ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪ್ರತಿ ಗುರುವಾರ ದಂತೆ ಪರಮಪೂಜ್ಯ 108 ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ಹಾಗೂ ಜಿ ಕೆ ಆಚಾರ್ಯರ ನೇತೃತ್ವದಲ್ಲಿ ವಿಶೇಷವಾಗಿ ಬೃಂದಾವನಕ್ಕೆ ಅಲಂಕಾರ, ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಸಂಜೆ ಸಮಯದಲ್ಲಿ ದೀಪೋತ್ಸವ ರಥೋತ್ಸವ ಗಜವಾಹನೋತ್ಸವ ಮತ್ತು "ದಾಸವಾಣಿ" ಕಾರ್ಯಕ್ರಮವನ್ನು ಕುಮಾರಿ- ಸುಶ್ರಾವ್ಯ ಆಚಾರ್ಯ ವೃಂದದವರು ನೆರವೇರಿಸಿದರು ಎಂದು ಕಿಶೋರಾಚಾರ್ಯ ತಿಳಿಸಿದರು,
ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರು ಮಾತನಾಡುತ್ತಾ 3-5-2022 ನೇ ಮೇ ತಿಂಗಳಿನ ಮಂಗಳವಾರ ದಂದು "ಅಕ್ಷಯ ತೃತೀಯ" ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ವಿಶೇಷ "ಶ್ರೀಗಂಧಲೇಪನ" ಅಲಂಕಾರವನ್ನು ಮಾಡಲಾಗು ತ್ತದೆ ಈ ಸೇವೆಯಲ್ಲಿ ಭಾಗವಹಿಸುವ ಭಕ್ತರು ಶ್ರೀಮಠದ ಮೊಬೈಲ್ ಈ 9449133929 ನಂಬರ್ ನ ವಾಟ್ಸಪ್ ಕ್ಯಾಟಲಾಗ್ ಮುಖಾಂತರ ಸೇವೆ ಸಲ್ಲಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ತಿಳಿಸಿದರು.


.jpeg)

0 Comments