಮ್ಮೇಳನದ ಮುಖ್ಯಾ0ಶ ಮತ್ತು ರೂಪರೇಷೆಯನ್ನು ತಿಳಿಸಿದರು, ಈ ಸಮ್ಮೇಳನದಕ್ಕೆ ಒಟ್ಟು 536 ಲೇಖನಗಳು ಪ್ರಪ0ಚ ಬೇರೆ ಬೇರೆ ದೇಶಗಳಿ0ದ ಬ0ದಿದ್ದು, ಅವುಗಳನ್ನು ಪರೀಶಿಲಿಸಿ ಉತ್ತಮ ಗುಣಮಟ್ಟದ 170 ಲೇಖನಗಳನ್ನು ಪ್ರೋಸಿಡಿ0ಗ್ಸಗೆ ಆಯ್ಕೆ ಮಾಡಲಾಯಿತು ಎ0ದು ತಿಳಿಸಿದರು, 
ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಪ್ರಪ0ಚದ ಅತ್ಯುನ್ನತ ಮತ್ತು ನವೀನ ತಂತ್ರಜ್ಞನಾಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿ0ದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎ0ದು ತಿಳಿಸಿದರು.ಮುಖ್ಯ ಅತಿಥಿಗಳಾದ ಡಾ.ಹಮೀದರೇಜಾ ಕರ್ಮಿಯವರು ವಿದ್ಯಾರ್ಥಿಗಳು ಇತ್ತಿಚಿನ ದಿನಗಳಲ್ಲಿ ಕ0ಟ್ರೋಲ್ ಸಿಸ್ಟಮ್,ಮೆಕಟ್ರಾನಿಕ್ಸ್ ಮತ್ತು ಕೃತಕ ಬುಧ್ಧಿವ0ತಿಕೆ ಈ ಕ್ಷೇತ್ರಗಳಲ್ಲಾದ ಬೆಳವಣೆಗೆಗಳನ್ನು ಬಗ್ಗೆ ಆಸಕ್ತಿ ತೋರಿಸುವುದರ ಮೂಲಕ ಸ್ಥಳಿಯ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಮು0ದಾಗಬೇಕೆ0ದು ಕಿವಿಮಾತು ಹೇಳಿದರು. ಗೌರವ ಅತಿಥಿಗಳಾದ ಡಾ.ತಿಪ್ಪಾರೆಡ್ಡಿವೆಲ್ಲೊರ್ ಇವರು ಅಪ್ಲಿಕೇಷನ್ಸ ಆಫ್ ಮಷಿನ್ ಲರ್ನಿ0ಗ್ ವಿಷಯದ ಕುರಿತಾದ ಉಪನ್ಯಾಸ ನೀಡಿದ್ದಲ್ಲದೆ, ಐಇಇಇಯ ವಿದ್ಯಾರ್ಥಿ ವಿಭಾಗದ ಕಾರ್ಯಕ್ಷಮತೆಯನ್ನು ಹಾಗು ಐಇಇಇ, ಬೆ0ಗಳೂರು ವಿಭಾಗದ ಸಹಯೋಗವನ್ನು ಶ್ಲಾಘಿಸಿದರು. ಇನ್ನೂಬ್ಬ ಗೌರವ ಅತಿಥಿಗಳಾದ ಡಾ.ಪರಮೇಶಾಚಾರಿ ಬಿ,ಡಿ.ಛೇರ್, ಬೆ0ಗಳೂರು ವಿಭಾಗ, ಐಇಇಇ, ಮೈಸೂರು ಇವರು ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಹಾಗು ಸೃಜನ ಶೀಲ ವೈಚಾರಿಕತೆಯನ್ನು ಬೆಳೆಸುವಲ್ಲಿ ಹಾಗು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೃಷ್ಠಿಯಲ್ಲಿಟ್ಟುಕೂ0ಡು ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಸಮ್ಮೇಳನವು ಒ0ದು,ಇದು ಮಕ್ಕಳಲ್ಲಿ ಸ0ಶೋಧನೆ ಹಾಗು ಕ್ರಿಯಾತ್ಮಕ ಚಿ0ತನೆಯನ್ನು ಬೆಳಸುವಲ್ಲಿ ಸಹಾಯ ಮಾಡುತ್ತದೆ ಎ0ದು ತಿಳಿಸಿದರು.  
ಮತೋರ್ವ ಗೌರವ ಅತಿಥಿಗಳಾದ ಡಾ.ಡ್ಯಾನಿಲೋ ಪೆಲುಸಿ ಮಾತನಾಡಿ ಐಇಇಇ ಪ್ರಪ0ಚದಾದ್ಯ0ತ ಕೈಗೊ0ಡಿರುವ ಕಾರ್ಯಕ್ರಮಗಳ, ಸದಸ್ಯತ್ವವನ್ನು ಪಡೆಯುವದರಿ0ದಾಗುವ ಉಪಯೋಗವನ್ನು ವಿದ್ಯಾರ್ಥಿಗಳಿಗೆ ಮತ್ತು ಸ0ಶೋಧಕರಿಗೆ ತಿಳಿಸಿದರು. ಡಾ.ಯು.ಈರಣ್ಣ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಡೀನ್ ಇವರು ಸಮ್ಮೇಳನದಲ್ಲಿ ತಮ್ಮ ಸ್ಪೂರ್ತಿದಾಯಕ ಭಾಷಣದೊ0ದಿಗೆ ಉತ್ಸಾಹ ತು0ಬಿದರು ಹಾಗು ಮು0ಬರುವ ದಿನಗಳಲ್ಲಿ ಈ ರೀತಿಯಾದ ಇನ್ನು ಹೇಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಭರವಸೆ ನೀಡಿದರು.
ಡಾ.ಯಶವ0ತ ಭೋಪಾಲ್, ನಿರ್ದೇಶಕರು ಮತ್ತು ಟ್ರಸ್ಠಿ ಇವರು ಪ್ರಸ್ತುತ ಸನ್ನಿವೇಶದಲ್ಲಿ ಸ0ಶೋಧನೆಯ ಅಗತ್ಯತೆ ಮತ್ತು ಮಹತ್ವವನ್ನು, ಈ ರೀತಿಯ ಸಮ್ಮೇಳನಗಳಲ್ಲಿ ಭಾಗವಹಿಸುವುದರ ಮೂಲಕ ಹೊಸ ಹೊಸ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆಸಕ್ತಿಯನ್ನು ಹೊ0ದಬೇಕೆ0ದು ಅಧ್ಯಕ್ಷಿಯ ಭಾಷಣದಲ್ಲಿ ಹೇಳಿದರು. ಈ ಸಮ್ಮೇಳನದಲ್ಲಿ ಒಟ್ಟು 534 ಲೇಖನಗಳು ಬೇರೆ ಬೇರೆ ದೇಶಗಳಾದ ಪಿಲಿಫೈನ್ಸ, ಇ0ಡೋನೇಷಿಯಾ, ಬಾ0ಗ್ಲಾದೇಶ, ಶ್ರೀಲ0ಕಾ, ಚೈನಾ, ಇಥಿಯೋಪಿಯಾಗಳಿ0ದ ಹಾಗು ಭಾರತದ ತಮಿಳನಾಡು, ಕೇರಳ, ಗೋವಾ ಮತ್ತು ಕರ್ನಾಟಕದಿ0ದಲು ಬ0ದಿದ್ದು, ಅವುಗಳನ್ನು ಪರೀಶಿಲಿಸಿ ಉತ್ತಮ ಗುಣಮಟ್ಟದ 161 ಲೇಖನಗಳನ್ನು ಪ್ರೋಸಿಡಿ0ಗ್ಸಗೆ ಆಯ್ಕೆಯಾಗಿದ್ದು, 165 ಸ0ಶೋಧನ ಲೇಖನಗಳನ್ನು ಆನ್ಲೈನ್ ಪ್ಲಾಟ್ ಫಾರ0ನಲ್ಲಿ ಸ0ಶೋಧಕರು ಮೌಖಿಕವಾಗಿ 23ರ0ದು 9 ಹಾಗು 24ರ0ದು 8 ಬೇರೆ-ಬೇರೆ ಅವಧಿಗಳಲ್ಲಿ ಪ್ರಸ್ತುತ ಪಡಿಸಿದರು ಇವುಗಳಲ್ಲಿ ಉತ್ತಮ ಲೇಖನಕ್ಕೆ ಬಹುಮಾನ ಮತ್ತು ಪ್ರಮಾಣಪತ್ರವನ್ನು ನೀಡಿ ಅಭಿನ0ದಿಸಲಾಯಿತು.

Post a Comment

0 Comments

Ad Code

Responsive Advertisement