ಬಳ್ಳಾರಿ,ಏ.28-ವೃತ್ತಿ ಸಂಘಗಳ ಅಧಿನಿಯಮ-1926 ಹಾಗೂ ಕರ್ನಾಟಕ ವೃತ್ತಿ ಸಂಘಗಳ ರೆಗ್ಯೂಲೇಷನ್-1958ರ ಅಡಿ ಬಳ್ಳಾರಿಯಲ್ಲಿ ನೂತನವಾಗಿ ನೀರು ಸರಬರಾಜು ಮತ್ತು ದುರಸ್ಥಿ ಕಾರ್ಮಿಕರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಅಯುಕ್ತರು ಈ ಕುರಿತು ಪ್ರಕಟಣೆ ನೀಡಿದ್ದು, ನೂತನ ಅಧ್ಯಕ್ಷರಾಗಿ ಟಿಎಸ್ ಮಾರೆಪ್ಪ, ಉಪಾಧ್ಯಕ್ಷರಾಗಿ ಅಂಜಿನಿ ರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಗೋಪಿ, ಕಾರ್ಯದರ್ಶಿಯಾಗಿ ರಾಮಸ್ವಾಮಿ, ಖಜಾಂಚಿಯಾಗಿ ಕೆ.ಶ್ರೀನಿವಾಸುಲು, ಎಂ.ರಾಮಾಂಜಿನೇಯಲು ಮತ್ತು ಸಹಾಯಕ ಕಾರ್ಯದರ್ಶಿಗಳಾಗಿ ಲಕ್ಷ್ಮಿ ಮತ್ತು ನಾಗಲಕ್ಷ್ಮಿ ಇವರು ನೂತನ ಪದಾಧಿಕಾರಿಗಳಾಗಿದ್ದಾರೆ. ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್ ಮತ್ತು ಕಾಂಗ್ರೆಸ್ ಯುವ ಧುರೀಣರಾದ ಬೆಣಕಲ್ ಬಸವರಾಜಗೌಡ ಅವರು ಗೌರವ ಅಧ್ಯಕ್ಷರಾಗಿದ್ದಾರೆ. ಮೇ 1 ರಂದು ನೀರು ಸರಬರಾಜು ಮತ್ತು ದುರಸ್ಥಿ ಕಾರ್ಮಿಕರ ಸಂಘದ ಉದ್ಘಾಟನೆ:ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಕ್ಲಾಸಿಕ್ ಫಂಕ್ಷನ್ ಹಾಲ್ ನಲ್ಲಿ ಬೆಳಿಗ್ಗೆ 9-30ಕ್ಕೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ನೀರು ಸರಬರಾಜು ಮತ್ತು ದುರಸ್ಥಿ ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನೀರು ಸರಬರಾಜು ಮತ್ತು ದುರಸ್ಥಿ ಕಾರ್ಮಿಕರ ಸಂಘದ ನೂತನ ಅಧ್ಯಕ್ಷ ಟಿಎಸ್ ಮಾರೆಪ್ಪ ಮತ್ತು ಪದಾಧಿಕಾರಿಗಳು ಸಾರಿಗೆ, ಪರಿಶಿಷ್ಟ ಪಂಗಡ ಅಭಿವೃದ್ಧಿ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಗಿರುವ ಬಿ.ಶ್ರೀರಾಮುಲು ಅವರು ಸಂಘದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸದಸ್ಯರೂ ಆಗಿರುವ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಿ.ನಾಗೇಂದ್ರ, ರಾಜ್ಯ ಸಭಾ ಸದಸ್ಯರಾದ ಡಾ.ಸೈಯದ್ ನಾಸಿರ್ ಹುಸೇನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಹಾನಗರ ಪಾಲಿಕೆ ಪ್ರಥಮ ಪ್ರಜೆ, ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಉಪ ಮೇಯರ್ ಮಾಬುನ್ನೀಸಾ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಂಎಸ್ ಮಂಜುಳಾ, ಮಾಜಿ ಮೇಯರ್ ವೆಂಕಟರಮಣ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಸಂಘದ ಗೌರವ ಅಧ್ಯಕ್ಷರಾದ ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಮತ್ತು ಕಾಂಗ್ರೆಸ್ ಪಕ್ಷದ ಯುವ ಧುರೀಣರಾದ ಬೆಣಕಲ್ ಬಸವರಾಜಗೌಡ ಮತ್ತಿತರರು ಭಾಗವಹಿಸಲಿದ್ದಾರೆ. ಎಲ್ಲ ಕಾರ್ಮಿಕರು ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಟಿಎಸ್ ಮಾರೆಪ್ಪ ಅವರು ಕೋರಿದ್ದಾರೆ.

0 Comments