*ವಾಕಾಥಾನ್ ವಿವಿಧ ಆಸ್ಪತ್ರೆಯ ವೈದ್ಯರುಗಳು,ಸಾರ್ವಜನಿಕರು ಮತ್ತು ಆರೋಗ್ಯ ಸಿಬ್ಬಂದಿಗಳು ಫೈಟ್ ಫಾರ್ ಓಬೇಸಿಟಿ ವಾಕಾಥಾನ್*
ಸಾರ್ವಜನಿಕರು ಮತ್ತು ಆರೋಗ್ಯ ಸಿಬ್ಬಂದಿಗಳು ಓಬೇಸಿಟಿ(ಬೊಜ್ಜುತನ)ದಿಂದ ದೇಹದ ಮೇಲೆ ದುಷ್ಟಪರಿಣಾಮ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ಓಬೇಸಿಟಿ ಸಂಸ್ಥೆಯವರು *ಫೈಟ್ ಫಾರ್ ಓಬೇಸಿಟಿ ವಾಕಾಥಾನ್* ಕಾರ್ಯಕ್ರಮವನ್ನು ಹೋಟೆಲ್ ಶಾರಟಾನ್ ಮುಂಭಾಗದಿಂದ ವಾಕಥಾನ್ ಹಮ್ಮಿಕೊಂಡಿದ್ದರು.ವೈದ್ಯರು, ಸಾರ್ವಜನಿಕರು ಮತ್ತು ಆರೋಗ್ಯ ಸಿಬ್ಬಂದಿಗಳು ವಾಕಾಥಾನ್ ನಲ್ಲಿ ಪಾಲ್ಗೊಂಡಿದ್ದರು. ಆಸ್ಟೆರ್ ಸಿ.ಎಂ.ಐ ಆಸ್ಪತ್ರೆಯ ಮೆಟಬಾಲಿಕ್ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ವಾಕಥಾನ್ ಗೆ ಚಾಲನೆ ನೀಡಿದರು.
ವಿವಿಧ ಆಸ್ಪತ್ರೆಯ ವೈದ್ಯರುಗಳು ಮತ್ತು ಸಾರ್ವಜನಿಕರು ,ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಬೊಜ್ಜು ರೋಗ ನಿರ್ಣಯ
ಯುರೋಪಿಯನ್ನರಿಗೆ ಹೋಲಿಸಿದರೆ ಭಾರತೀಯರ ಬೊಜ್ಜುತನದ ವಿಶಿಷ್ಟ ಲಕ್ಷಣಗಳೆಂದರೆ ಅತಿಯಾದ ಕೇಂದ್ರ ಬೊಜ್ಜು ಅಥವಾ ಕಿಬ್ಬೊಟ್ಟೆಯ ಬೊಜ್ಜು. ಬೊಜ್ಜುತನ ನಿರ್ಣಯವನ್ನು ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಎಂಬ ವಿಧಾನದಿಂದ ನಿರ್ಣಯಿಸುತ್ತಾರೆ. ಬಿಎಂಐಯು ವ್ಯಕ್ತಿಯ ತೂಕವನ್ನು (ಕಿಲೋಗ್ರಾಂನಲ್ಲಿ) ಎತ್ತರ (ಮೀಟರ್‌ನ ವರ್ಗ)ದಿಂದ ಭಾಗಿಸಿದಾಗ ದೊರೆಯುತ್ತದೆ
BMI> 23kg/m2 ಇರುವ ವ್ಯಕ್ತಿಯು ಅಧಿಕ ತೂಕ ಮತ್ತು BMI> 25kg/m2 ನ ವ್ಯಕ್ತಿಯು ಬೊಜ್ಜುತನ ಹೊಂದಿರುತ್ತಾರೆ.
BMI> 18-23kg/m2 ನ ವ್ಯಕ್ತಿಯು ಆರೋಗ್ಯಕರ ದೇಹತೂಕ ಹೊಂದಿರುತ್ತಾರೆ.
ಆರೋಗ್ಯಕರ ತೂಕಕ್ಕೆ ಮಾಡಬೇಕಾದ ಜೀವನಶೈಲಿ ಬದಲಾವಣೆಗಳು ಆರೋಗ್ಯಕರ ಆಹಾರಕ್ರಮ ಮತ್ತು ನಿಯಮಿತ ದೈಹಿಕ ವ್ಯಾಯಾಮವು ಆರೋಗ್ಯಕರ ದೇಹದ ತೂಕಕ್ಕೆ ಮೂಲಾಧಾರ.
ಆರೋಗ್ಯಕರ ತಿನ್ನುವ ಹವ್ಯಾಸ
ತೂಕ ಕಡಿಮೆ ಮಾಡಲು ಮತ್ತು ಆರೋಗ್ಯಕರ ತೂಕ ನಿರ್ವಹಣೆಗೆ, ಆರೋಗ್ಯಕರ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು (ಸಂಕೀರ್ಣ ಕಾಬೊಹೈಡೇಟ್, ಪ್ರೊಟೀನ್, ಹಣ್ಣು, ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಹೊಂದಿರುವರ ಆಹಾರ),
ನಾವು ತಿನ್ನುವ ಆಹಾರ ಪ್ರಮಾಣವು (ಕ್ಯಾಲೊರಿಯಲ್ಲಿ), ನಮ್ಮ ವಯಸ್ಸು, ದೈಹಿಕ ಚಟುವಟಿಕೆಯ ಮೇಲೆ ಅವಲಂಬಿಸಿರುತ್ತದೆ.
ಆರೋಗ್ಯಕರ ತೂಕ ನಿರ್ವಹಣೆಗೆ ಈ ಕೆಳಗಿನ ಐದು ಆಹಾರ ವಸ್ತುಗಳನ್ನು ಮಿತವಾಗಿ ಸೇವಿಸಬೇಕು.
1. ಎಣ್ಣೆಯಲ್ಲಿ ಕರಿದ ತಿಂಡಿಗಳು. ಉದಾ: ಪಕೋಡ, ಸಮೋಸ, ಬೋಂಡ, ಚಿಪ್ಸ್ ಇತ್ಯಾದಿ. ಆಧುನಿಕ ದಿಢೀರ್ ಆಹಾರಗಳಾದ ಪಿಜ್ಜಾ, ಬರ್ಗರ್ ಮತ್ತು ಫ್ರೆಂಚ್ ಪ್ರೈ.
2. ಕೇಕ್‌ಗಳು, ಪೇಸ್ಟ್ರೀಸ್, ಬಿಸ್ಕತ್ ಮತ್ತು ಬೇಕರಿ ಪದಾರ್ಥಗಳು (ಇವು ಗಳೆಲ್ಲವೂ ಅಧಿಕ ಕ್ಯಾಲೋರಿಯುಕ್ತ).
3. ಸಕ್ಕರೆಯುಕ್ತ ಪಾನೀಯಗಳು ಮತ್ತು ರಸಗಳು (ಅಧಿಕ ಕ್ಯಾಲೊರಿ ಮತ್ತು ಫೈಬರ್ ರಹಿತ).
4. ಸಿಹಿತಿಂಡಿಗಳು, ವಿಶೇಷವಾಗಿ ಕರಿದ ಸಿಹಿತಿಂಡಿಗಳಾದ ಜಿಲೇಬಿ, ಗುಲಾಬ್ ಜಾಮೂನು, ಮೈಸೂರು ಪಾಕ್. 5. ಸಂಸ್ಕರಿಸಿದ ಆಹಾರ ವಸ್ತುಗಳು. ಉದಾ: ಮೈದಾ, ಜಾಮ್, ಜೆಲ್ಲಿ ಮತ್ತು ಪ್ಯಾಕೇಜ್ ಮಾಡಿದ ವಸ್ತುಗಳು.
ಕಡಿಮೆ ಸಂಸ್ಕರಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಿ ಧಾನ್ಯಗಳು (ಗೋಧಿ, ಕುಚ್ಚಲಕ್ಕಿ, ರಾಗಿ
ತರಕಾರಿಗಳು (ವಿವಿಧ ಬಣ್ಣಗಳವು) ದ್ವಿಧಳ ಧಾನ್ಯಗಳು, ಬೀಜ ಮತ್ತು ಪ್ರೋಟಿನ್ ಯುಕ್ತ ಪದಾರ್ಥಗಳು ಸಸ್ಯ ತ್ಯಲಗಳು (ಆಲಿವ್, ತೆಂಗಿನ ಎಣ್ಣೆ)
ಆರೋಗ್ಯಕರ ತಿನ್ನುವ ಅಭ್ಯಾಸಕ್ಕೆ ಸಲಹೆಗಳು ಆರೋಗ್ಯಕರ ಬೆಳಗಿನ ಉಪಾಹಾರ: ಉತ್ತಮ ಉಪಾಹಾರದಿಂದ ದಿನವನ್ನು ಪ್ರಾರಂಭಿಸಿ. ಇದರಿಂದ ಉಳಿದ ದಿನದ ಅವಧಿಯಲ್ಲಿ ಅತಿಯಾಗಿ ತಿನ್ನುವುದನ್ನು ತಡೆಯಬಹುದು.
ಸಣ್ಣ ಪ್ರಮಾಣದ ಊಟ ಮಾಡಿ- ನಿಧಾನವಾಗಿ ಮತ್ತು ಮಿತವಾಗಿ ತಿನ್ನಿ
ತರಕಾರಿ ಮತ್ತು ಹಣ್ಣುಗಳನ್ನು ಜಾಸ್ತಿ ತಿನ್ನಿರಿ
ಮನೆ ಊಟ ಮತ್ತು ಮನಃಪೂರ್ವಕವಾಗಿ ತಿನ್ನಿ ಬೊಜ್ಜನ್ನು ತಡೆಯಲು ಆರೋಗ್ಯಕರ ಜೀವನ ಶೈಲಿ


0 Comments