ಅರ್ಜಿದಾರ : MOST URGENT
ಜೆ.ಎಮ್.ರಾಜಶೇಖರ
# 36 , ಅಮ್ಮ
ಮೌಂಟ್ ವ್ಯೂ ಸ್ಕೂಲ್ ಕ್ರಾಸ್
ಹುಣಸಿಕಟ್ಟಿ ರಸ್ತೆ
ರಾಣೆಬೆನ್ನೂರು 581115
ಜಿಲ್ಲಾ ಹಾವೇರಿ
9448962082
jmr65rnr@gmail.com
ಇವರಿಗೆ,
ಸಹಕಾರ ಸಂಘಗಳ ಉಪ ನಿಬಂಧಕರು
ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು
2 ನೇ ವಲಯ, ಬೆಂಗಳೂರು ನಗರ ಜಿಲ್ಲೆ
ಮಲ್ಲೇಶ್ವರಂ, ಬೆಂಗಳೂರು 560055
ಮಾನ್ಯರೇ,
ವಿಷಯ : ಕನ್ನಡ ಸಾಹಿತ್ಯ ಪರಿಷತ್ತು ಆಜೀವ ಸದಸ್ಯ ಸಭೆ ಕರೆಯಲು ಎಲ್ಲಾ ಸದಸ್ಯರಿಗೂ ನೋಂದಾಯಿತ ಅಂಚೆ ಮೂಲಕ ನೋಟೀಸು ಕಳಿಸದೆ ಏಕ ಪಕ್ಷೀಯವಾಗಿ ಅನಧಿಕೃತವಾಗಿ ಸರ್ವಸದಸ್ಯ ಸಾಮಾನ್ಯ ಸಭೆ ನಿಗದಿ ಮಾಡಿ ಕಾನೂನು ಬಾಹೀರ ಸಭೆ ನಡೆಸುವುದನ್ನು ರದ್ದು ಮಾಡುವ ಕುರಿತು ಮತ್ತು ಕಾನೂನು ಬಾಹೀರ ಬೈಲಾ ತಿದ್ದುಪಡಿ ಮಾಡುವುದನ್ನು ತಡೆ ಹಿಡಿಯುವ ಕುರಿತು,
ಉಲ್ಲೇಖ : ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸಭೆ ನೋಟೀಸು
ಮೇಲ್ಕಾಣಿಸಿದ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ನೀಡುವ ಸಾರ್ವಜನಿಕ ಹಿತಾಸಕ್ತಿ ದೂರು ಏನೆಂದರೆ, ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಆಗಿದ್ದೇನೆ. ಸದಸ್ಯತ್ವ ಸಂಖ್ಯೆ ಅಜೀವ 20925 ಆಗಿದೆ. ನನ್ನ ಮೊಬೈಲ್ ಸಂಖ್ಯೆ 9448962082 ಇರುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಕಾರ್ಯಾಲಯದಲ್ಲಿ ನೋಂದಾವಣೆಯಾಗಿದೆ ( ಪ್ರತಿ ಲಗತ್ತಿಸಿದ್ದೇನೆ). ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆಯನ್ನು ನಡೆಸುತ್ತಿರುವುದಾಗಿ ಇಂದು ದಿನಾಂಕ 22-04 -2022 ರಂದು ಬೆಳಿಗ್ಗೆ ನನಗೆ ವಾಟ್ಸಪ್ಪ್ ನಲ್ಲಿ ಹರಿದಾಡುತ್ತ ಬಂದ ಪತ್ರದಿಂದ ಸುಳಿವು ಸಿಕ್ಕಿದೆ. ದಿನಾಂಕ 01-05 -2022 ರಂದು ಕಾಗಿನೆಲ್ಲಿಯಲ್ಲಿ ಸರ್ವ ಸದಸ್ಯರ ಸಭೆ ನಡೆಸುವುದಾಗಿ ಆ ಪತ್ರವು ಸುಳಿವು ನೀಡುತ್ತದೆ. ಆ ಪತ್ರದ ಪ್ರಕಾರ ಪರಿಷತ್ತಿನ ನಿಯಮ ನಿಬಂಧನೆಗಳ ತಿದ್ದುಪಡಿ ಮಾಡುವ ತಂತ್ರ ರೂಪಿಸಿರುವುದು ಕಂಡು ಬರುತ್ತದೆ.
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಾನು ತೀವ್ರ ತಕರಾರು ಸಲ್ಲಿಸುತ್ತೇನೆ. ಕರ್ನಾಟಕ ಕೋ ಆಪರೇಟಿವ್ ಸೊಸೈಟಿಸ್ ಕಾಯ್ದೆ 1959 ರ ಪ್ರಕಾರ ಸರ್ವ ಸದಸ್ಯರ ಸಭೆ ಕರೆಯಬೇಕಾದರೆ.. ಸಭೆಯ ಬಗ್ಗೆ ಮತ್ತು ನಿಯಮ ನಿಬಂಧನೆಗಳ ತಿದ್ದುಪಡಿ ಮಾಡುವ ವಿಷಯಾಂಶಗಳ ಕುರಿತು 14 ದಿನಗಳ ಮುಂಚಿತವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನೋಂದಾಯಿತ ಸದಸ್ಯರಿಗೆ ನೋಂದಾಯಿತ ಅಂಚೆ ಮೂಲಕ ತಿಳಿಸಬೇಕು. ಆದರೆ, ಈ ನಿಯಮಾವಳಿಯನ್ನು ಪಾಲನೆ ಮಾಡಿರುವುದಿಲ್ಲ. ನನಗೆ 21-04 -2022 ರವರೆವಿಗೂ ಯಾವುದೇ ಅಂಚೆಯನ್ನು ಸಾಹಿತ್ಯ ಪರಿಷತ್ತು ನೋಂದಾಯಿತವಾಗಿ ಕಳಿಸಿರುವುದಿಲ್ಲ. ನನಗೆ ತಿಳಿದು ಬಂದಿರುವಂತೆ ಮತ್ತು ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಸರ್ವ ಸದಸ್ಯರ ಸಭೆಯ ಪತ್ರ ಹೇಳುವ ಪ್ರಕಾರ "ಕನ್ನಡ ನುಡಿ" ಪತ್ರಿಕೆಯಲ್ಲಿ ಸರ್ವ ಸದಸ್ಯರ ಸಭೆ ನಡೆಸುವ ಬಗ್ಗೆ ಮಾಹಿತಿ ಪ್ರಕಟಣೆ ಮಾಡಿರುವುದಾಗಿ ಹೇಳಲಾಗಿದೆ. ಕನ್ನಡ ನುಡಿ ಪುಸ್ತಕವೂ ಸಹ ನನಗೆ ಇದುವೆವಿಗೂ ತಲುಪಿಲ್ಲ. ಕನ್ನಡ ನುಡಿ ಕನ್ನಡ ಸಾಹಿತ್ಯ ಪರಿಷತ್ತಿನ ಮುಖವಾಣಿಯೇ ಹೊರತು ನೋಟೀಸನ್ನು ಪುಸ್ತಕದಲ್ಲಿ ಮುದ್ರಿಸಿ ಕಳಿಸಿದ್ದೇವೆಂದು ಹೇಳಲು ಅಧಿಕೃತ ಮಾನ್ಯತೆಯ ನೋಂದಾಯಿತ ಕಾನೂನಾತ್ಮಕ ಸಂಗತಿಯೂ ಅಲ್ಲ.
ನಿಯಮ ನಿಬಂಧನೆಗಳ ತಿದ್ದುಪಡಿ ಮಾಡುವಂತಹ ಘನ ವಿಷಯಾಂಶಗಳನ್ನು ಅತ್ಯಂತ ಲಘುವಾಗಿ ಕಾಣುತ್ತಿರುವ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಕರ್ನಾಟಕ ಕೋ ಆಪರೇಟಿವ್ ಸೊಸೈಟಿಸ್ ಕಾಯ್ದೆ 1959 ನ್ನು ಗೌರವಿಸುತ್ತಿಲ್ಲ. ಸರ್ವ ಸದಸ್ಯರಿಗೂ ಸರ್ವ ಸದಸ್ಯರ ಸಭೆಯ ನೋಟೀಸನ್ನು ಹದಿನಾಲ್ಕು ದಿನಗಳ ಮುಂಚಿತವಾಗಿ ನೋಂದಾಯಿತ ಅಂಚೆ ಮೂಲಕ ಕಳಿಸಿಲ್ಲ. ಯಾವುದೋ ಸಂಚಿನ ವಿಷಯಾಂಶಗಳನ್ನು ನಿಬಂಧನೆಗಳಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಸ್ವ ಹಿತಾಸಕ್ತಿಯ ಸಾಧನೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ಕಾನೂನು ರೀತ್ಯ ಮಾಹಿತಿ ನೀಡದೆ ರಹಸ್ಯವಾಗಿ ಮಾಡುತ್ತಿದ್ದಾರೆ ಎಂದು ಕಂಡು ಬರುತ್ತದೆ. ಅಲ್ಲದೇ, ವಾಟ್ಸಪ್ಪ್ ನಲ್ಲಿ ಹರಿದಾಡುತ್ತಿರುವ ಸರ್ವ ಸದಸ್ಯರ ಸಭೆಯ ಪತ್ರ ನಕಲಿಯೋ ಅಸಲಿಯೋ ತಿಳಿಯುತ್ತಿಲ್ಲ.
ಅಕಸ್ಮಾತ್ ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿ ಸರ್ವ ಸದಸ್ಯರ ಸಭೆಯನ್ನು ಮಾಡುತ್ತಿರುವುದು ಖರೇನೆ ಆಗಿದ್ದಲ್ಲಿ, ಅದು ಕಾನೂನು ಬಾಹೀರ ಆಗುತ್ತದೆ. ನೋಂದಾಯಿತ ಅಂಚೆ ಮೂಲಕ ನೋಟೀಸನ್ನು 14 ದಿನಗಳಿಂತ ಮೊದಲೇ ಸರ್ವ ಸದಸ್ಯರಿಗೂ ಕಳಿಸಬೇಕಾಗಿತ್ತು. ನನಗಂತೂ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅಧಿಕೃತವಾಗಿ ದಿನಾಂಕ 01-05 -2022 ರಂದು ಸರ್ವ ಸದಸ್ಯರ ಸಭೆ ನಡೆಯುತ್ತಿರುವ ಬಗ್ಗೆ ತಿಳಿಸಿಲ್ಲ. ನನ್ನ ಸದಸ್ಯತ್ವದ ಮೇಲೆ ಇರುವ ಮಾಹಿತಿ ಪಡೆಯುವ ಹಕ್ಕನ್ನು ಮೊಟಕು ಮಾಡಿರುವ ಬಗ್ಗೆ ದಟ್ಟವಾದ ಸಂಶಯ ಮೂಡಿದೆ. ಆದ್ದರಿಂದ ಈ ಬಗ್ಗೆ ತನಿಖೆ ಆಗಬೇಕು. ವಿಚಾರಣೆ ನಡೆಸಬೇಕು. ಅಧಿಕಾರದ ಗುಂಪು ಸ್ಥಾಪಿಸಿಕೊಂಡು ಮನಸೋ ಇಚ್ಛೆ ಆಡಳಿತ ಮಾಡುವ ಹುನ್ನಾರ, ಕಾನೂನು ಬಾಹೀರವಾಗಿದೆ. ಸರ್ವ ಸದಸ್ಯರ ಅನಧಿಕೃತ ಸಭೆ ನಡೆಸಿ ಪರಿಷತ್ತಿನ ನಿಯಮ ನಿಬಂಧನೆಗಳನ್ನು ತಿದ್ದುಪಡಿ ಮಾಡಿಕೊಳ್ಳುವುದು ಕಾನೂನು ರೀತ್ಯ ಊರ್ಜಿತ ಆಗುವುದಿಲ್ಲ. ಆದ್ದರಿಂದ, ದಿನಾಂಕ 01-05 -2022 ರಂದು ಸರ್ವ ಸದಸ್ಯರ ಸಭೆ ನಡೆಸುವುದು ನಿರ್ಧಾರ ಮಾಡಿದ್ದಲ್ಲಿ ಅದು ಅನಧಿಕೃತ ಆಗುತ್ತದೆ. ಈ ಬಗ್ಗೆ ತಮ್ಮ ಕಚೇರಿಯಿಂದ ಸೂಕ್ತ ಕ್ರಮ ಜರುಗಿಸಬೇಕಾಗಿ ಸಾರ್ವಜನಿಕ ದೂರು ನೀಡುತ್ತಿದ್ದೇನೆ.
ಧನ್ಯವಾದಗಳೊಂದಿಗೆ,
ದೂರುದಾರ
22-04 -2022
ಪ್ರತಿಗಳನ್ನು ಗೌರವ ಪೂರ್ವಕವಾಗಿ ಮತ್ತು ಕಾನೂನು ಕ್ರಮಕ್ಕಾಗಿ ಕಳುಹಿಸಲಾಗಿದೆ;
1 ) ಗೌರವಾನ್ವಿತ ರಾಜ್ಯಪಾಲರು
ರಾಜ್ ಭವನ, ರಾಜ್ ಭವನ್ ರೋಡ್,
ಬೆಂಗಳೂರು-560 001
2) ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ಬೆಂಗಳೂರು 560 001
3) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಸಹಕಾರ ಇಲಾಖೆ ಕೊಠಡಿ ಸಂಖ್ಯೆ.618,
6ನೇ ಮಹಡಿ, 3ನೇ ದ್ವಾರ, ಬಹು ಮಹಡಿ ಕಟ್ಟಡ,
ಬೆಂಗಳೂರು-01
4) ಸರ್ಕಾರದ ಮುಖ್ಯ ಕಾರ್ಯದರ್ಶಿಗಳು
ಕರ್ನಾಟಕ ಸರ್ಕಾರ ಬೆಂಗಳೂರು
5) ಗೌರವ ಕಾರ್ಯದರ್ಶಿ
ಕನ್ನಡ ಸಾಹಿತ್ಯ ಪರಿಷತ್ತು,
3 ನೇ ಮಹಡಿ, ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ
ಬೆಂಗಳೂರು 560018
6) ಜನಸ್ಪಂದನ ಕೋಶ
ಸಿಬ್ಬಂಧಿ ಮತ್ತು ಆಡಳಿತ ಸುಧಾರಣೆ ಇಲಾಖೆ
ವಿಶ್ವೇಶ್ವರಯ್ಯ ಗೋಪುರ
ಬೆಂಗಳೂರು 560001
7) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬೆಂಗಳೂರು
0 Comments